ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ಯಾರಿಸ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಫ್ರಾನ್ಸ್ ನೊಂದಿಗೆ ಭಾರತದ ಬಲವಾದ ಬಾಂಧವ್ಯವನ್ನು ಪ್ರತಿಬಿಂಬಿಸಿದರು. ಭಾರತೀಯ ಅಭಿಮಾನಿಗಳಲ್ಲಿ ಫ್ರೆಂಚ್ ಫುಟ್ ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಅವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಎತ್ತಿ ತೋರಿಸಿದರು.
ಪ್ಯಾರಿಸ್ ಸೇಂಟ್-ಜರ್ಮೈನ್‌ಗಾಗಿ ಆಡುತ್ತಿರುವ 24 ವರ್ಷದ ಕೈಲಿಯನ್ ಎಂಬಪ್ಪೆ ಭಾರತದಲ್ಲಿ “ಸೂಪರ್‌ಹಿಟ್” ಆಗಿದ್ದಾರೆ. ಫ್ರಾನ್ಸ್ ನಲ್ಲಿರುವವರಿಗಿಂತ ಭಾರತದ ಹೆಚ್ಚಿನ ಜನರು ಎಂಬಪ್ಪೆ ಬಗ್ಗೆ ತಿಳಿದಿರಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
“ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಭಾರತದಲ್ಲಿ ಯುವಕರಲ್ಲಿ ಸೂಪರ್ ಹಿಟ್ ಆಗಿದ್ದಾರೆ. ಬಹುಶಃ ಫ್ರಾನ್ಸ್ ಗಿಂತ ಭಾರತದಲ್ಲಿ ಹೆಚ್ಚಿನ ಜನರಿಗೆ ಎಂಬಪ್ಪೆ ಪರಿಚಿತರಾಗಿದ್ದಾರೆ” ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದರು.
ಇದನ್ನೂ ಓದಿ:ಇಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿದರೆ 1.5 ಕೆಜಿ ಟೊಮ್ಯಾಟೋ ಫ್ರೀ ಕೊಡ್ತಾರಂತೆ
ಫ್ರೆಂಚ್ ಲೀಗ್ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಎಂಬಪ್ಪೆ ಅತ್ಯಂತ ಜನಪ್ರಿಯ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 2022ರ ವಿಶ್ವಕಪ್ ಫೈನಲ್ ನಲ್ಲಿ ಅರ್ಜೆಂಟೀನಾ ವಿರುದ್ಧ ಅವರ ಹ್ಯಾಟ್ರಿಕ್ ಗೋಲಿನ ಬಳಿಕ ಎಂಬಪ್ಪೆ ಪ್ರಪಂಚದಾದ್ಯಂತ ಜನಪ್ರಿಯತೆ ಹೆಚ್ಚಿಸಿದೆ.