Advertisement

ವಿದ್ಯಾರ್ಥಿಗಳ ನೆರವಿಗೆ ಎಂಇಎ

12:57 AM Feb 03, 2019 | |

ನವದೆಹಲಿ: ಅಮೆರಿಕದ ಸ್ಟೂಡೆಂಟ್ ವೀಸಾ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ 129 ಮಂದಿ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ವಿದೇಶಾಂಗ ಇಲಾಖೆ ಧಾವಿಸಿದೆ. ಅಮೆರಿಕದ ದೂತಾವಾಸ ಕಚೇರಿಯೊಂದಿಗೆ ಮಾತುಕತೆ ನಡೆಸಿರುವ ವಿದೇಶಾಂಗ ಇಲಾಖೆ, ಬಂಧಿತ ವಿದ್ಯಾರ್ಥಿಗಳ ಕುರಿತು ಕಳವಳ ವ್ಯಕ್ತಡಿಸಿದೆ. ಜತೆಗೆ, ಕೂಡಲೇ ಅವರಿಗೆ ಕಾನ್ಸುಲರ್‌ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೋರಿದೆ.

Advertisement

ನಕಲಿ ವಿವಿಗಳ ಹೆಸರಲ್ಲಿ ವಿದ್ಯಾರ್ಥಿ ವೀಸಾಗಳನ್ನು ನೀಡಿ, ಹಲವರನ್ನು ಅಮೆರಿಕಕ್ಕೆ ಕರೆಸಿಕೊಂಡು, ಅಲ್ಲೇ ಉದ್ಯೋಗ ಮುಂದುವರಿಸುವಂತೆ ಮಾಡಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ತದನಂತರ, ವಿದ್ಯಾರ್ಥಿ ವೀಸಾ ವಿತರಿಸಿ ವಂಚಿಸಿದವರೂ ಸೇರಿದಂತೆ ವೀಸಾ ಪಡೆದ ಹಲವು ವಿದ್ಯಾರ್ಥಿಗಳನ್ನೂ ಬಂಧಿಸಲಾಗಿದೆ. ಹೀಗಾಗಿ, ವಿದೇಶಾಂಗ ಇಲಾಖೆ ಮಧ್ಯಪ್ರವೇಶಿಸಿ, ವಂಚನೆ ಮಾಡಿದ ದುಷ್ಕರ್ಮಿಗಳನ್ನು ಹಾಗೂ ವೀಸಾ ಪಡೆದು ವಂಚನೆಗೊಳಗಾದ ವಿದ್ಯಾರ್ಥಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದು ಎಂದು ಅಮೆ ರಿಕದ ರಾಯಭಾರ ಕಚೇರಿಗೆ ಮನವಿ ಮಾಡಿದೆ.

ಈವರೆಗೆ ಸುಮಾರು 30 ವಿದ್ಯಾರ್ಥಿಗಳು ಭಾರತದ ರಾಯಭಾರ ಕಚೇರಿಯನ್ನು ಸಂಪ ರ್ಕಿಸಿ, ಅಳಲು ತೋಡಿಕೊಂಡಿದ್ದಾರೆ. ಶನಿವಾರ ವಿದೇಶಾಂಗ ಇಲಾಖೆಯು ಇಂಥ ವಿದ್ಯಾರ್ಥಿ ಗಳ ಸಹಾಯಕ್ಕಾಗಿ 24/7 ಹಾಟ್‌ಲೈನ್‌ ಅನ್ನು ತೆರೆದಿದೆ. ಜತೆಗೆ, +1-2023221190 ಮತ್ತು +1-2023402590 ಸಂಖ್ಯೆಯ ಸಹಾಯ ವಾಣಿಯನ್ನೂ ಆರಂಭಿಸಿದ್ದು, ಸಂಕಷ್ಟದಲ್ಲಿ ರುವ ವಿದ್ಯಾರ್ಥಿಗಳು ಮತ್ತು ಅವರ ಸಂಬಂ ಧಿಕರು ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next