ವಾಷಿಂಗ್ಟನ್:ವಿಶ್ವದ ಅತೀ ದೊಡ್ಡ ಫಾಸ್ಟ್ ತಯಾರಕ ಸಂಸ್ಥೆಯಾದ ಮೆಕ್ ಡೊನಾಲ್ಡ್ಸ್ ಗೂ ಆರ್ಥಿಕ ಹಿಂಜರಿಕೆಯ ಬಿಸಿ ತಟ್ಟಿದ್ದು, ಈ ನಿಟ್ಟಿನಲ್ಲಿ ಮೆಕ್ ಡೊನಾಲ್ಡ್ಸ್ ಅಮೆರಿಕದಲ್ಲಿರುವ ತನ್ನ ಎಲ್ಲಾ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇದನ್ನೂ ಓದಿ:ಪರಿಷತ್ ಗೆ ರಾಜೀನಾಮೆ ಕೊಟ್ಟು ಶಿವಮೊಗ್ಗದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ: ಆಯನೂರು ಘೋಷಣೆ
ಮೆಕ್ ಡೊನಾಲ್ಡ್ಸ್ ಕಳೆದ ವಾರ ಅಮೆರಿಕದಲ್ಲಿರುವ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ್ದು, ಸೋಮವಾರದಿಂದ ಬುಧವಾರದವರೆಗೆ ವರ್ಕ್ ಫ್ರಂ ಹೋಮ್ (ಮನೆಯಿಂದಲೇ ಕೆಲಸ)ಗೆ ಸೂಚನೆ ನೀಡಿದೆ.
ತಾತ್ಕಾಲಿಕವಾಗಿ ಕಚೇರಿಯನ್ನು ಮುಚ್ಚಿರುವ ಮೆಕ್ ಡೊನಾಲ್ಡ್ಸ್ ಉದ್ಯೋಗಿಗಳನ್ನು ಕಡಿತಗೊಳಿಸಲು ಸಿದ್ಧತೆ ನಡೆಸಿದ್ದು, ಈ ಸುದ್ದಿಯನ್ನು ವರ್ಚುವಲಿ ತಿಳಿಸಲು ಮೆಕ್ ಡೊನಾಲ್ಡ್ಸ್ ಮುಂದಾಗಿದೆ. ಆದರೆ ಎಷ್ಟು ಮಂದಿ ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ವರದಿ ಹೇಳಿದೆ.
ಎ.3ನೇ ವಾರದಲ್ಲಿ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಸಿಬಂದಿಗಳ ಹುದ್ದೆ ಮತ್ತು ಸಿಬಂದಿಗಳ ಬಗ್ಗೆ ಇ-ಮೇಲ್ ಮೂಲಕ ನಿರ್ಧಾರಗಳನ್ನು ತಿಳಿಸುವುದಾಗಿ ಮೆಕ್ ಡೊನಾಲ್ಡ್ಸ್ ವಿವರಣೆ ನೀಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಪಡಿಸಿರುವ ಸಭೆಗಳನ್ನು ರದ್ದುಪಡಿಸುವಂತೆ ಮೆಕ್ ಡೊನಾಲ್ಡ್ಸ್ ಸೂಚನೆ ನೀಡಿದೆ.
ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಹಣದುಬ್ಬರದ ಪರಿಣಾಮ ಮೆಕ್ ಡೊನಾಲ್ಡ್ಸ್ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿ ವಿವರಿಸಿದೆ. ಇತ್ತೀಚೆಗೆ ಗೂಗಲ್, ಅಮೆಜಾನ್ ಮತ್ತು ಫೇಸ್ ಬುಕ್ ಸಂಸ್ಥೆ ಕೂಡಾ ಸಿಬಂದಿಗಳನ್ನು ವಜಾಗೊಳಿಸಿತ್ತು.