Advertisement
ಎಂಜಿನಿಯರಿಂಗ್ ಮತ್ತು ಬಿಎಸ್ಸಿ (ಕೃಷಿ) ಪ್ರವೇಶಕ್ಕೆ ನಡೆದ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ವಿಜಯಪುರದ ಎಕ್ಸ್‌ಲಂಟ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಶ್ರೀಧರ್ ದೊಡಮನಿ ಮೊದಲ ರ್‍ಯಾಂಕ್ ಗಳಿಸಿದ್ದರು. ಈಗ ನೀಟ್‌ನಲ್ಲಿ 105ನೇ ರ್‍ಯಾಂಕ್ ಗಳಿಸುವ ಮೂಲಕ ರಾಜ್ಯದ ಎಲ್ಲ ಅಭ್ಯರ್ಥಿಗಳನ್ನು ಹಿಂದಿಕ್ಕಿದ್ದಾರೆ. 107ನೇ ರ್‍ಯಾಂಕ್ ಪಡೆದ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಕಾಮತ್ ಎರಡನೇ ಸ್ಥಾನ ಪಡೆದಿದ್ದಾರೆ.
ಮೇ 6ರಂದು ನಡೆದ ನೀಟ್ ಪರೀಕ್ಷೆಯಲ್ಲಿ ರಾಜ್ಯದಿಂದ ಒಟ್ಟಾರೆ 94,808 ಅಭ್ಯರ್ಥಿಗಳು ನೀಟ್‌ಗೆ ಅರ್ಜಿ ಹಾಕಿದ್ದು, ಈ ಪೈಕಿ 85,288 ಮಂದಿ ಪರೀಕ್ಷೆ ಬರೆದಿದ್ದರು. ಅದರಲ್ಲಿ 54,163 ಮಂದಿ ಅಂದರೆ ಶೇ. 67.02 ವಿದ್ಯಾರ್ಥಿಗಳು ಅರ್ಹತೆ ಪಡೆದಿ¨ªಾರೆ. 818 ಮಂದಿ ಕನ್ನಡದಲ್ಲಿ ಪರೀಕ್ಷೆ ಬರೆದಿದ್ದು, ಇದರಲ್ಲಿ ಶೇ 2.06ರಷ್ಟು ಮಂದಿ ಅರ್ಹತೆ ಪಡೆದಿ¨ªಾರೆ. ಒಟ್ಟು 11 ಭಾಷೆಗಳಲ್ಲಿ ಪರೀಕ್ಷೆ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಅಭ್ಯರ್ಥಿಗಳ ಸಂಖ್ಯೆ ಶೇ. 16.49ರಷ್ಟು ಏರಿಕೆಯಾಗಿದ್ದು ಕಂಡುಬಂದಿದೆ.
Related Articles
ಕಳೆದ ಬಾರಿಗೆ ಹೋಲಿಸಿದರೆ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಕಟ್‌ಆಫ್ ಅಂಕ ಇಳಿಕೆಯಾಗಿದೆ. ಸಾಮಾನ್ಯ ವಿಭಾಗದಲ್ಲಿ 119ರಿಂದ 691 ಅಂಕಗಳಿಗೆ ನಿಂತಿದೆ. ಒಬಿಸಿ 118ರಿಂದ 96, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದಲ್ಲಿ 118ರಿಂದ 96ಕ್ಕೆ ಇಳಿಕೆಯಾಗಿದೆ.
Advertisement