ನವದೆಹಲಿ: ದೆಹಲಿಯ ಭಜನ್ಪುರ ಚೌಕ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಎರಡು ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.
ದೆಹಲಿಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಧಿಕಾರಿಗಳು ಭಜನ್ ಪುರ ಚೌಕ್ನಲ್ಲಿರುವ ಹನುಮಾನ್ ದೇವಾಲಯ ಮತ್ತು ದರ್ಗಾವನ್ನು ತೆರವು ಮಾಡಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕೆಲವು ದಿನಗಳ ಹಿಂದೆ ನಡೆದ ಧಾರ್ಮಿಕ ಸಮಿತಿ ಸಭೆಯಲ್ಲಿ ಎರಡು ಕಟ್ಟಡಗಳನ್ನು ತೆಗೆಯಲು ನಿರ್ಧಾರವನ್ನು ಮಾಡಲಾಗಿತ್ತು.ಅದರಂತೆ ನಿವಾಸಿಗಳು ಮತ್ತು ಆಭಾಗದ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿತ್ತು.
ಸಹರಾನ್ಪುರ ಹೆದ್ದಾರಿ ನಿರ್ಮಾಣಕ್ಕಾಗಿ ರಸ್ತೆಯನ್ನು ಅಗಲಗೊಳಿಸಲು ದೇವಸ್ಥಾನ ಮತ್ತು ದರ್ಗಾವನ್ನು ಕೆಡವಲಾಯಿತು ಎಂದು ಈಶಾನ್ಯ ದೆಹಲಿಯ ಡಿಸಿಪಿ ಎನ್ ಟಿರ್ಕಿ ಹೇಳಿದ್ದಾರೆ.