Advertisement
ಎ. 8ರಂದು ಥಾಣೆ ಪಶ್ಚಿಮದ ಕಾಸರ್‌ವಡವಲ್ಲಿಯ ರೋಯಲ್ ಪ್ಲಾಮ್ ಮೈದಾನದಲ್ಲಿ ಥಾಣೆಯ 15 ವಿವಿಧ ಸಂಘಟನೆಗಳು ಆಯೋಜಿಸಿದ್ದ ಮೇಯರ್ ಮೀನಾಕ್ಷೀ ಪೂಜಾರಿ ಅವರ ಅಭಿನಂದನ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಹೊಟೇಲ್ ಉದ್ಯಮ ಸಂಕಷ್ಟದಲ್ಲಿದ್ದು, ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಹೊಟೇಲ್ ಉದ್ಯಮವನ್ನು ಉಳಿಸಿ-ಬೆಳೆಸಲು ಶಿವಸೇನೆ ಶ್ರಮಿಸುತ್ತಿದೆ. ಮೀನಾಕ್ಷೀ ರಾಜು ಶಿಂಧೆ ಅವರು ಮತದಾರರಿಗೆ ನ್ಯಾಯ ಒದಗಿಸುವ ಮೂಲಕ ಅಭಿವೃದ್ಧಿಪರ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ನುಡಿದು ಶುಭ ಹಾರೈಸಿದರು.
Related Articles
Advertisement
ಅತಿಥಿಗಳಾಗಿ ಪಾಲ್ಗೊಂಡ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಉದ್ಯಮಿ ನ್ಯೂಪನ್ವೇಲ್ ಕ್ರೇನ್ ಸರ್ವಿಸಸ್ ಇದರ ಗಣೇಶ್ ಆರ್. ಪೂಜಾರಿ ಅವರು ಮಾತನಾಡಿ ಸಮ್ಮಾನಿತರಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ತುಳು-ಕನ್ನಡ ಅಭಿಮಾನಿ ಬಳಗ ಥಾಣೆ ಅಧ್ಯಕ್ಷ ಮಹೇಶ್ ಕರ್ಕೇರ ಮಾತನಾಡಿ, ಒಂದು ರೀತಿಯ ಆದರ್ಶಮಯ ಕಾರ್ಯವನ್ನು ಸಚಿವ ಏಕನಾಥ ಶಿಂಧೆ ಅವರು ಮಾಡಿದ್ದಾರೆ. ಹ್ಯಾಟ್ರಿಕ್ ಸಾಧನೆಯ ಮೂಲಕ ಮೀನಾಕ್ಷೀ ರಾಜು ಶಿಂಧೆ ಅವರು ಮೇಯರ್ ಸ್ಥಾನವನ್ನು ಅಲಂಕರಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇಂದು ಇಬ್ಬರನ್ನು 15 ಸಂಸ್ಥೆಗಳು ಸೇರಿ ಅಭಿಂದಿಸಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಥಾಣೆಯ ಉದ್ಯಮಿ ಲಕ್ಷ್ಮಣ್ ಮಣಿಯಾಣಿ ಹಾಗೂ 15 ಸಂಘ-ಸಂಸ್ಥೆಗಳ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು. ಕಲಾ ಸೌರಭದ ಪದ್ಮನಾಭ ಸಸಿಹಿತ್ಲು ಪ್ರಾರ್ಥನೆಗೈದರು. ತುಳು-ಕನ್ನಡಿಗ ಅಭಿಮಾನಿ ಬಳಗದ ಕಾರ್ಯದರ್ಶಿ, ವರ್ತಕ್ ನಗರ ಕನ್ನಡ ಸಂಘದ ಅಧ್ಯಕ್ಷ ಸುನಿಲ್ ಜೆ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಥಾಣೆ ಪರಿಸರದ ಹಿರಿಯರಾದ ರವಿರಾಜ್ ಹೆಗ್ಡೆ, ಡಿ. ಜಿ. ಬೋಳಾರ್ ಅವರು ಮೀನಾಕ್ಷೀ ಶಿಂಧೆ ಅವರನ್ನು ಗೌರವಿಸಿದರು. ಘೋಡ್‌ಬಂದರ್‌ರೋಡ್ ಕನ್ನಡ ಅಸೋಸಿಯೇಶನ್ ಜತೆ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಬೆಳುವಾಯಿ ಮತ್ತು ಅಖೀಲ ಭಾರತ ಜೈನ ಸಂಘ ಮುಂಬಯಿ ಇದರ ಜತೆ ಕಾರ್ಯದರ್ಶಿ ರಘುವೀರ್ ಹೆಗ್ಡೆ ಅವರು ಅವರು ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು.
