Advertisement
ವನಿತೆಯರ 10 ಮೀ. ಏರ್ ರೈಫಲ್ ವಿಭಾಗದ ಫೈನಲ್‌ನಲ್ಲಿ 251.4 ಅಂಕ ಗಳಿಸಿದ ಅಪೂರ್ವಿ ಚಿನ್ನ ಗೆದ್ದರು. ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡ ಭಾರತದ ಇನ್ನೋರ್ವ ಶೂಟರ್ ಅಜುಂ ಮುಗಿªಲ್ 299 ಅಂಕಗಳೊಂದಿಗೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ದಿವ್ಯಾಂಶ್ 249.7 ಅಂಕ ದೊಂದಿಗೆ ಚಿನ್ನದ ಪದಕ ಜಯಿಸಿದರೆ, ತಂಡಸದಸ್ಯ ದೀಪಕ್ ಕುಮಾರ್ 228 ಅಂಕದೊಂದಿಗೆ ಕಂಚಿನ ಪದಕ ಗೆದ್ದರು. ಪದಕ ಗೆದ್ದ ಈ ನಾಲ್ವರು ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಉತ್ತಮ ಫಾರ್ಮ್ ನಲ್ಲಿರುವ ಇವರಿಂದ ಭಾರತ ಪದಕ ಗೆಲ್ಲುವ ಭರವಸೆ ಇಟ್ಟುಕೊಂಡಿದೆ.