Advertisement
ಅವರು ಇಂದು ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನದಲ್ಲಿ ಸುದ್ಧಿಗೋಷ್ಠಿ ನಡೆಸಿದರು.
Related Articles
Advertisement
ಬಂಡವಾಳ ಹೂಡಿಕೆದಾರರ ಸಮಾವೇಶ: ನವೆಂಬರ್ 2, 3 4 ರಂದು ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಜಗತ್ತಿನಾದ್ಯಂತ ಪ್ರಮುಖ ಉದ್ಯಮಿಗಳು, ಉದ್ದಿಮೆಯ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಿದ್ದು, ಜೊತೆಗೆ 5 ಲಕ್ಷ ಕೋಟಿ ರೂ.ಗಳಿಗೂ ಹೆಚ್ವಿನ ಬಂಡವಾಳ ಹೂಡಿಕೆಯಾಗುತ್ತದೆ. ಈಗಾಗಲೇ ಬಹಳಷ್ಟು ಜನ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದು, ಅವರ ಯೋಜನೆಗಳ ಅನುಮೋದನೆಯನ್ನೂ ಮಾಡಲಾಗಿದೆ. ಭರವಸೆ ಪತ್ರವನ್ನೂ ನಾಳೆ ವಿತರಿಸಲಿದ್ದು, ಮುಂದಿನ 3 ದಿನಗಳ ಕಾಲ ಹಲವಾರು ಕ್ಷೇತ್ರಗಳಲ್ಲಿ ಆಗುತ್ತಿರುವ ಪ್ರಗತಿ ಹಾಗೂ ನವೀಕರಿಸಬಹುದಾದ ಇಂಧನ, ಸೆಮಿಕಂಡಕ್ಟರ್, ಏರೋಸ್ಪೇಸ್, ರಕ್ಷಣಾ ಕ್ಷೇತ್ರ ಮುಂತಾದ ಪ್ರಮುಖ ಕ್ಷೇತ್ರಗಳ ಸವಾಲುಗಳು ಹಾಗೂ ಬೆಳವಣಿಗೆಯ ಬಗ್ಗೆ ಚರ್ಚಾ ಗೋಷ್ಠಿಗಳು ನಡೆಯಲಿವೆ. ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಪರಿಣಿತರು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮ ರಾಜ್ಯದಲ್ಲಿ ಮುಂದಿನ 5 ವರ್ಷಗಳ ಕಾಲ ಆರ್ಥಿಕ ಚಟುವಟಿಕೆಗಳ ಕುರಿತ ದಿಕ್ಸೂಚಿಯಾಗಲಿದೆ. ಇದರಲ್ಲಿಯೂ ಆಸಕ್ತರು, ಉದ್ಯಮಿಗಳು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳಿಗೆ ಅವಕಾಶವಿದೆ. ಹೆಸರುಗಳನ್ನು ನೋಂದಾಯಿಸಿಕೊಂಡು ಭಾಗವಹಿಸಬೇಕು. ನೋಂದಣಿ ಮೂಲಕ ಮಾತ್ರವೇ ಸಮಾವೇಶಕ್ಕೆ ಪ್ರವೇಶವಿದೆ ಎಂದರು.
ತನಿಖೆ: ಇನ್ಸ್ಪೆಕ್ಟರ್ ನಂದೀಶ್ ಆತ್ಮಹತ್ಯೆ ಪ್ರಕರಣದ ತನಿಖೆ ಪ್ರಾರಂಭಿಸಲು ಡಿಜಿಪಿ ಅವರಿಗೆ ಸೂಚನೆ ನೀಡಲಾಗಿದೆ. ಸಂಪೂರ್ಣ, ವಿಸ್ತೃತ ತನಿಖೆ ಕೈಗೊಳ್ಳಲು ತಿಳಿಸಿದ್ದೇನೆ ಎಂದರು.
ವ್ಯಾಖ್ಯಾನ ಮಾಡುವುದಿಲ್ಲ: ಸಿದ್ದರಾಮಯ್ಯ ಅವರು ಸಾಲ ಪಡೆದಿರುವ ಬಗ್ಗೆ ಪತ್ರಿಕೆ ಯಲ್ಲಿ ಓದಿ ನನ್ನ ಗಮನಕ್ಕೆ ಬಂದಿದೆ. ಯಾವುದೇ ಆದರೂ ವ್ಯವಸ್ಥಿತವಾಗಿ ತನಿಖೆಯಾಗಬೇಕು. ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಕೊಟ್ಟರೆ ಆ ಪ್ರಕ್ರಿಯೆ ಯನ್ನು ಪ್ರಾರಂಭ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನಾನು ವಿರೋಧ ಪಕ್ಷದ ರೀತಿಯಲ್ಲಿ ಯಾವುದೇ ವ್ಯಾಖ್ಯಾನ ಮಾಡುವುದಿಲ್ಲ. ಅವರಿಗೆ ಆಧಾರ ರಹಿತ ವಾಗಿ ವ್ಯಾಖ್ಯಾನ ಮಾಡುವ ರೂಢಿ ಇದೆ. ನಾನು ಹಾಗೆ ಮಾಡುವುದಿಲ್ಲ. ಸತ್ಯಹಿರಗೆ ಬರಲಿ ಎಂದರು.
ಕಾದು ನೋಡಿ: ಸೋಲಾರ್ ಹಗರಣ ತನಿಖೆಯಾಗುವುದೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಕಾದು ನೋಡಿ ಎಂದರು.