Advertisement

ಎಂ.ಬಿ. ಪಾಟೀಲ್, ಪ್ರಿಯಾಂಕ್‌ ಖರ್ಗೆಗೆ ಹೆಚ್ಚುವರಿ ಖಾತೆ‌ ಹಂಚಿಕೆ

12:59 AM Jun 01, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಳಿ ಇದ್ದ ಎರಡು ಪ್ರಮುಖ ಖಾತೆಗಳನ್ನು ಇಬ್ಬರು ಸಚಿವರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ. ಈ ಸಂಬಂಧ ಬುಧವಾರ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ. ಮುಖ್ಯಮಂತ್ರಿಯವರು ಹಣಕಾಸು, ಸಂಪುಟ ವ್ಯವಹಾರ, ಸಿಬಂದಿ ಮತ್ತು ಆಡ ಳಿತ ಸುಧಾರಣೆ, ಗುಪ್ತದಳ, ವಾರ್ತಾ ಇಲಾಖೆ, ಐಟಿ-ಬಿಟಿ ಮೂಲ ಸೌಲಭ್ಯ ಇಲಾಖೆ ಜತೆಗೆ ಯಾರಿಗೂ ಹಂಚಿಕೆಯಾ ಗದ ಖಾತೆಗಳನ್ನು ಇಟ್ಟುಕೊಂಡಿದ್ದರು.

Advertisement

ಆದರೆ ಈಗ ತಮ್ಮ ಬಳಿ ಇದ್ದ ಮೂಲ ಸೌಲಭ್ಯ ಇಲಾಖೆಯನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ಗೆ ಹಾಗೂ ಐಟಿ-ಬಿಟಿ ಖಾತೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಹೆಚ್ಚು ವರಿಯಾಗಿ ಹಂಚಿಕೆ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next