ಹೊಸದಿಲ್ಲಿ: ವಾಯುದಾಳಿ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಬುಧವಾರ ಪಾಕಿಸ್ಥಾನದ ಡ್ಯೆಪುಟಿ ಹೈಕಮಿಷನರ್‌ಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದೆ.
ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ಪಾಕಿಸ್ಥಾನದ ಡ್ಯೆಪುಟಿ ಹೈ ಕಮಿಷನರ್ ಸಯ್ಯದ್ ಹೈದರ್ ಶಾ ಅವರಿಗೆ ಸಮನ್ಸ್ ನೀಡಲಾಗಿದೆ.
ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೊಡೆದುರುಳಿಸಲಾದ ಮಿಗ್ ವಿಮಾನದಲ್ಲಿದ್ದ ನಾಪತ್ತೆಯಾಗಿರುವ ಪೈಲಟ್ ಬಗ್ಗೆಯೂ ಮಾಹಿತಿ ಕೇಳಲಾಗಿದೆ ಎಂದು ವರದಿಯಾಗಿದೆ.
ಭಾರತದ ವಿಮಾನವನ್ನು ಹೊಡೆದುರಳಿಸಿದ್ದು, ಪೈಲಟ್‌ನನ್ನು ವಶಕ್ಕೆ ಪಡೆದಿದ್ದೇವೆ ಎಂದು ಪಾಕ್ ಸೇನಾ ಅಧಿಕಾರಿಗಳು ಮಾಧ್ಯಮಗಳ ಎದುರು ಹೇಳಿಕೊಂಡಿದ್ದರು. ನಾಪತ್ತೆಯಾಗಿರುವ ಪೈಲಟ್ ಪಾಕ್ ಸೇನಾಪಡೆಯ ವಶದಲ್ಲಿರುವ ಫೋಟೋಗಳು ಹರಿದಾಡುತ್ತಿವೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.