Advertisement

Me Too: ಕೇರಳದಲ್ಲಿ ಮತ್ತೊಬ್ಬ ನಟನ ವಿರುದ್ಧ ಮೀ ಟೂ ಪ್ರಕರಣ!

09:47 PM Oct 01, 2024 | Team Udayavani |

ಕೊಚ್ಚಿ: ನಟ ಜಾಫ‌ರ್‌ ಇಡುಕ್ಕಿ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ನ್ಯಾ|ಹೇಮಾ ವರದಿ ಬಿಡುಗಡೆಯಾದ ಬಳಿಕ ಮತ್ತೂಬ್ಬ ನಟನ ಮೇಲೆ ಪ್ರಕರಣ ದಾಖಲಾದಂತಾಗಿದೆ.

Advertisement

ಒಂದು ವರ್ಷದ ಹಿಂದಿನ ಘಟನೆಯನ್ನು ಆಧರಿಸಿ ನಟಿಯೊಬ್ಬರು ಆನ್ಲೈನ್‌ ನಲ್ಲಿ ದೂರು ನೀಡಿದ್ದಾರೆ. ಈ ಮೊದಲು ನಟಿ 7 ಜನರ ವಿರುದ್ಧ ಅನುಚಿತ ವರ್ತನೆಯ ದೂರು ನೀಡಿದ್ದರು. ಇದೀಗ ಜಾಫ‌ರ್‌ ಅವರ ಹೆಸರನ್ನು ಸೇರಿಸಿದ್ದು, ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಯೂಟ್ಯೂಬ್‌ನಲ್ಲೂ ಈ ಬಗ್ಗೆ ಮಾತನಾಡಿರುವ ನಟಿ ಬಾಲಚಂದ್ರ ಮೆನನ್‌ ವಿರುದ್ಧವೂ ಆರೋಪ ಮಾಡಿದ್ದರು. ಬಾಲಚಂದ್ರ ಮೆನನ್‌ ಯೂಟ್ಯೂಬ್‌ ವಿಡಿಯೋಗಳ ಮೂಲಕ ನಮಗೆ ಬ್ಲಾಕ್‌ಮೇಲ್‌ ಮಾಡಲಾಗುತ್ತಿದೆ ಎಂದು  ಪೊಲೀಸರಿಗೆ  ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next