Advertisement

ಕೆಂಪೇಗೌಡ ಜಯಂತಿ ಸಿದ್ಧತೆ ಪರಿಶೀಲಿಸಿದ ಮೇಯರ್‌

12:03 PM Aug 07, 2018 | |

ಬೆಂಗಳೂರು: ಬಿಬಿಎಂಪಿ ವತಿಯಿಂದ ಆ. 8 ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡ ಜಯಂತಿಗೆ ಪಾಲಿಕೆಯ ಕೇಂದ್ರ ಕಚೇರಿ ಸಿಂಗಾರಗೊಂಡು ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸೋಮವಾರ ಮೇಯರ್‌ ಸಂಪತ್‌ರಾಜ್‌ ಜಯಂತಿ ಆಚರಣೆ ಸಿದ್ಧತೆಗಳನ್ನು ಪರಿಶೀಲಿಸಿದರು.

Advertisement

ಸೋಮವಾರ ಬಿಬಿಎಂಪಿ ಆವರಣದಲ್ಲಿ  ವೇದಿಕೆ, ವಿದ್ಯುತ್‌ ಅಲಂಕಾರ, ಭದ್ರತಾ ವ್ಯವಸ್ಥೆಯನ್ನು ಮೇಯರ್‌ ಆರ್‌.ಸಂಪತ್‌ರಾಜ್‌ ನೇತೃತ್ವದ ಕೆಂಪೇಗೌಡ ಜಯಂತಿ ಆಚರಣೆ ಸಮಿತಿ ಸದಸ್ಯರು ಪರಿಶೀಲಿಸಿದರು. ಈ ವೇಳೆ ವಿದ್ಯುತ್‌ ಅಲಂಕಾರಿ ದೀಪಗಳು ಎಲ್ಲೆಲ್ಲಿ ಅಳವಡಿಸಬೇಕು, ಪೆಂಡಾಲ್‌ ಹಾಕುವುದು, ವಾಹನ ನಿಲುಗಡೆಗೆ ಅವಕಾಶ ಸೇರಿದಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೆಂಪೇಗೌಡ ಜಯಂತಿಯ ದಿನ ಆಯೋಜಿಸಿರುವ ಊಟದ ಮೆನು ಅಂತಿಮಗೊಳಿಸಿದ್ದು, ಆಹಾರ ಸರಬರಾಜು ಗುತ್ತಿಗೆದಾರರ ಜತೆ ಮಾತುಕತೆ ನಡೆಸಿದ ಮೇಯರ್‌, ಯಾವುದೇ ಕಾರಣಕ್ಕೂ ಊಟದ ಕುರಿತು ದೂರುಗಳು ಬರದಂತೆ ನೋಡಿಕೊಳ್ಳಬೇಕು. ಜತೆಗೆ ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ವೇದಿಕೆಯ ಮೇಲೆ ಹಾಗೂ ಮುಂಭಾಗದಲ್ಲಿ ಗಣ್ಯರು, ವಿಶೇಷ ಅತಿಥಿಗಳು, ಪ್ರಶಸ್ತಿ ಪುರಸ್ಕೃತರು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸಮರ್ಪಕ ಆಸನ ವ್ಯವಸ್ಥೆ ಮಾಡುವಂತೆ ಇದೇ ವೇಳೆ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಾಹಿತಿ: ಕೆಂಪೇಗೌಡ ಜಯಂತಿಯ ಹಿನ್ನೆಲೆಯಲ್ಲಿ ಮಂಗಳವಾರ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಲಿರುವ ಮೇಯರ್‌ ಸಂಪತ್‌ರಾಜ್‌ ಪ್ರಶಸ್ತಿ ಪುರಸ್ಕೃತ ಪಟ್ಟಿ ಹಾಗೂ ಜಯಂತಿಯ ಸಿದ್ಧತೆಗಳ ಕುರಿತು ಮಾಹಿತಿ ನೀಡಲಿದ್ದು, ಅವರಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ಪಡೆಯಲಿದ್ದಾರೆ.

Advertisement

ಅಂತಿಮ ಹಂತದ ಲಾಬಿ: ಪಾಲಿಕೆಯಲ್ಲಿ ಬುಧವಾರ (ಆ.8) ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳವಾರ (ಆ.7) ಪ್ರಶಸ್ತಿ ಪುರಸ್ಕೃತರ ಆಯ್ಕೆ ಅಂತಿಮವಾಗಿದ್ದು, ಪ್ರಶಸ್ತಿ ಪುರಸ್ಕೃತರ ಸಂಖ್ಯೆ 200ರ ಗಡಿ ದಾಟುವ ಸಾಧ್ಯತೆಯಿದೆ.

ಆ ಹಿನ್ನೆಲೆಯಲ್ಲಿ ಪ್ರಶಸ್ತಿ ಪಡೆಯಲು ಈಗಾಗಲೇ ಅರ್ಜಿ ಹಾಕಿರುವ ಆಕಾಂಕ್ಷಿಗಳು ಪ್ರಭಾವಿ ಸಚಿವರು, ಶಾಸಕರ ಮೂಲಕ ಮೇಯರ್‌, ಉಪಮೇಯರ್‌, ವಿರೋಧ ಪಕ್ಷ ನಾಯಕ ಹಾಗೂ ಆಡಳಿತ ಪಕ್ಷ ನಾಯಕರಿಗೆ ಕರೆ ಮಾಡಿದ ಪ್ರಶಸ್ತಿ ಕೊಡಿಸುವಂತೆ ಲಾಬಿ ಶುರು ಮಾಡಿದ್ದು, ಪ್ರಶಸ್ತಿ ಪುರಸ್ಕೃತರ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next