Advertisement

ಎಂಡಿಎಫ್‌ಎ ಫುಟ್ಬಾಲ್‌:HDFC ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ

02:18 PM Mar 13, 2018 | |

ಮುಂಬಯಿ: ಮಹಾರಾಷ್ಟ್ರ ಜಿಲ್ಲಾ ಫುಟ್ಬಾಲ್‌ ಅಸೋಸಿಯೇಶನ್‌ ವತಿಯಿಂದ ಪ್ರತೀ ವರ್ಷ ಗಣರಾಜ್ಯೋತ್ಸವದ ನಿಮಿತ್ತ ಆಯೋಜಿಸುವ ನಿತ್ತು ಮೆಮೋರಿಯಲ್‌ ಫುಟ್ಬಾಲ್‌ ಪಂದ್ಯಾಟವು ಇತ್ತೀಚೆಗೆ ಎರಡು ದಿನಗಳ ಕಾಲ ನಾಕೌಟ್‌ ಮಾದರಿಯಲ್ಲಿ ಪರೇಲ್‌ನ ಸೈಂಟ್‌ ಕ್ಸೇವಿಯರ್ ಮೈದಾನದಲ್ಲಿ ನಡೆಯಿತು.

Advertisement

ಪಂದ್ಯಾಟದಲ್ಲಿ ಮುಂಬಯಿಯ ಸುಮಾರು ಹದಿನಾರು ತಂಡಗಳು ಪಾಲ್ಗೊಂಡಿದ್ದು, ಫೈನಲ್‌ನಲ್ಲಿ ಹೆಚ್ಚಿನ ಕನ್ನಡಿಗರ ಆಟಕಾರರು ಇರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ತಂಡ ಮತ್ತು ಮಿಲ್ಲರ್ ನ್ಪೋರ್ಟ್ಸ್ ಕ್ಲಬ್‌ ತಂಡಗಳು ಸೆಣಸಾಡಿತು. ಅಂತಿಮವಾಗಿ ಎಚ್‌ಡಿಎಫ್‌ಸಿ ತಂಡವು 3-0 ಅಂತರಗಳಿಂದ ಮಿಲ್ಲರ್‌ ನ್ಪೋರ್ಟ್ಸ್ ಕ್ಲಬ್‌ ತಂಡವನ್ನು ಭರ್ಜರಿಯಾಗಿ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ವಿಜೇತ ತಂಡದ ಪರವಾಗಿ ಉತ್ತಾಂಕರ್‌, ತಿರೋಯ್‌ ಅಲ್ಮೇಡಾ, ಬ್ಲಾಸಿ ಫೆರ್ನಾಂಡಿಸ್‌ ಅವರು ತಲಾ ಒಂದೊಂದು ಗೋಲು ಹೊಡೆದರು. ತಂಡದ ತರಬೇತುದಾರರುಗಳಾದ ದೇವದಾಸ್‌ ಶ್ರೀಯಾನ್‌ ಮತ್ತು ಜೂಲಿಯನ್‌ ಡಿಸಿಲ್ವಾ ಅವರು ಉತ್ತಮವಾಗಿ ಆಡಿ ಪ್ರಶಸ್ತಿಯನ್ನು ಪಡೆದ  ಎಚ್‌ಡಿಎಫ್‌ಸಿ ತಂಡವನ್ನು ಅಭಿನಂದಿಸಿದರು.  ಕನ್ನಡಿಗ ಆಟಗಾರುಗಳಾದ ಸಂದೇಶ್‌ ಪೂಜಾರಿ, ತುಷಾರ್‌ ಅಂಚನ್‌, ಸಿದ್ಧಾರ್ಥ್ ಪುತ್ರನ್‌, ಪ್ರಖ್ಯಾತ್‌ ಶೆಟ್ಟಿ ಇವರು ಉತ್ತಮವಾಗಿ ಆಡಿ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ತಂಡದ ಮ್ಯಾನೇಜರ್‌ ಆಗಿ ವಾಲ್ಟರ್‌ ಇವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next