Advertisement

ಅರ್ಥಪೂರ್ಣ ಮ್ಯಾರಥಾನ್‌

03:45 AM Apr 07, 2017 | |

ಆ ದಿನ ಸಂಜೆ ನಮ್ಮ ಕ್ರೀಡಾಂಗಣದಲ್ಲಿ ಲೈನ್‌ಅಪ್‌ ಮಾಡಿ ಬಿಡೋ ಹೊತ್ತಿಗೆ ಒಂದು ಸೂಚನೆಯನ್ನು ನಮ್ಮ ಕಿವಿ ಮೇಲೆ ಹಾಕಿದ್ರು. ಅದೇನಪ್ಪಾ ಅಂದ್ರೆ, ಎಲ್ರೂ ನಾಳೆ ಬೆಳಗ್ಗಿನ ಜಾವ 4 ಗಂಟೆಗೆ ಹೊರಟು ರೆಡಿ ಆಗಿರ್ಬೇಕು, ಎಲ್ಲ ಸ್ಟೂಡೆಂಟ್ಸ್‌ ಕಡ್ಡಾಯವಾಗಿ ಬರೆಲàಬೇಕು ! ಯಾಕಪ್ಪಾ ಅಷ್ಟು ಬೇಗ ಎಲ್ಲಿಗಾದ್ರೂ ಟ್ರಿಪ್‌ ಅರೇಂಜ್‌ ಮಾಡಿಬಿಟ್ರಾ ಹೇಗೆ ಅಂತೆಲ್ಲ ನಾವು ಪಿಸುಗುಟ್ಟೋಕೆ ಶುರು ಮಾಡಿದೆವು. ಆ ದಿನ ಸಂಡೇ ಬೇರೆ. ಒಂದು ದಿನ ಸಿಗೋ ರಜೆಗೂ ಕಲ್ಲು ಹಾಕ್ತಾರಲ್ಲ ಅಂದೊRಂಡೇ ವಿಷಯ ಏನು ಅನ್ನೋ ಕುತೂಹಲದಲ್ಲಿದ್ದೆವು.

Advertisement

ಅದೇನು ಅಂದ್ರೆ, ಮಂಗಳೂರಿನ ಯೆನಪೋಯ ಯೂನಿವರ್ಸಿಟಿಯ Fight against Cancer at Cancertheon ಅನ್ನೋ ಹಾಫ್ ಮ್ಯಾರಥಾನ್‌ ಈವೆಂಟ್‌ನ ಅರೇಂಜ್‌ ಮಾಡಿದ್ರು. ಆ ಓಟದಲ್ಲಿ ಸ್ಪರ್ಧೆಗಾಗಿ ಓಡಿದವರು ಸ್ವಲ್ಪ ಜನ. ನಾವೆಲ್ಲ ಮ್ಯಾರಥಾನ್‌ನ ಎಂಜಾಯ್‌ ಮಾಡ್ಕೊಂಡು ಓಡೋದು ಅಂತ ಹೊರಟಿದ್ದೆವು.

ಯೆನಪೋಯ ಡೆಂಟಲ್‌ ಕಾಲೇಜು, ಯೆನಪೋಯ ಯೂನಿವರ್ಸಿಟಿಯ ಬೆಳ್ಳಿಹಬ್ಬದ ಸುಸಂದರ್ಭದಲ್ಲಿತ್ತು. ಇದರ ಪ್ರಯುಕ್ತ ಏರ್ಪಡಿಸಿದ್ದ ಕ್ಯಾನ್ಸೆರ್‌ಥೆನ್‌- 17 ಮಂಗಳೂರು ಹಾಫ್ ಮ್ಯಾರಥಾನ್‌ನಲ್ಲಿ ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಓಟಗಾರರು ಸಾಕ್ಷಿಯಾಗಿದ್ದರು. ಭಾಗವಹಿಸಿದಂಥ ಎಲ್ಲ ಓಟಗಾರರಿಗೂ ಶ್ವೇತವರ್ಣದಿಂದ ಕಂಗೊಳಿಸೋ ಟೀ-ಶರ್ಟ್‌ಗಳನ್ನು ನೀಡಿದ್ದರಿಂದ ಎಲ್ಲರ ಗಮನವೂ ನಮ್ಮತ್ತ ಸೆಳೆಯುವಂತೆ ಮಾಡಿತ್ತು.

ಅಲ್ಲಿ ಏರ್ಪಡಿಸಿರೋ ಈ ಹಾಫ್ ಮ್ಯಾರಥಾನ್‌ಗೆ ನಮ್ಮ ಕ್ಲಬ್‌ನಿಂದ ಸುಮಾರು ನೂರು ಮಂದಿಯಷ್ಟು ಸ್ಟೂಡೆಂಟ್ಸ್‌ಗಳು ಹಾಜರಾಗಿದ್ವಿ. ಅಂದು ಬೆಳಗ್ಗೆ ನೇಸರ ಹುಟ್ಟೋ ಮುಂಚೆನೇ ಮಂಗಳೂರಿನ ಫಾರಮ್‌ ಫಿಝಾ ಮಾಲ್‌ನಿಂದ ಸ್ಟಾರ್ಟ್‌ ಆಗೋ ಸ್ಟಾರ್ಟಿಂಗ್‌ ಪಾಯಿಂಟ್‌ನಲ್ಲಿ ನಾವಿದ್ವಿ. ಅದಾಗಲೇ ನಮ್ಮ ಹಾಗೆ ಸಾವಿರಾರು ಓಟಗಾರರಾದ ಹುಡುಗರು, ಹುಡುಗಿಯರು, ಆಂಟಿಯರು, ಅಂಕಲ್‌ಗ‌ಳು, ಅಜ್ಜಿಯಂದಿರು, ಪುಟ್ಟಮಕ್ಕಳು ಎಲ್ಲರೂ ಓಟದಲ್ಲಿ ಪಾಲ್ಗೊಳ್ಳಲು ಉತ್ಸಾಹದಾಯಕವಾಗಿ ಓಡಾಡ್ತಾ ಇದ್ದರು.

ಒಟ್ಟಾಗಿ ಅಲ್ಲಿ 21 ಕಿ.ಮೀ. ಮ್ಯಾರಥಾನ್‌, 10 ಕಿ.ಮೀ. ಮ್ಯಾರಥಾನ್‌ ಮತ್ತು 5 ಕಿ.ಮೀ. ಮ್ಯಾರಥಾನ್‌ ಅದಾಗಿತ್ತು. 21 ಕಿ.ಮೀ ಓಡೋ ಓಟಗಾರರಿಗೆ 6 ಗಂಟೆಗೆ ಸ್ಪರ್ಧೆ ಶುರುವಾದ್ರೆ, 10 ಕಿ.ಮೀ ಓಡೋ ಓಟಗಾರರನ್ನು 6.30ರ ವೇಳೆಗೆ ಸ್ಟಾರ್ಟ್‌ ಅನ್ನೋ ಸೂಚನೆಯನ್ನು ನೀಡ್ತಾ ಇದ್ರು. ಇನ್ನು ಉಳಿದದ್ದು 5 ಕಿ. ಮೀ. ಓಡೋ ಓಟಗಾರರು. ಈ ಗುಂಪಿನಲ್ಲಿ ನಾವೆಲ್ಲರೂ ಪಾಲ್ಗೊಂಡಿದ್ದೆವು. ನಮ್ಮ ಮ್ಯಾರಥಾನ್‌ ಏಳು ಗಂಟೆಗೆ ಪ್ರಾರಂಭ ಮಾಡಿಯೇಬಿಟ್ಟರು. ಅತೀ ಹೆಚ್ಚಿನ ಸಂಖ್ಯೆಯ ಮ್ಯಾರಥಾನ್‌ ಪಟುಗಳು ನಮ್ಮ ಗುಂಪಿನಲ್ಲಿ ಇದ್ದದ್ದು ವಿಶೇಷ.

