Advertisement

Tomato ರಹಿತ ಆಹಾರವನ್ನೇ ನೀಡಬೇಕಿದೆ ಸಹಕರಿಸಿ… ಮೆಕ್‌ಡೊನಾಲ್ಡ್‌ಗೂ ಟೊಮ್ಯಾಟೊ ಸಂಕಷ್ಟ

09:31 PM Jul 07, 2023 | Team Udayavani |

ನವದೆಹಲಿ: ದೇಶದಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಬರೀ ಜನಸಾಮಾನ್ಯರಿಗಷ್ಟೇ ಅಲ್ಲ, ಪ್ರಸಿದ್ಧ ಫುಡ್ ಸರ್ವೀಸ್‌ ಸಂಸ್ಥೆಗಳಿಗೂ ಬಿಸಿ ತಟ್ಟಿದೆ.

Advertisement

ಖ್ಯಾತ ಫಾಸ್ಟ್‌ ಫುಡ್ ಸರ್ವೀಸ್‌ ಸಂಸ್ಥೆ ಮೆಕ್‌ಡೊನಾಲ್ಡ್‌ ತನ್ನ ಮೆನುಗಳಲ್ಲಿ ಟೊಮ್ಯಾಟೊವನ್ನೇ ತೆಗೆದುಹಾಕಿರುವ ಪ್ರಕಟಣೆ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

“ನಾವು ನಿಮಗೆ ಉತ್ತಮ ಗುಣಮಟ್ಟ ಹಾಗೂ ಉತ್ತಮ ದರ್ಜೆಯ ಆಹಾರ ನೀಡಲು ಬದ್ಧರಾಗಿದ್ದೇವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಅಗತ್ಯಕ್ಕೆ ಅನುಗುಣವಾದ ಗುಣಮಟ್ಟದ ಟೊಮ್ಯಾಟೊ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನಗಳು ತಾತ್ಕಾಲಿಕವಾಗಿ ನಾವು ನಿಮಗೆ ಟೊಮ್ಯಾಟೊ ರಹಿತ ಆಹಾರವನ್ನೇ ನೀಡಬೇಕಿದೆ ಸಹಕರಿಸಿ’ ಎಂದು ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಆದಿತ್ಯಾ ಶಾ ಎಂಬವರು ಟ್ವಿಟರ್‌ನಲ್ಲಿ ಈ ಪ್ರಕಟಣೆ ಹಂಚಿಕೊಂಡಿದ್ದು, ಇದೀಗ ವೈರಲ್‌ ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next