Advertisement
ಜಯದೇವ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಚಾಮ ರಾಜಪೇಟೆಯಲ್ಲಿರುವ ಸಂಘದ ಕಚೇರಿಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಸೋಮ ವಾರ ಪಾರ್ಥಿವ ಶರೀರವನ್ನು ಅವರ ಹುಟ್ಟೂರು ಮೈಸೂರಿಗೆ ಕೊಂಡೊಯ್ದು ಅಲ್ಲಿನ ರುದ್ರಭೂಮಿಯಲ್ಲಿ ಸಂಜೆ 3 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ.
Related Articles
* 1950ರ ದಶಕದಲ್ಲಿ ಆರ್ಎಸ್ಎಸ್ ವಿಚಾರ ಧಾರೆಯತ್ತ ಆಕರ್ಷಿತ
* ತುಮಕೂರಿನಲ್ಲಿ ಅಲ್ಪಕಾಲ ಪ್ರಚಾರಕ ರಾಗಿ ಸೇವೆ
* 1960ರಿಂದ 1974ರ ವರೆಗೆ ಬೆಂಗಳೂರು ಕಾರ್ಯವಾಹ ಜವಾಬ್ದಾರಿ
* 2002ರಿಂದ ಸಹ ಕ್ಷೇತ್ರೀಯ ಪ್ರಚಾರಕ ರಾಗಿ ನಿಯುಕ್ತಿ
* 2004ರಲ್ಲಿ ಕ್ಷೇತ್ರೀಯ ಪ್ರಚಾರಕ
* 2009ರಿಂದ ಅಖೀಲ ಭಾರತೀಯ ಕಾರ್ಯ ಕಾರಿಣಿ ಸದಸ್ಯರಾಗಿ ಜವಾಬ್ದಾರಿ
* 2012ರಲ್ಲಿ ಅಖೀಲ ಭಾರತೀಯ ಕಾರ್ಯ ಕಾರಿಣಿಯ ಆಮಂತ್ರಿತ ಸದಸ್ಯರಾಗಿ ನಿಯುಕ್ತಿ
* 2015ರ ಮಾರ್ಚ್ ಬಳಿಕ ಹಿರಿಯ ಪ್ರಚಾರಕರಾಗಿ ಮಾರ್ಗದರ್ಶನ
Advertisement
ಕುಶಲ ಸಂಘಟಕರೆಂದೇ ಖ್ಯಾತಿರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಓರ್ವ ಕುಶಲ ಸಂಘಟಕ ಎಂದೇ ಜನಪ್ರಿಯರಾಗಿದ್ದ ಮೈಸೂರು ಚನ್ನಬಸಪ್ಪ ಜಯದೇವ (ಮೈ.ಚ.ಜಯದೇವ) ಅವರು 1932 ರ ಫೆ. 18 ರಂದು ಮೈಸೂರಿನಲ್ಲಿ ಜನಿಸಿದರು. ಚನ್ನಬಸಪ್ಪ-ಭದ್ರಮ್ಮ ದಂಪತಿಯ ನಾಲ್ವರು ಮಕ್ಕಳ ಪೈಕಿ ಕೊನೆಯವರು ಜಯದೇವ. ಮೈಸೂರಿನಲ್ಲಿ ಬಿಎಸ್ಸಿ ಪದವಿ ಪೂರೈಸಿದ ನಂತರ ಕಾನೂನು ವ್ಯಾಸಂಗ ಮಾಡಿದ ಅವರು 1950ರ ದಶಕದಲ್ಲಿ ಆರ್ಎಸ್ಎಸ್ ವಿಚಾರಧಾರೆಯತ್ತ ಆಕರ್ಷಿತರಾಗಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡರು. ತುಮಕೂರಿನಲ್ಲಿ ಅಲ್ಪಕಾಲ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಎಚ್ಎಂಟಿ ಮತ್ತು ಹಿಂದುಸ್ತಾನ್ ಗ್ಯಾರೇಜ್ ಮೋಟಾರ್ನಲ್ಲಿ ವ್ಯವಸ್ಥಾಪಕರಾಗಿಯೂ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. 1960ರಲ್ಲಿ ಆರ್ಎಸ್ಎಸ್ ಬೆಂಗಳೂರು ಮಹಾನಗರ ಕಾರ್ಯವಾಹ ಜವಾಬ್ದಾರಿ ಸ್ವೀಕರಿಸಿ 1974ರ ತನಕ ಸುದೀರ್ಘ ಸೇವೆ ಸಲ್ಲಿಸಿದ್ದರು.1965ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ಸ್ಥಾಪನೆಯಲ್ಲಿ ಮೈ.ಚ.ಜಯದೇವ ಮಹತ್ವದ ಪಾತ್ರ ವಹಿಸಿದ್ದರು. 1965ರಿಂದ 1995ರವರೆಗೆ ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ವ್ಯವಸ್ಥಾಪಕರಾಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ ಮತ್ತು ಸೇವೆಯ ಮೂಲಕ ಪರಿಷತ್ ರಾಜ್ಯಾದ್ಯಂತ ವ್ಯಾಪಿಸುವಲ್ಲಿ ಶ್ರಮಿಸಿದರು. ನೇಪಥ್ಯಕ್ಕೆ ಸರಿಯುತ್ತಿದ್ದ ರಾಷ್ಟ್ರೀಯ ವಿಚಾರಧಾರೆಗಳನ್ನು ರಾಜ್ಯದಲ್ಲಿ ಪಸರಿಸುವ ಉದ್ದೇಶದಿಂದ ರಾಷ್ಟ್ರೀಯ ದೃಷ್ಟಿಕೋನದ ಸಾಹಿತ್ಯ ರಚನೆ ಕಾರ್ಯವನ್ನು ಪ್ರಾರಂಭಿಸಿ, ಅದಕ್ಕಾಗಿ ನೂರಾರು ಯುವ ಲೇಖಕರನ್ನು ರೂಪಿಸಿದ್ದರು. ಇದಕ್ಕಾಗಿ ಭಾರತ-ಭಾರತಿ ಪುಸ್ತಕ ಮಾಲಿಕೆ ಎಂಬ ನೂತನ ಯೋಜನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗ ನಡೆಸಿದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ತಂಡದಲ್ಲಿ ಸತ್ಯಾಗ್ರಹ ಮಾಡಿ 1975ರ ನವೆಂಬರ್ನಲ್ಲಿ ಜೈಲುವಾಸ ಅನುಭವಿಸಿದ ಜಯದೇವ ಅವರು, 1977ರ ಮಾ. 22ರಂದು ಯಾದವರಾವ್ ಜೋಶಿ ಅವರೊಂದಿಗೆ ಬಿಡುಗಡೆಯಾದರು. ಬಾಳಾ ಸಾಹೇಬ ದೇವರಸ್, ಕು.ಸೀ. ಸುದರ್ಶನ್, ದತ್ತೋಪಂತ್ ಟೆಂಗಡಿ, ಅಟಲ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು, ಎಲ್ಲಾ ಪಕ್ಷಗಳ ಮುಖಂಡರು, ಸಂತರು, ಸ್ವಾಮೀಜಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅತ್ಯುತ್ತಮ ಮಾರ್ಗದರ್ಶಕ: ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅನಾಥ ಶಿಶುನಿವಾಸ, ಅಬಲಾಶ್ರಮ.. ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗೆ ಜಯದೇವ ಅವರು ಮಾರ್ಗದರ್ಶಕರಾಗಿದ್ದರು. ಈ ಎಲ್ಲ ಸಂಸ್ಥೆಗಳು ಸ್ವತಂತ್ರವಾಗಿ ತನ್ನ ಮೂಲ ಉದ್ದೇಶದಂತೆ ಕೆಲಸ ಮಾಡಲು ಪ್ರೇರೇಪಣೆ ನೀಡಿದರು. ಆರ್ಎಸ್ಎಸ್ ಪ್ರೇರಿತ ಸಂಸ್ಥೆ ವನವಾಸಿ ಕಲ್ಯಾಣ ಆಶ್ರಮವು ಕರ್ನಾಟಕದಲ್ಲಿ ರೂಪುಗೊಂಡ ಪ್ರಾರಂಭದ ದಿನದಿಂದಲೂ ಅದರ ಸಂಘಟನಾತ್ಮಕ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದರು. ಅವಿವಾಹಿತರಾಗಿಯೇ ಉಳಿದು 4 ದಶಕಗಳ ಕಾಲ ಸುದೀರ್ಘ ಸಾಮಾಜಿಕ ಜೀವನ ನಡೆಸಿದ ನಂತರ 1995ರಲ್ಲಿ ಸಂಘದ ಪ್ರಚಾರಕರಾಗಿ ನಿಯುಕ್ತರಾದರು. ಬಳಿಕ ಕೇಶವಕೃಪಾವನ್ನು ಕೇಂದ್ರವಾಗಿಸಿಕೊಂಡು ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡಿದರು. ನನ್ನ ಗುರುಗಳ ಸ್ಥಾನದಲ್ಲಿದ್ದ ಮೈ.ಚ.ಜಯದೇವ ಅವರು ಆರ್ಎಸ್ಎಸ್ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಿದರು. ತಮ್ಮ ಅಗಾಧ ವಿದ್ವತ್ತನ್ನು ಕಾರ್ಯಕರ್ತರಿಗೆ, ಸ್ವಯಂ ಸೇವಕರಿಗೆ ಧಾರೆ ಎರೆಯುವ ಮೂಲಕ ತಮ್ಮ ಜೀವನವನ್ನೇ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಸಮರ್ಪಿಸಿದ ಹಿರಿಯ ಚೇತನ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯದಲ್ಲಿ ಆರ್ಎಸ್ಎಸ್ ಕಟ್ಟಿ ಬೆಳೆಸುವಲ್ಲಿ ಮೈ.ಚ.ಜಯದೇವ ಅವರ ಪಾತ್ರ ದೊಡ್ಡದು. ಅವರ ಹಠಾತ್ ನಿಧನ ಸಂಘಟನೆ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟ. ವಿದ್ಯಾರ್ಥಿ ದಿಸೆಯಿಂದಲೇ ಆರ್ಎಸ್ಎಸ್ ಸಿದ್ಧಾಂತ ಮೈಗೂಡಿಸಿಕೊಂಡಿದ್ದ ಅವರು, ಎಂದಿಗೂ ನಂಬಿದ ತತ್ವ-ಸಿದ್ಧಾಂತಗಳೊಂದಿಗೆ ರಾಜಿಯಾದವರಲ್ಲ.
-ಜಗದೀಶ್ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