Advertisement

ಇನ್ನೇನು, ಸ್ಟಾರ್ಟ್‌ ಅನ್ನೋ ಕೂಗು ಕೇಳಿದ ತಕ್ಷಣ ನಾವು ಫ‌ುಲ್‌ ರೆಡಿಯಾಗಿ ನಿಂತಿದ್ದೆವು. ನಮಗೆ ಸಿಕ್ಕಿರೋ ಚೆಸ್ಟ್‌ ನಂಬರ್‌ ಮತ್ತು ಟೀ-ಶರ್ಟ್‌ಗಳು ಕಣ್ಣಿಗೆ ಹಬ್ಬವೆನ್ನುವ ರೀತಿ ತೋರುತ್ತಿತ್ತು. ನಮ್ಮ ಓಟ ಆರಂಭವಾಗಿಯೇಬಿಟ್ಟಿತು. ನಮ್ಮ ಫ್ರೆಂಡ್ಸ್‌ ಎಲ್ಲ ಜೊತೆಯಾಗಿ ರೋಡ್‌ಫ‌ುಲ್‌ ನಮೆªà ಅನ್ನೋ ಥರಾ ಓಡಿದೆವು. ಮುಂದೆ ಇರೋರನ್ನ ಹಿಂದೆ ಹಾಕೋದೊಂದೇ ನಮ್ಮ ಕೆಲಸ. ಎಷ್ಟು ಹಿಂದೆ ಹಾಕ್ಕೊಂಡು ಹೋದ್ರೂ ಅಷ್ಟೊಂದು ಜನರಲ್ಲಿ ನಾವು ಮುಂದೆ ಹೋಗೋಕ್ಕೆ ಸಾಧ್ಯ ಆಗ್ಲೆà ಇಲ್ಲ. ಸ್ವಲ್ಪ ಓಡೋದು, ಸ್ವಲ್ಪ ನಡೆಯೋದು, ಅಲ್ಲಲ್ಲಿ ಇಟ್ಟಿದ್ದ ನೀರಿನ ಬಾಟಲ್‌ಗ‌ಳನ್ನು ಬಾಯಾರಿಕೆ ಆಗಿÇÉಾಂದ್ರೂ ಎತ್ಕೊಂಡು ಕುಡಿಯೋದು ತುಂಬಾ ಮಜಾ ಅನ್ನಿಸಿಬಿಟ್ಟಿತ್ತು. ನಮ್ಮವ್ರು ಯಾರಾದ್ರೂ ಸಿಗುವಾಗ ರೋಡಲ್ಲಿ ಜೋರಾಗಿ ಕೂಗೋದು, ಅಷ್ಟು ದೊಡ್ಡ ಸಿಟಿ ಮಧ್ಯೆ ಓಡುವಾಗ ಪಕ್ಕದಲ್ಲಿ ನಿಂತು ನೋಡೋ ಜನರ ಉತ್ಸಾಹ ತುಂಬೋ ಕಮೆಂಟ್‌ಗಳು, ಒನ್‌ ವೇ ರೋಡ್‌ ಫ‌ುಲ್‌ ನಮಗೆ ನೀಡಿದರು. ಓಡಿದ್ದು 5 ಕಿ. ಮೀ. ಆಗಿದ್ರೂ ಅರ್ಧ ಮಂಗಳೂರು ಸುತ್ತಿ ಬಂದ ಹಾಗೆ ಅನ್ನಿಸಿತ್ತು.

ಸ್ವಲ್ಪ ಸುಸ್ತಾಗ್ತಾ ಇದ್ದ ಹಾಗೆ ಯಾವಾಗ ಫಾರಮ್‌ ಫಿಝಾ ಬರೆಲà ಇಲ್ವಲ್ಲ. ಆದಷ್ಟು ಬೇಗ ಹೋಗಿ ರೀಚ್‌ ಆಗ್ಬೇಕು ಅಂತ ನಮ್ಮ ಸ್ಪೀಡ್‌ ಸ್ವಲ್ಪ ಜಾಸ್ತಿ ಮಾಡಿದೆವು. ಇದ್ರಲ್ಲಿ ಎಷ್ಟೋ ಜನ ಓಟನ್ನ ಕಂಪ್ಲೀಟ್‌ ಮಾಡ್ಲೆà ಇಲ್ಲ. ಅರ್ಧದಿಂದಲೇ ರೋಡ್‌ ಕ್ರಾಸ್‌ ಮಾಡಿ ರಿಟರ್ನ್ ಬಂದು ಬಿಡ್ತಾ ಇದ್ರು. ನಾವೂನೂ ಹೇಗೋ ಬಂದು ವಾಪಾಸು ಮಾಲ್‌ ತಲುಪಿದ್ವಿ. ಕಣ್ಣು ಮುಚ್ಚಿ ಬಿಡೋ ಹೊತ್ತಿಗೆ ನಮ್ಮ ಕೊರಳಿಗೆ ಮೆಡಲ್‌ಗ‌ಳು ಬಂದುಬಿಟ್ಟಿತ್ತು. ನಾವು ಫ‌ುಲ್‌ ಖುಷಿಯಿಂದ “ಅಷ್ಟು ಬೇಗ ರೀಚ್‌ ಆದ್ವಾ?’ ಅಂತೆಲ್ಲ ಯೋಚನೆ ಮಾಡೋವಾಗ ಅಲ್ಲಿ ಹೇಳಿದ್ರು, ಈ ಮೆಡಲ್‌ಗ‌ಳು ಮೊದಲು ರೀಚ್‌ ಆಗೋ ಒಂದು ಸಾವಿರ ಮಂದಿಗೆ ಮಾತ್ರ. ಹಾಗಾಗಿ, ನಾವು ಆ ಸಾವಿರ ಮಂದಿಗಳಲ್ಲಿ ಒಬ್ಬರಾಗಿದ್ದೆವು.

