Advertisement

ಕಾಂಗ್ರೆಸಿಗೆ ಗದ್ದುಗೆಯ ಗೀಳು ಬಿಜೆಪಿಗೆ ಸೋಲಿನ ದಿಗಿಲು

10:44 AM Apr 08, 2019 | sudhir |

ಹೊಸದಿಲ್ಲಿ: “ದ್ವೇಷದಿಂದ ಕೂಡಿದ ನೀತಿಯಿಂದಾಗಿಯೇ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಸೋಲುಣ್ಣಲಿದ್ದು, ಸೋಲಿನ ದಿಗಿಲು ಪಕ್ಷದ ನಾಯಕರ ಮುಖದಲ್ಲಿ ಎದ್ದು ಕಾಣುತ್ತಿದೆ. ಇನ್ನು, ಕಾಂಗ್ರೆಸ್‌ಗೆ ಹೊಸ ಬದಲಾವಣೆಯೇ ಬೇಕಿಲ್ಲ. ಆ ಪಕ್ಷಕ್ಕೆ ಅಧಿಕಾರವೇ ಮುಖ್ಯ.’

Advertisement

ಹೀಗೆಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕೆಂಡಕಾರಿರುವುದು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಖೀಲೇಶ್‌ ಯಾದವ್‌. ಉತ್ತರಪ್ರದೇಶದ ದೇವ್‌ಬಂದ್‌ನಲ್ಲಿ ಎಸ್‌ಪಿ-ಬಿಎಸ್ಪಿ-ಆರ್‌ಎಲ್‌ಡಿ ಮಹಾಮೈತ್ರಿಯ ಮೊದಲ ರ್ಯಾಲಿ ರವಿವಾರ ನಡೆದಿದ್ದು, ಈ ವೇಳೆ ಮೂರೂ ಪಕ್ಷಗಳ ನಾಯಕರು ಬಿಜೆಪಿ-ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಎರಡೂ ಪಕ್ಷಗಳು ಹಲವು ವರ್ಷಗಳ ಕಾಲ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ, ತಪ್ಪು ನೀತಿಗಳಿಂದಾಗಿ ಜನರನ್ನು ಸಂಕಷ್ಟಕ್ಕೆ ದೂಡಿದವು ಎಂದು ಮಾಯಾವತಿ ಹೇಳಿದ್ದಾರೆ. ಪ್ರಧಾನಿ ಮೋದಿಗೆ ಟಾಂಗ್‌ ಕೊಟ್ಟ ಮಾಯಾ, “ನಿಜವಾಗಲೂ ಪ್ರಧಾನಿ ಮೋದಿಯವರಿಗೆ ಬಡವರ ಕ್ಷೇಮಾಭಿವೃದ್ಧಿ ಬಗ್ಗೆ ಕಾಳಜಿ ಇದ್ದಿದ್ದರೆ, ಚುನಾವಣೆ ಘೋಷಣೆಯಾದ ಬಳಿಕ ಯೋಜನೆಗಳ ಶಿಲಾನ್ಯಾಸ ನೆರವೇರಿಸುತ್ತಿರಲಿಲ್ಲ. 5 ವರ್ಷಗಳ ಆಡಳಿತಾವಧಿಯಲ್ಲೇ ಮಾಡುತ್ತಿದ್ದರು. ಈಗ ಬಿಜೆಪಿಗೆ ದಿಗಿಲು ಮೂಡಿದೆ. ನೋಡು ತ್ತಿರಿ, ಬಿಜೆಪಿಗೆ ಅಧಿಕಾರದಿಂದ ಕೆಳಗಿಳಿಯುವ ಸಮಯ ಬಂದಿದೆ.

ಮಹಾಮೈತ್ರಿಯು ಅಧಿಕಾರ ಹಿಡಿಯ ಲಿದೆ. ಸಣ್ಣ, ದೊಡ್ಡ ಚೌಕಿದಾರರು ಎಷ್ಟೇ ಪ್ರಯತ್ನಿಸಿದರೂ ಬಿಜೆಪಿ ಗೆಲ್ಲಲ್ಲ’ ಎಂದೂ ಮಾಯಾ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್‌ ವಿರುದ್ಧವೂ ಮುಗಿಬಿದ್ದ ಮಾಯಾ ಆ ಪಕ್ಷದ ನ್ಯಾಯ್‌ ಯೋಜನೆಯನ್ನು ಪ್ರಸ್ತಾಪಿಸುತ್ತಾ, “ಇಂದಿರಾ ಕೂಡ ಬಡತನ ನಿರ್ಮೂಲನೆಗೆ 20 ಅಂಶಗಳ ಕಾರ್ಯ ಕ್ರಮ ಜಾರಿ ಮಾಡಿದರು. ಅದೇನಾದರೂ ಪರಿಣಾಮ ಬೀರಿತೇ’ ಎಂದು ಪ್ರಶ್ನಿಸಿದ್ದಾರೆ. ಚುನಾವಣೆ ಬಳಿಕ ಮಹಾ ಮೈತ್ರಿ ಅಧಿಕಾರಕ್ಕೆ ಬರಲಿದ್ದು, ನಾವು ಕನಿಷ್ಠ ಆದಾಯ ನೀಡುವ ಬದಲಿಗೆ, ಬಡ ಜನರಿಗೆ ಉದ್ಯೋಗ ಕಲ್ಪಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಮತ ವಿಭಜನೆಗೆ ಅವಕಾಶ ಕೊಡಬೇಡಿ ಎಂದು ಮುಸ್ಲಿಂ ಮತದಾರರಿಗೆ ಕರೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ವರದಿ ನೀಡು ವಂತೆ ಚುನಾ ವಣಾ ಆಯೋಗ ಸೂಚಿ ಸಿದೆ.