ಗೌರವ ಅತಿಥಿಗಳಾಗಿ ವರ್ತಕ್ ನಗರ ಕನ್ನಡ ಸಂಘ ಥಾಣೆ ಕಾರ್ಯದರ್ಶಿ ಜಯಂತ್ ಎನ್. ಶೆಟ್ಟಿ, ನವೋದಯ ಕನ್ನಡ ಸೇವಾ ಸಂಘದ ಕಿಸನ್ ನಗರ ಅಧ್ಯಕ್ಷ ಜಯ ಕೆ. ಶೆಟ್ಟಿ, ಆದಿಶಕ್ತಿ ಕನ್ನಡ ಸಂಘ ಮತ್ತು ಶಾಲೆ ಮಾಜಿವಾಡಾ ಅಧ್ಯಕ್ಷ ಶಂಕರ್ ಶೆಟ್ಟಿ ಶಿಮಂತೂರು, ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಕನ್ನಡ ಸಂಘ ಬಾಲ್ಕುಮ್ ಥಾಣೆ ಮನೋಜ್ ಎಲ್. ಹೆಗ್ಡೆ, ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಅನಂತ್ ಸಾಲ್ಯಾನ್, ಥಾಣೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ಕಾರ್ಯಾಧ್ಯಕ್ಷೆ ರೇವತಿ ಸದಾನಂದ ಶೆಟ್ಟಿ, ಘೋಡ್‌ಬಂದರ್‌ರೋಡ್ ಕನ್ನಡ ಅಸೋಸಿಯೇಶನ್ ಥಾಣೆ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ , ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಕಿಸನ್ ನಗರ ಥಾಣೆ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಸುವರ್ಣ, ಡಿವೈನ್‌ಪಾರ್ಕ್ ಥಾಣೆಯ ಕೇಶವ ಎಂ. ಆಳ್ವ, ಚಿಣ್ಣರ ಬಿಂಬದ ಥಾಣೆ ವಲಯ ಅಧ್ಯಕ್ಷ ಸೀತಾರಾಮ ಶೆಟ್ಟಿ, ಸ್ತಿÅà ಶಕ್ತಿ ಮಹಿಳಾ ಮಂಡಳಿ ಥಾಣೆ ಅಧ್ಯಕ್ಷೆ ಉಷಾ ಪಿ. ಹೆಗ್ಡೆ, ಸದ್ಗುರು ಅಯ್ಯಪ್ಪ ಸೇವಾ ಸಂಘದ ಖಾರೆಗಾಂವ್ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿ, ಗುರುಸೇವಾ ಬಳಗ ಥಾಣೆ ಘಟಕ ಅಧ್ಯಕ್ಷ ಗುಣಪಾಲ್ ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಥಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ್ ಎಸ್. ಚಂದನ್, ನಗರ ಸೇವಕರುಗಳಾದ ನರೇಶ್ ಮನೇರ್, ಸಿದ್ಧಾಥ್ ಬಳೇಗಾರ್, ನಮ್ರತಾ ರವಿ ಗರಾತ್, ಸಾಧನಾ ಜೋಗಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಡಿ. ಸಾಲ್ಯಾನ್, ಥಾಣೆ ಉದ್ಯಮಿ ಸಮಿತಿಯ ಕೋಶಾಧಿಕಾರಿ ವಿನೋದ್ ಎ. ಅಮೀನ್, ಸಲಹಾ ಸಮಿತಿಯ ವತಿಯಿಂದ ಬಿಲ್ಲವರ ಅಸೋಸಿಯೇಶನ್ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ, ತುಳು-ಕನ್ನಡಿಗ ಅಭಿಮಾನಿ ಬಳಗದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಉದ್ಯಮಿ ಹರೀಶ್ ಡಿ. ಸಾಲ್ಯಾನ್, ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ ಅಧ್ಯಕ್ಷ ಜಯರಾಮ ಪೂಜಾರಿ, ಮಹಿಳಾ ವಿಭಾಗದ ಮುಖ್ಯಸ್ಥೆ, ಘೋಡ್ ಬಂದರ್ ಕನ್ನಡ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಶೆಟ್ಟಿ ಮತ್ತು ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಕಚೇರಿಯ ಮಹಿಳಾ ವಿಭಾಗದ ಮುಖ್ಯಸ್ಥೆ ಪೂರ್ಣಿಮಾ ಅಮೀನ್, ಸಮಿತಿಯ ಸಂಚಾಲಕರಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ ಕಲ್ವಾ, ಘೋಡ್‌ಬಂದರ್‌ರೋಡ್ ಕನ್ನಡ ಅಸೋಸಿಯೇಶನ್ ಉಪಾಧ್ಯಕ್ಷ ಪ್ರಶಾಂತ್ ನಾಯಕ್, ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಎಸ್. ಶೆಟ್ಟಿ, ಡಿವೈನ್‌ಪಾರ್ಕ್ ಥಾಣೆ ಸ್ಥಳೀಯ ಸಮಿತಿಯ ಅಧ್ಯಕ್ಷ ಕೇಶವ ಎಂ. ಆಳ್ವ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್ ಸಸಿಹಿತ್ಲು ಕಲ್ವಾ, ಕಾರ್ಯನಿರ್ವಾಹಕರಾದ ಪತ್ರಕರ್ತ ಶ್ರೀಧರ ಉಚ್ಚಿಲ್, ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಕಾರ್ಯ
ದರ್ಶಿ ರಮೇಶ್ ಶೆಟ್ಟಿ, ಸ್ತ್ರೀ ಶಕ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಹೆಗ್ಡೆ ಉಪಸ್ಥಿತರಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.
ನಾನು ತುಳುನಾಡಿನವಳು, ಬಿಲ್ಲವ ಸಮಾಜದವಳು ಎನ್ನುವ ಅಭಿಮಾನ ನನಗಿದೆ. ಒಂದು ಕಾಲದಲ್ಲಿ ಶಿವಸೇನೆಯ ವಿರುದ್ಧ ಕನ್ನಡಿಗರು ಮನಸ್ತಾಪ ಹೊಂದಿದ್ದರು. ನಾನು ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿದ ಅನಂತರ ಕನ್ನಡಿಗರು ಶಿವಸೇನೆಯ ಬಗ್ಗೆ ಅಭಿಮಾನವನ್ನು ಹೊಂದಿದ್ದಾರೆ. ಪ್ರಸ್ತುತ ಕನ್ನಡಿಗರು ಶಿವಸೇನೆಯ ಮೂಲಕ ಗುರುತಿಸಿಕೊಂಡವರು ಹಲವಾರು ಮಂದಿ ಇದ್ದಾರೆ. ತುಳು-ಕನ್ನಡಿಗರು ರಾಜಕೀಯವಾಗಿ ಶಿವಸೇನೆಯೊಂದಿಗಿದ್ದು ಸಂತೋಷದ ಸಂಗತಿಯಾಗಿದೆ. ನನಗೆ ಮೇಯರ್ ಆಗುವ ಭಾಗ್ಯವನ್ನು ಕಲ್ಪಿಸಿಕೊಟ್ಟ ಸಚಿವ ಏಕನಾಥ ಶಿಂಧೆ ಅವರಿಗೆ ನಮನಗಳು. ನನ್ನ ಜನ್ಮಭೂಮಿ ಮತ್ತು ಕರ್ಮಭೂಮಿ ಮಹಾರಾಷ್ಟ್ರವಾಗಿದೆ. ಆದರೆ ತಾಯ್ನಾಡಿನ ಭಾಷೆಯ ಬಗ್ಗೆ ಅಭಿಮಾನವಿದೆ. ನನ್ನ ಪತಿ ಮರಾಠಿ ಮೂಲದವರಾಗಿದ್ದರೂ ಕನ್ನಡ ತುಳು-ಭಾಷೆಯ ಅರಿವು ಅವರಿಗಿದೆ. ಇಬ್ಬರು ಪುತ್ರಿಯರೊಂದಿಗೆ ಮನೆಯಲ್ಲಿ ತುಳುವಿನಲ್ಲೇ ಮಾತನಾಡುತ್ತೇನೆ. ನನ್ನ ಸಮಾಜದ ಭಾರತ್ ಬ್ಯಾಂಕ್ ಶತಶಾಖೆಯೊಂದಿಗೆ ಸಾವಿರಾರು ಮಂದಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ. ಈ ಸಮ್ಮಾನವನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ. ನನ್ನ ಸೇವೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಿದ್ದೇನೆ
– ಮೇಯರ್ ಮೀನಾಕ್ಷೀ ಆರ್. ಶಿಂಧೆ (ಸಮ್ಮಾನಿತರು).