ಮುಂದೆ ಹೋಗುವಾಗ ನಮ್ಮ ಖಾಲಿ ಹೊಟ್ಟೆಗೋಸ್ಕರ ತಂಪು ಪಾನೀಯಗಳು ರೆಡಿಯಾಗಿ ಕಾಯ್ತಾ ಇತ್ತು. ಅದನ್ನು ಕುಡ್ಕೊಂಡು ಮಾಲ್‌ ಒಳಗೆ ಬೆಳಗಿನ ಉಪಾಹಾರವನ್ನು ಸೇವಿಸಲು ಬಂದೆವು. ಹೊಟ್ಟೆ ತಾಳ ಹಾಕೋಕ್ಕೆ ಶುರು ಹಚ್ಚಿತ್ತು. ಪ್ಲೇಟ್‌ ತಗೊಂಡು ತಿಂಡಿ ಬಳಿ ಬಂದೆವು. ಮೂರು- ನಾಲ್ಕು ಬಗೆಯ ತಿಂಡಿಗಳು ತಯಾರಾಗಿ ಪ್ಲೇಟಿಗೆ ಬರಲು ಕಾದು ಕುಳಿತಿದ್ದವು. ನಾವು ಅಲ್ಲಿದ್ದ ಹಣ್ಣುಗಳನ್ನು ಮಾತ್ರ ತಿಂದೆವು. ಒಟ್ಟಾಗಿ, ಎಲ್ಲ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಯೆನೆಪೋಯಾದವರು ನಮಗೆ ನೀಡಿದ್ರು.

ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟ ಯೆನಪೋಯ ಯೂನಿವರ್ಸಿಟಿಗೆ ಕೃತಜ್ಞತೆಯನ್ನು ಸಲ್ಲಿಸಲೇಬೇಕು. ಒಂದು ವಿಶೇಷ ಅನುಭವವನ್ನು ನೀಡಿತು. ನಾವೂ ಕೂಡಾ ಈ ಅರ್ಥಪೂರ್ಣ ಓಟದಲ್ಲಿ ಭಾಗವಹಿಸಿದೆವು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರ ಅಂದ್ರೆ ತಪ್ಪಾಗಲಾರದು.

ಮುಗಿಸಿ ಬರೋ ಹೊತ್ತಿಗೆ, ನಮಗೆ ಭಾಗವಹಿಸಿದ ಪ್ರಶಸ್ತಿ ಪತ್ರವನ್ನೂ ನೀಡಿದ್ರು. ನಮ್ಮ ನ್ಪೋರ್ಟ್ಸ್ ಕ್ಲಬ್‌ನ ವಿದ್ಯಾರ್ಥಿಗಳಿಗೂ ನಗದು ಬಹುಮಾನವೂ ದೊರೆಯಿತು. ಮ್ಯಾರಥಾನ್‌ ಓಡಿದ ಅನುಭವ ಮನಸ್ಸಿಗೆ ಮುದ ನೀಡಿತ್ತು. ಇಡೀ ಮಾಲ್‌ ಸುತ್ತಿ ಸುತ್ತಿ ಸುಸ್ತಾಗಿ ಬಿಟ್ಟಿದ್ದೆವು. ಮರೆಯಲಾಗದ ಈ ಅನುಭವದ ಮ್ಯಾರಥಾನ್‌ ಮುಂದೆಯೂ ನಡೆಯಲಿ. ಸಿಕ್ಕಿದ ಅವಕಾಶವನ್ನು ಉಪಯೋಗಿಸುವಂತಾಗಲಿ.

ದೀಕ್ಷಾ ಬಿ. ಪೂಜಾರಿ
ತೃತೀಯ ಬಿ.ಎ. ಪತ್ರಿಕೋದ್ಯಮ ವಿಭಾಗ
ಎಸ್‌.ಡಿ.ಎಮ್‌. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next