ಲಕ್ನೋ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ರಹಿತ ಮಹಾಮೈತ್ರಿ ಕೂಟ ರಚನೆಯಾಗಲು ಬಿಎಸ್‌ಪಿ ನಾಯಕಿ ಮಾಯಾವತಿಯೇ ಕಾರಣ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಮಾಜಿ ಮುಖ್ಯ ಮಂತ್ರಿಯ ಅತ್ಯಂತ ವಿಶ್ವಾ ಸಾರ್ಹ ನಾಯಕ ಎಸ್.ಸಿ. ಮಿಶ್ರಾ ಪಕ್ಷದ ಪರ ವಾಗಿ ಎಸ್‌ಪಿ ನಾಯಕರ ಜತೆಗೆ ಮಾತುಕತೆ ನಡೆಸಿದ್ದರು. ಎಸ್‌ಪಿ ಪರವಾಗಿ ರಾಜ್ಯಸಭಾ ಸದಸ್ಯ ಸಂಜಯ ಸೇs… ಮುಖ್ಯ ಭೂಮಿಕೆ ವಹಿಸಿದ್ದರು. ಉದ್ಯಮಿಯಾಗಿರುವ ಸಂಜಯ ಸೇs… ಅವರನ್ನು ಉದ್ದೇಶಪೂರ್ವಕವಾಗಿಯೇ ಅಖೀಲೇಶ್ ಆಯ್ಕೆ ಮಾಡಿ ದ್ದರು. ಅದರಂತೆ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ.
ಮೂಲಗಳು “ಎನ್‌ಡಿಟಿವಿ’ಗೆ ನೀಡಿದ ಮಾಹಿತಿ ಪ್ರಕಾರ, ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅನ್ನು ಸೇರಿಸಿಕೊಳ್ಳಲು ಮಾಯಾಗೆ ಇಷ್ಟವಿರಲಿಲ್ಲ. ಮಧ್ಯಪ್ರದೇಶ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಮಾತುಕತೆ ಸುಸೂತ್ರವಾಗಿ ನಡೆಯದೇ ಇದ್ದದ್ದು ಅವರಿಗೆ ಈಗಲೂ ಕೋಪವಿದೆ.
ಗೋರಖ್‌ಪುರ್, ಫೂಲ್ಪುರ್ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಈ ಪ್ರಯೋಗ ಯಶಸ್ವಿಯಾದ ಬಳಿಕ ಅದನ್ನು ಲೋಕಸಭೆ ಚುನಾವಣೆಗೂ ವಿಸ್ತರಿಸಲು ನಿರ್ಧರಿಸಲಾಯಿತು ಎಂದು ಅಖೀಲೇಶ್ ಆಪ್ತ ಸಂಜಯ ಸೇs… ತಿಳಿಸಿದ್ದಾರೆ.
ಉ.ಪ್ರ, ಬಿಹಾರ ನಿರ್ಧಾರ: ಎಸ್‌ಪಿ-ಬಿಎಸ್‌ಪಿ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾ ದರೆ ಸಾಲದು. ದೇಶಾದ್ಯಂತ ಅದು ಇರಬೇಕು ಎಂದಿದ್ದಾರೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್. ಲೋಕಸಭೆ ಚುನಾ ವಣೆ ಬಳಿಕ ಕೇಂದ್ರದಲ್ಲಿ ಯಾರು ಸರಕಾರ ನಡೆಸಬೇಕು ಎಂಬು ದನ್ನು ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ನಿರ್ಧರಿಸಲಿವೆ ಎಂದಿದ್ದಾರೆ. ಲಕ್ನೋದಲ್ಲಿ ಅವರು ಎಸ್‌ಸಿಪಿ ಅಧ್ಯಕ್ಷ ಅಖೀಲೇಶ್ ಜತೆ ಸುದ್ದಿ ಗೋಷ್ಠಿ ನಡೆಸಿ ಈ ಮಾತುಗಳನ್ನಾಡಿದ್ದಾರೆ.
ಮೈತ್ರಿ ಅಂತಿಮ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ 48 ಸ್ಥಾನಗಳ ಪೈಕಿ 45ರಲ್ಲಿ ಸ್ಪರ್ಧಿಸುವ ಬಗ್ಗೆ ಮಾತುಕತೆ ಮುಕ್ತಾಯವಾಗಿವೆ. ಈ ಬಗ್ಗೆ ಎನ್‌ಪಿಸಿ ಮುಖ್ಯಸ್ಥ ಶರದ್ ಪವಾರ್ ಖಚಿತಪಡಿಸಿ ದ್ದಾರೆ. ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಜತೆಗೆ ಯಾವುದೇ ಮೈತ್ರಿ ಇಲ್ಲವೆಂದಿದ್ದಾರೆ ಪವಾರ್.