Advertisement

ಮಹಾಪರಿವರ್ತನೆ
ಈಗಿನ ಬಿಜೆಪಿ ಸರಕಾರವು ಬ್ರಿಟಿಷರ ಕಾಲ ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಮಾಜ ವನ್ನು ವಿಭಜಿಸುತ್ತಿದೆ ಎಂದು ಎಸ್ಪಿ ನಾಯಕ ಅಖೀಲೇಶ್‌ ಆರೋಪಿಸಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯು ಮಹಾಪರಿ ವರ್ತನೆ ಯನ್ನು ತರಲಿದೆ ಎಂದೂ ಹೇಳಿ ದ್ದಾರೆ. ಅಲ್ಲದೆ, ಎಸ್ಪಿ-ಆರ್‌ಎಲ್‌ಡಿ-ಬಿಎಸ್ಪಿ ಮೈತ್ರಿ ಯನ್ನು ಶರಾಬ್‌ ಎಂದು ಕರೆದ ಮೋದಿ ಬಗ್ಗೆ ಟೀಕಿಸಿದ ಅಖೀಲೇಶ್‌, ನಮ್ಮನ್ನು ಶರಾಬ್‌ ಎಂದು ಬಣ್ಣಿಸಿದವರೇ ವಾಸ್ತವದಲ್ಲಿ ಅಧಿಕಾರದ ಅಮಲಿನಲ್ಲಿದ್ದಾರೆ ಎಂದಿದ್ದಾರೆ. ಬಳಿಕ ಮಾತನಾಡಿದ ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್‌, “5 ವರ್ಷಗಳಲ್ಲಿ ಮೋದಿ ಅವರು ಮಾಡಿದ್ದೇನು? ಅವರು ನಿಮ್ಮ ಅಚ್ಛೇ ದಿನದ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ಅವರದ್ದೇ ಅಚ್ಛೇ ದಿನದ ಬಗ್ಗೆ ಪ್ರಸ್ತಾಪಿ ಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್‌ಗೆ ಇನ್ನೂ ಪ್ರಧಾನಿ ಅಭ್ಯರ್ಥಿ ಹೆಸರು ಹೇಳಲಿಕ್ಕಾಗಿಲ್ಲ ಅಧಿಕಾರಕ್ಕೆ ಬಂದರೆ ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೆಸರು ಸೂಚಿಸಲು ಇನ್ನೂ ರಾಹುಲ್‌ಬಾಬಾಗೆ ಆಗಲಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಲೇವಡಿ ಮಾಡಿದ್ದಾರೆ. ಒಡಿಶಾದಲ್ಲಿ ಮಾತನಾ ಡಿದ ಅವರು, ಇಂಥ ನಾಯಕತ್ವವು ದೇಶವನ್ನು ಮುಂದಕ್ಕೆ ಕೊಂಡೊಯ್ಯು ವುದಿಲ್ಲ ಎಂದೂ ಹೇಳಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಸಿಎಂ ನವೀನ್‌ ಪಾಟ್ನಾ ಯಕ್‌ಗೆ ಸುಸ್ತಾಗಿದೆ, ಹಾಗಾಗಿ ಬಿಜೆಪಿಗೆ ಅಧಿಕಾರ ನೀಡಿ ಎಂದಿದ್ದಾರೆ.

ಸಿಎಂ ಬೆಂಗಾವಲು ವಾಹನದಲ್ಲಿ ನಗದು: ಎಫ್ಐಆರ್‌
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರ ಬೆಂಗಾವಲು ವಾಹನಗಳಲ್ಲಿ 1.8 ಕೋಟಿ ರೂ. ನಗದು ಪತ್ತೆಯಾದ ಪ್ರಕರಣ ಸಂಬಂಧ ಎಫ್ಐಆರ್‌ ದಾಖಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಮತದಾರರಿಗೆ ಲಂಚ ನೀಡಲು ಹಣ ಒಯ್ಯುತ್ತಿದ್ದ ಆರೋಪ ಹೊರಿಸುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next