Advertisement

K’taka Polls: ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡಲಾಗುತ್ತಿದೆ; ಎಂ.ಬಿ.ಪಾಟೀಲ್

01:14 PM Apr 19, 2023 | |

ಹುಬ್ಬಳ್ಳಿ: ಬಿಜೆಪಿಯಲ್ಲಿನ‌ ಕೆಲ‌ ನಾಯಕರು ಲಿಂಗಾಯತ ಸಮುದಾಯದ ನಾಯಕರನ್ನು ದ್ವೇಷಸಾಧನೆ  ನಿಟ್ಟಿನಲ್ಲಿ ಮೂಲೆಗುಂಪು ಮಾಡುವುದನ್ನು ಸಮಾಜ‌ ಗಂಭೀರವಾಗಿ‌‌ ಪರಿಗಣಿಸಿದೆ.  ಯಡಿಯೂರಪ್ಪ, ಶೆಟ್ಟರಿಗೆ ಆಗಿರುವ ಗತಿ ಸಿಎಂ ಬಸವರಾಜ ಬೊಮ್ಮಾಯಿಗೆ ಆಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು.

Advertisement

ಮೂರುಸಾವಿರಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುಸ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಮೂಲಕ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದ ಯಡಿಯೂರಪ್ಪ ಅವರನ್ನು ಏಕಾಏಕಿ ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು.

ಮಾಜಿ ಸಿಎಂ ಜಗದೀಶ ಶೆಟ್ಟರಗೆ ಸಕಾರಣ ಇಲ್ಲದೆಯೇ ಟಿಕೆಟ್ ನಿರಾಕರಿಸಲಾಯಿತು. ಲಕ್ಷ್ಮಣ ಸವದಿಗೂ ಟಿಕೆಟ್ ನೀಡಲಿಲ್ಲ. ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ವರ್ತನೆ ತೋರಲಾಗುತ್ತಿದೆ ಎಂದರು.

ಇದನ್ನೂ ಓದಿ: RCB ತಂಡದ ಆಂತರಿಕ ವಿಚಾರ ಕೇಳಲು ಅಪರಿಚಿತ ವ್ಯಕ್ತಿಯಿಂದ ಮೊಹಮ್ಮದ್ ಸಿರಾಜ್ ಗೆ ಕರೆ

ಸಿಎಂ ಬಸವರಾಜ ಬೊಮ್ಮಾಯಿಗೂ ಯಡಿಯೂರಪ್ಪ, ಶೆಟ್ಟರಗಾದ ಸ್ಥಿತಿ ಬರಲಿದೆ. ನಾನು ಸಮಾಜದ ನಾಯಕನಾಗಿ ಮಾತನಾಡುತ್ತಿದ್ದೇನೆ ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗುಂಪು, ಅವಮಾನ  ಮಾಡುವುದನ್ನು ಸಮಾಜ ಗಂಭೀರವಾಗಿ ಪರಿಗಣಿಸಿದೆ. ನಾವು ಬ್ರಾಹ್ಮಣರ ವಿರೋಧಿಗಳಲ್ಲ ಆದರೆ, ನಮ್ಮ ಸಮಾಜದವರಿಗಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇವೆ ಎಂದರು.

Advertisement

ವೀರೇಂದ್ರ ಪಾಟೀಲರನ್ನು  ಕಾಂಗ್ರೆಸ್ ಕಡೆಗಣಿಸಿತ್ತು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ  ವೀರೇಂದ್ರ ಪಾಟೀಲರು ಪಾರ್ಶ್ವವಾಯು ಪೀಡಿತರಾಗಿ ಆಸ್ಪತ್ರೆಯಲ್ಲಿದ್ದಾಗ ಆಡಳಿತ ನಿರ್ವಹಣೆಗೆ ತೊಂದರೆ ಎಂದು ತೆಗೆಯಲಾಗಿತ್ತು.

ಆರೋಗ್ಯ ವಾಗಿಯೇ ಇದ್ದ ಯಡಿಯೂರಪ್ಪ ಅವರನ್ನು ಯಾಕೆ ಕೆಳಗಿಳಿಸಲಾಯಿತು ಎಂದು ಪ್ರಶ್ನಿಸಿದರಲ್ಲದೆ, ಪಕ್ಷ ಕಟ್ಟಿದ, ಸಂಕಷ್ಟ ಸ್ಥಿತಿಯಲ್ಲಿ ಬೆಂಬಲಕ್ಕೆ ನಿಲ್ಲುತ್ತಿದ್ದ  ಎಲ್.ಕೆ.ಅಡ್ವಾಣಿಯವರು ಕೈ ಮುಗಿದರು, ಕೈ ಮುಗಿಯದೆ ಮುಂದೆ ಸಾಗಿದ ಮೋದಿಯವರ ವರ್ತನೆಗೆ ಬಿಜೆಪಿಯವರು ಉತ್ತರಿಸಲಿ ಎಂದರು.

ಶೆಟ್ಟರ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ ಗೆ 10-15 ಸ್ಥಾನಗಳು ಬರಲಿದ್ದು, ಪಕ್ಷ 140-145 ಸ್ಥಾನ ಪಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next