Advertisement

ದಾರಿ ತಪ್ಪಿದ ಕುಮಾರಸ್ವಾಮಿ ದಾರಿ ತಪ್ಪಿದ ಹೇಳಿಕೆ ಕೊಡುತ್ತಿದ್ದಾರೆ: ಎಂ.ಬಿ.ಪಾಟೀಲ

12:47 PM Apr 14, 2024 | keerthan |

ವಿಜಯಪುರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿತಪ್ಪಿದ್ದಾರೆ ಎಂದರೆ ಏನು ಸ್ಪಷ್ಟವಾಗಿ ಹೇಳಲಿ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ದಾರಿ ತಪ್ಪಿದಂತಾಗಲಿದೆಯೇ, ಹಸಿದ ಹೊಟ್ಟೆಗೆ ಊಟ ಕೊಡುವ ಅನ್ನಭಾಗ್ಯ ನೀಡಿದ್ದು ದಾರಿ ತಪ್ಪಿದಂತೆಯೇ, ಒಳ್ಳೆಯ ಬಟ್ಟೆ ಧರಿಸುವುದು ದಾರಿ ತಪ್ಪಿದಂತೆಯೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಗ್ಯಾಸ್ ಸಿಲೆಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಮಾಧಾನ ಪಟ್ಟು ಮನೆ ನಡೆಸಿದ್ದು ದಾರಿ ತಪ್ಪಿದಂತೆಯೇ? ಇಷ್ಟಕ್ಕೂ ದಾರಿ ತಪ್ಪಿದ್ದು ಎಂದರೆ ಏನು ಎಂಬುದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಪಕ್ಷಕ್ಷದ ಜೊತೆ ಮೈತ್ರಿ ಮಾಡೊಕೊಂಡು ದಾರಿ ತಪ್ಪಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ತಾವು ದಾರಿ ತಪ್ಪಿದ ಮೇಲೆ ದಾರಿ ತಪ್ಪಿದ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next