Advertisement

ಎಂಸಿಡಿ ಫಲಿತಾಂಶ, ಇದು ಮೋದಿ ಅಲೆ ಅಲ್ಲ,ಬರೇ ಇವಿಎಂ ಅಲೆ ! ಆಪ್

10:44 AM Apr 26, 2017 | Team Udayavani |

ನವದೆಹಲಿ: ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿಯತ್ತ ಮುನ್ನುಗ್ಗಿದ್ದರೆ, ಆಡಳಿತಾರೂಢ ಆಮ್ ಆದ್ಮಿ ಪಕ್ಷ 2ನೇ ಸ್ಥಾನಕ್ಕೆ ತೃಷ್ತಿಪಟ್ಟುಕೊಳ್ಳುವಂತಾಗಿದೆ. ಏತನ್ಮಧ್ಯೆ ಎಂಸಿಡಿ ಫಲಿತಾಂಶ ಹೊರಬಿದ್ದ ಬಳಿಕ ಪ್ರತಿಕ್ರಿಯೆ ನೀಡಿರುವ ಆಪ್, ಇದು ಇವಿಎಂ ಅಲೆ ವಿನಃ ಮೋದಿ ಅಲೆ ಅಲ್ಲ ಎಂದು ಆರೋಪಿಸಿದೆ.

Advertisement

ವಿದ್ಯುನ್ಮಾನ ಮತ ಯಂತ್ರ (ಇವಿಎಂ)ದ ದೋಷದ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸಲು ಆಮ್ ಆದ್ಮಿ ಪಕ್ಷ ನಿರ್ಧರಿಸಿರುವುದಾಗಿ ತಿಳಿಸಿದೆ.

ಭಾರತೀಯ ಜನತಾ ಪಕ್ಷದ ಈ ಮ್ಯಾಜಿಕ್ ಗೆಲುವಿಗೆ ಕಾರಣ ಇವಿಎಂ ಅಲೆ, ಮೋದಿ ಅಲೆ ಅಲ್ಲ ಎಂದು ಆಪ್ ನ ಗೋಪಾಲ್ ರಾಯ್ ಪ್ರತಿಕ್ರಿಯೆ ನೀಡಿದ್ದು, ಹಾಗಾಗಿ ಇವಿಎಂ ಅಲೆ ಮುಕ್ತ ಮಾಡುವ ಬಗ್ಗೆ ಇಡೀ ದೇಶದ ಜನತೆ ಚಿಂತನೆ ನಡೆಸಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next