Advertisement

ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸಿಬ್ಬಂದಿಗೆಮೇಯರ್‌ ಸೂಚನೆ

11:57 AM Jan 25, 2018 | Team Udayavani |

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಅಪಕೀರ್ತಿ ತರಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿದ್ದು, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರದಿಂದಿರಬೇಕು ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದ್ದಾರೆ. ಮಲ್ಲೇಶ್ವರದ ಐಪಿಪಿ ಭವನದಲ್ಲಿ ಬುಧವಾರ “ಮೊಬೈಲ್‌ ಇಂದಿರಾ ಕ್ಯಾಂಟೀನ್‌’ ಕುರಿರು ಗುತ್ತಿಗೆದಾರರಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ನಡೆಯುತ್ತಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು. ಆಹಾರದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದರು.

Advertisement

ಸಹಾಯಕ ಎಂಜಿನಿಯರ್‌ಗಳು ನಿರಂತರವಾಗಿ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಸ್ವತ್ಛತೆ, ನೈರ್ಮಲ್ಯ ಹಾಗೂ
ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕು. ಅದಕ್ಕಾಗಿ ಪ್ರತಿ ಕ್ಯಾಂಟೀನ್‌ನಲ್ಲಿ ಒಂದು ಹಾಜರಾತಿ ಪುಸ್ತಕ ಇರಿಸುವಂತೆ ಆಯುಕ್ತರಿಗೆ ಸೂಚಿಸಿದರು.

ಮಾರ್ಗ ಬದಲಿಸಿದರೆ ಎಚ್ಚರ: ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾತನಾಡಿ, ಕ್ಯಾಂಟೀನ್‌ ನಿರ್ಮಾಣಕ್ಕೆ ಜಾಗ ದೊರೆಯದ ವಾರ್ಡ್‌ಗಳಲ್ಲಿ ಮೊಬೈಲ್‌ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸಲಿವೆ. ಕ್ಯಾಂಟೀನ್‌
ನಲ್ಲಿರುವ ಎಲ್ಲ ವ್ಯವಸ್ಥೆಗಳು ಮೊಬೈಲ್‌ ಕ್ಯಾಂಟೀನ್‌ ನಲ್ಲಿಯೂ ಇರಲಿದ್ದು, ಚಾಲಕರು ತಮಗೆ ಸೂಚಿಸಿರುವ
ನಿಗದಿತ ಮಾರ್ಗದಲ್ಲಿ ಮಾತ್ರವೇ ಸಂಚರಿಸಬೇಕು.

ಒಂದೊಮ್ಮೆ ಇದನ್ನು ಉಲ್ಲಂ ಸಿದರೆ ಜಿಪಿಎಸ್‌ನಿಂದ ಅಧಿಕಾರಿಗಳಿಗೆ ಮಾಹಿತಿ ತಿಳಿಯಲಿದೆ. ಇಂದಿರಾ ಕ್ಯಾಂಟೀನ್‌ ರೀತಿಯಲ್ಲೇ ಬೆಳಗ್ಗೆ 7.30, ಮಧ್ಯಾಹ್ನ 12.30 ಹಾಗೂ ರಾತ್ರಿ 7.30ಕ್ಕೆ ಮೊಬೈಲ್‌ ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಣೆಯಾಗಲಿದೆ. ಇದರೊಂದಿಗೆ ಜನರಿಗೆ ತಟ್ಟೆ ಇಟ್ಟುಕೊಳ್ಳಲು ಟೇಬಲ್‌ಗ‌ಳನ್ನು ಸಹ ಇರಿಸಲಾಗಿದ್ದು, ಟೋಕನ್‌ ನೀಡಲು ಮತ್ತು ಆಹಾರ ವಿತರಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next