ಬೆಂಗಳೂರು: ಮಾದಕ ವಸ್ತು ಪೂರೈಕೆ ಮತ್ತು ಸೇವನೆ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು, ಶ್ರೀಮಂತರು ಇರಬಹುದು. ಹಾಗಂತ ಅವರಿಗೇನು ವಿಶೇಷ ರಿಯಾಯತಿ ಇದೆಯಾ. ಕಾನೂನು ಎಲ್ಲರಿಗೂ ಒಂದೇ. ಯಾರೇ ಇರಲಿ ಕ್ರಮ ಅನಿವಾರ್ಯವಾಗಬೇಕು. ಅವರು, ಇವರು ಎಂದು ಯಾವುದೇ ಬೇಧಭಾವ ಕೊಡಬಾರದು ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾರ್ಕೋಟಿಕ್ಸ್ ಬಗ್ಗೆ ನಾನು ಹಲವು ಸಭೆ ನಡೆಸಿದ್ದೆ. ಹಿಂದೆ ಗೃಹ ಸಚಿವನಾಗಿದ್ದಾಗ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆವು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರ ಕೂಡ ಮಹತ್ವ ಎಂದರು.
ಎಲ್ ಎಸ್ ಡಿ ಸೇರಿ ಸಿಂಥೆಟಿಕ್ ಡ್ರಗ್ಸ್ ಬಹಳ ಅಪಾಯಕಾರಿ. ಇವೆಲ್ಲವೂ ಬೇರೆ ರಾಷ್ಟ್ರಗಳಿಂದಲೇ ಬರುತ್ತವೆ. ಯಾವ ರೂಟ್ ನಿಂದ ಪೂರೈಕೆ ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು. ನಮ್ಮ ಸರ್ಕಾರದ ಸಮಯದಲ್ಲಿ ಹೆಚ್ಚಿನ ಒತ್ತು ನೀಡಿದ್ದೆವು. ಅದರಲ್ಲೂ ಮಕ್ಕಳ ವಿಚಾರದಲ್ಲಿ ಹೆಚ್ಚು ಗಮನ ಹರಿಸಿದ್ದೆವು ಎಂದರು.
ಇದನ್ನೂ ಓದಿ: ಡ್ರಗ್ಸ್ ಜಾಲ: 25 ಸಾವಿರ ಸಂಬಳದ ರವಿಶಂಕರ್ ರಾಗಿಣಿಗಾಗಿ ದಿನಕ್ಕೆ ಎಷ್ಟು ಖರ್ಚು ಮಾಡ್ತಿದ್ದ ?
ಡ್ರಗ್ಸ್ ಎಲ್ಲಿಂದ ಬರುತ್ತದೆ ಹೇಗೆ ಬರುತ್ತದೆ ಎಂದು ನಾರ್ಕೋಟಿಕ್ಸ್ ವಿಂಗ್ ಗೆ ಮಾಹಿತಿ ಇರುತ್ತದೆ. ಆದರೆ ಎಲ್ಲಿ ಮಾರಾಟ ಎನ್ನೋದು ಸ್ಥಳೀಯ ಪೊಲೀಸರಿಗೆ ಗೊತ್ತಿರುತ್ತದೆ. ಹೀಗಾಗಿ ಎರಡೂ ಕಡೆ ಹೆಚ್ಚು ಗಮನಹರಿಸಿದ್ದೆವು. ಇವತ್ತು ಆನ್ ಲೈನ್ ನಲ್ಲೂ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಸೈಬರ್ ಕ್ರೈಂ ಕೂಡ ಇದರ ಬಗ್ಗೆ ಗಮನಹರಿಸಬೇಕು. ಇದರ ಕಡಿವಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಇದನ್ನೂ ಓದಿ: ಮದುವೆ ನಿಶ್ಚಯವಾಗಿದ್ದ ಯುವತಿ ಮತ್ತೋರ್ವನೊಂದಿಗೆ ನಾಪತ್ತೆ: ಆಘಾತದಿಂದ ತಂಗಿ ಸಾವು
ನಮ್ಮ ಸರ್ಕಾರದ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿ ಬಗ್ಗೆ ದೂರು ಬಂದಿರಲಿಲ್ಲ. ಆದರೆ ಸಿನಿಮಾ, ಮಾಡೆಲ್ ಇಂಡಸ್ಟ್ರಿಯಲ್ಲಿ ಸ್ವಲ್ಪ ಕಾಮನ್. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದರು.