Advertisement

Congress Guranteeಗಳ ಸಮೀಕ್ಷೆ ವೇಗ ಪಡೆಯಲಿ: ಸಿಎಂ ಸಿದ್ದರಾಮಯ್ಯ ಸೂಚನೆ

12:21 AM Jul 09, 2024 | Team Udayavani |

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಫ‌ಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮಾ.1 ರಿಂದ ಮಾ.15ರ ವರೆಗೆ ಸಮೀಕ್ಷೆ ನಡೆದಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಶೇ.100ರಷ್ಟು ಸಮೀಕ್ಷೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯ ಚುರುಕುಗೊಳಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ 84.52 ಲಕ್ಷ ಕುಟುಂಬಗಳ ಸುಮಾರು 5 ಕೋಟಿ ಜನರ ಸಮೀಕ್ಷೆ ನಡೆಸಬೇಕಾಗಿದೆ. ಸಮೀಕ್ಷೆಗೆ 72,435 ಅಂಗನವಾಡಿ ಕಾರ್ಯಕರ್ತೆಯರು, 42,417 ಆಶಾ ಕಾರ್ಯಕರ್ತೆಯರು, 2,233 ಬಿಬಿಎಂಪಿ ಸಮೀಕ್ಷಕರು, 581 ನಗರಾಭಿವೃದ್ಧಿ, ಹಾಗೂ ಆರ್‌ಡಿಪಿಆರ್‌ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿದೆ.

ಸದ್ಯದ ಸಮೀಕ್ಷಾ ಫ‌ಲಿತಾಂಶ

ಗೃಹಜ್ಯೋತಿ
– ಶೇ. 98 ಜನರು ಉಚಿತ ವಿದ್ಯುತ್‌ ತಮ್ಮ ಜೀವನಮಟ್ಟ ಸುಧಾರಿಸಿದೆ ಎಂದಿದ್ದಾರೆ.
– ಶೇ. 29ರಷ್ಟು ಜನರು ಉಳಿಕೆ ಹಣ ಅಧ್ಯಯನಕ್ಕೆ ಬಳಸಿದ್ದಾರೆ.
– ಶೇ. 33ರಷ್ಟು ಜನರು ಹಣವನ್ನು ಉಳಿತಾಯಕ್ಕೆ ಬಳಸಿದ್ದಾರೆ.

ಗೃಹಲಕ್ಷ್ಮಿ
– ಶೇ. 43ರಷ್ಟು ಜನರು ಹಣ್ಣು ಮತ್ತು ತರಕಾರಿ ಖರೀದಿಗೆ ಬಳಸಿದ್ದಾರೆ.
-ಶೇ. 13ರಷ್ಟು ಜನರು ಮಕ್ಕಳ ಶಿಕ್ಷಣಕ್ಕೆ ಬಳಸಿದ್ದಾರೆ.
-ಶೇ. 15ರಷ್ಟು ವೈದ್ಯಕೀಯ ವೆಚ್ಚಕ್ಕೆ ಬಳಕೆ.
-ಶೇ. 23ರಷ್ಟು ಜನರು ಗೃಹ ಕೃತ್ಯಕ್ಕೆ ಬಳಕೆ.

Advertisement

ಶಕ್ತಿ
– ಶೇ. 98ರಷ್ಟು ಜನರು ಉಚಿತ ಪ್ರಯಾಣದ ಲಾಭ ಪಡೆದಿದ್ದಾರೆ.
– ಶೇ. 94ರಷ್ಟು ಜನರು ಉಚಿತ ಪ್ರಯಾಣ ಪಡೆಯುವುದು ಸುಲಭ ಎಂದಿದ್ದಾರೆ.

ಅನ್ನಭಾಗ್ಯ
– ಶೇ. 90ರಷ್ಟು ಜನರು ಅಕ್ಕಿಯ ಜತೆಗೆ ಇತರೆ ಧಾನ್ಯ ಬೇಕೆಂದು ಕೇಳಿದ್ದಾರೆ.

ಯುವನಿಧಿ
– ಶೇ. 73ರಷ್ಟು ಯುವಕರು ಆರ್ಥಿಕ ಒತ್ತಡ ಕಡಿಮೆಯಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next