Advertisement

ಮೇವುಂಡಿ ಗ್ರಂಥಾಲಯ ಒಳಹೊಕ್ಕರೆ ಜೀವ ಭಯ

04:56 PM Nov 10, 2019 | Suhan S |

ಮುಂಡರಗಿ: ತಾಲೂಕಿನ ಮೇವುಂಡಿ ಗ್ರಾಮದ ಗ್ರಂಥಾಲಯದ ಕಾಂಕ್ರೀಟ್‌ ಮೇಲ್ಛಾವಣಿ ಉದುರುತ್ತಿದ್ದು, ಓದುಗರು ಭಯದಲ್ಲೇ ಕುಳಿತು ಓದುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಗ್ರಂಥಾಲಯ ಕಟ್ಟಡ ಇಪ್ಪತ್ತು ವರ್ಷಗಳಷ್ಟು ಪುರಾತನವಾಗಿದ್ದು, ಎರಡು ವಿಭಾಗದಲ್ಲಿದೆ. ಒಂದು ವಿಭಾಗದ ಕಟ್ಟಡ ಮೇಲ್ಛಾವಣಿಯ ಕಾಂಕ್ರೀಟ್‌ ದಿನಂಪ್ರತಿ ಉದುರುತ್ತಿದ್ದು, ಓದುಗರ ತಲೆಯ ಮೇಲೆಯೇ ಕಾಂಕ್ರೀಟ್‌ನ ಕಲ್ಲು, ಉಸುಕು ಬೀಳುತ್ತಿರುತ್ತವೆ. ಅಲ್ಲದೇ ಇನ್ನೊಂದು ವಿಭಾಗದ ಮೇಲ್ಛಾವಣಿ ಉತ್ತಮವಾಗಿದ್ದರೂ ಉಬ್ಬಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಪಂ ಕಟ್ಟಡದಲ್ಲಿ ಸಾರ್ವಜನಿಕ ಗ್ರಂಥಾಲಯವು ಸಾಗಿ ಬಂದಿದೆ. ಗ್ರಾಪಂ ಕಟ್ಟಡದ ಮೇಲ್ಛಾವಣಿ ಶಿಥಿಲಾವಸ್ಥೆ ತಲುಪಿದೆ. ಮೇಲ್ಛಾವಣಿ ಉದುರಿ ಟೇಬಲ್‌ ಮತ್ತು ಕುರ್ಚಿಗಳ ಮೇಲೆ ಕಾಂಕ್ರೀಟ್‌ನ ಗಟ್ಟಿಯಾದ ಉಂಡೆಗಳು ಬೀಳುತ್ತಿವೆ. ಗ್ರಂಥಾಲಯದಲ್ಲಿ 4,230 ಗ್ರಂಥಗಳಿವೆ. ಗ್ರಂಥಾಲಯಕ್ಕೆ 254 ಜನ ಕಾಯಂ ಸದಸ್ಯರಿದ್ದಾರೆ. ಗ್ರಂಥಾಲಯದಲ್ಲಿ ಎರಡೇ ಎರಡು ದಿನಪತ್ರಿಕೆಗಳು ಬರುತ್ತಿವೆ. ಆದರೆ ಗ್ರಂಥಾಲಯದ ಮೇಲ್ವಿಚಾರಕರು ಆಸಕ್ತಿ ತಾಳಿ ಕಳೆದ ಮೂರು ವರ್ಷಗಳಿಂದ ಸ್ವಂತ ಹಣದಿಂದಲೇ ಇನ್ನೆರಡು ಪತ್ರಿಕೆ ತರಿಸುತ್ತಿದ್ದಾರೆ. ಇಂತಹ ಗ್ರಾಮೀಣ ಪ್ರದೇಶದ ಗ್ರಂಥಾಲಯ ಕಟ್ಟಡ ಬೀಳುವ ಭೀತಿಯಿದ್ದು, ಶೀಘ್ರ ದುರಸ್ತಿ ಮಾಡಬೇಕಿದೆ.

ಗ್ರಂಥಾಲಯ ಮೇಲ್ಛಾವಣಿ ಉದುರುತ್ತಿರುವ ಬಗ್ಗೆ ಗ್ರಂಥಾಲಯ ಇಲಾಖೆಗೂ, ಗ್ರಾಪಂ ಗಮನಕ್ಕೂ ತರಲಾಗಿದೆ. ಗ್ರಾಪಂನವರು ಮೇಲ್ಛಾವಣಿ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. –ಹಾಲಪ್ಪ ಕೋರ್ಲಹಳ್ಳಿ,ಗ್ರಂಥಾಲಯ ಮೇಲ್ವಿಚಾರಕ

ದುರಸ್ತಿಗಾಗಿ 14ನೇ ಹಣಕಾಸು ಯೋಜನೆಯಲ್ಲಿ 2 ಲಕ್ಷ ರೂ. ಕ್ರಿಯಾಯೋಜನೆಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಇನ್ನೂ ಲಕ್ಷ ರೂಪಾಯಿಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೇಗನೆ ಮೇಲ್ಛಾವಣಿ ದುರಸ್ತಿ ಮಾಡಲಾಗುವುದು. –ಸಂತೋಷ್‌ ಹೂಗಾರ, ಪಿಡಿಒ

Advertisement

 

-ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next