Advertisement

ಮಜ್‌ಬೂತ್‌ ಸರಕಾರಕ್ಕಿಂತ ಮಜ್‌ಬೂರ್‌ ಸರಕಾರವೇ ಆದೀತು: ಮೋದಿಗೆ ಮಾಯಾವತಿ ವ್ಯಂಗ್ಯ

10:18 AM Jul 08, 2019 | Sathish malya |

ಲಕ್ನೋ: “ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಪೂರ್ಣ ಬಹುಮತದ ಏಕ ಪಕ್ಷದ (ಬಿಜೆಪಿಯ) ಮಜ್‌ಬೂತ್‌ (ಬಲಿಷ್ಠ) ಸರಕಾರ ಇದೆ. ಆದರೂ ಉತ್ತರ ಪ್ರದೇಶದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ; ಅಭಿವೃದ್ಧಿ ಆಗುತ್ತಿಲ್ಲ; ಇದನ್ನು ಗಮನಿಸಿದರೆ ಜನಸಮಾನ್ಯರ ಹಿತಾಸಕ್ತಿಯಲ್ಲಿ ಮಜ್‌ಬೂತ್‌ ಸರಕಾರಕ್ಕಿಂತಲೂ ಮಜ್‌ಬೂರ್‌ (ಅಸಹಾಯಕ) ಸರಕಾರವೇ ಒಳ್ಳೆಯದೆಂದು ಅನ್ನಿಸುತ್ತಿದೆ” ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಕ್‌ ದಾಳಿ ನಡೆಸಿದ್ದಾರೆ.

Advertisement

ಪ್ರಧಾನಿ ಮೋದಿ ಅವರು 2019ರ ಲೋಕಸಭಾ ಚುನಾವಣೆಯ ಪ್ರಚಾರಾಭಿಯಾನದಲ್ಲಿ ಜನರನ್ನು ಉದ್ದೇಶಿಸಿ, ‘ನಿಮಗೆ ಮಜಬೂತ್‌ ಸರಕಾರ ಬೇಕೋ, ಮಜಬೂರ್‌ (ಅಸಹಾಯಕ) ಸರಕಾರ ಬೇಕೋ ಎಂಬುದನ್ನು ನೀವೇ ತೀರ್ಮಾನ ಮಾಡಿ’ ಎಂದು ಹೇಳುತ್ತಿದ್ದರು.

ಇದನ್ನೇ ದೃಷ್ಟಿಯಲ್ಲಿರಿಸಿಕೊಂಡು ವಾಕ್‌ ದಾಳಿ ನಡೆಸಿದ ಮಾಯಾವತಿ, “ಮಜ್‌ಬೂರ್‌ ಸರಕಾರಕ್ಕೆ ಭಯ ಇರುತ್ತದೆ; ಹಾಗಾಗಿ ಅದು ಜನರ ಅಭ್ಯುದಯಕ್ಕೆ ಕೆಲಸ ಮಾಡುವ, ಮಾಡಿ ತೋರಿಸುವ ಛಲ ಹೊಂದಿರುತ್ತದೆ. ಆದರೆ ಮಜ್‌ಬೂತ್‌ (ಬಲಿಷ್ಠ) ಸರಕಾರಕ್ಕೆ ಉರುಳಿ ಬೀಳುವ ಯಾವುದೇ ಭಯ ಇರಲ್ಲ; ಹಾಗಾಗಿ ಅದು ಜನಸಾಮಾನ್ಯರಿಗಾಗಿ ಏನನ್ನೂ ಮಾಡದಿರುವ ಧೈರ್ಯವನ್ನು ಹೊಂದಿರುತ್ತದೆ” ಎಂದು ಪ್ರಧಾನಿ ಮೋದಿ ಅವರನ್ನು ಗುರಿ ಇರಿಸಿಕೊಂಡು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next