Advertisement
ಪಂದ್ಯ ಕೊನೆಗೊಳ್ಳುವಾಗ ಭಾರತ 4 ವಿಕೆಟಿಗೆ 252 ರನ್ ಮಾಡಿತ್ತು. ಇದರಲ್ಲಿ ಅಗರ್ವಾಲ್ ಕೊಡುಗೆ 81 ರನ್ನುಗಳಾದರೆ, ಪಂತ್ 70 ರನ್ ಮಾಡಿದರು. ಪೃಥ್ವಿ ಶಾ 39, ವೃದ್ಧಿಮಾನ್ ಸಾಹಾ ಔಟಾಗದೆ 30 ರನ್ ಮಾಡಿದರು. ಆದರೆ ಓಪನಿಂಗ್ ರೇಸ್‌ನಲ್ಲಿದ್ದ ಶುಭಮನ್ ಗಿಲ್ (8) ಅವರ ವೈಫಲ್ಯ ಇಲ್ಲಿಯೂ ಮುಂದುವರಿಯಿತು.
ಮೊದಲ ಸರದಿಯಲ್ಲಿ ಶಾ ಖಾತೆ ತೆರೆಯಲು ವಿಫಲರಾಗಿದ್ದರು. ಅಗರ್ವಾಲ್ ಒಂದೇ ರನ್ನಿಗೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಟೆಸ್ಟ್ ಸರಣಿಯಲ್ಲಿ ಭಾರತದ ಓಪನಿಂಗ್ ಕತೆ ಏನು ಎಂಬ ಬಗ್ಗೆ ಸಹಜವಾಗಿಯೇ ಚಿಂತೆ ಕಾಡಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇವರಿಬ್ಬರೂ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳುವುದರೊಂದಿಗೆ ಭಾರತದ ಆರಂಭಿಕರ ಸಮಸ್ಯೆ ಬಗೆಹರಿದಿದೆ ಎನ್ನಲಡ್ಡಿಯಿಲ್ಲ. ಇವರಿಂದ ಮೊದಲ ವಿಕೆಟಿಗೆ 9.5 ಓವರ್‌ಗಳಿಂದ 72 ರನ್ ಹರಿದು ಬಂತು. ಆರಂಭಿಕರಿಬ್ಬರೂ ಬಿರುಸಿನ ಆಟಕ್ಕಿಳಿದರು. ರವಿವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಾಯಾಂಕ್ ಅಗರ್ವಾಲ್ ಅವರ 81 ರನ್ 99 ಎಸೆತಗಳಿಂದ ಬಂತು. ಇದರಲ್ಲಿ 10 ಬೌಂಡರಿ ಜತೆಗೆ 3 ಸಿಕ್ಸರ್ ಸೇರಿತ್ತು. ಶಾ 31 ಎಸೆತಗಳಿಂದ 39 ರನ್ ಬಾರಿಸಿದರು (6 ಬೌಂಡರಿ, 1 ಸಿಕ್ಸರ್). ಈ ಪಂದ್ಯಕ್ಕೂ ಮುನ್ನ 10 ಪಂದ್ಯಗಳ 11 ಇನ್ನಿಂಗ್ಸ್‌ಗಳನ್ನಾಡಿದ್ದ ಅಗರ್ವಾಲ್ ಒಮ್ಮೆಯೂ 80 ರನ್ ಗಡಿ ದಾಟಿರಲಿಲ್ಲ. ನ್ಯೂಜಿಲ್ಯಾಂಡ್ “ಎ’ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಂತೂ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿದ್ದರು.
Related Articles
ಗಿಲ್ ಬೇಗನೇ ಪೆವಿಲಿಯನ್ ಸೇರಿಕೊಂಡ ಬಳಿಕ ಬ್ಯಾಟ್ ಹಿಡಿದು ಬಂದ ರಿಷಭ್ ಪಂತ್ ಕೂಡ ಸ್ಫೋಟಕ ಆಟಕ್ಕಿಳಿದರು. ಅವರ 70 ರನ್ ಕೇವಲ 65 ಎಸೆತಗಳಲ್ಲಿ ಬಂತು. 4 ಬೌಂಡರಿ ಜತೆಗೆ 4 ಪ್ರಚಂಡ ಸಿಕ್ಸರ್ ಬಾರಿಸಿ ಆರ್ಭಟಿಸಿದರು. ಅವರ ನಾಲ್ಕೂ ಸಿಕ್ಸರ್‌ಗಳು ಸ್ಪಿನ್ನರ್‌ಗಳಾದ ಸೋಧಿ ಹಾಗೂ ಕೂಪರ್ ಎಸೆತಗಳಲ್ಲಿ ಸಿಡಿದವು. ಅಗರ್ವಾಲ್-ಪಂತ್ ಕೇವಲ 14.3 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರೈಸಿದರು.
Advertisement
ಪಂತ್ ಸಿಡಿದರೂ ಟೆಸ್ಟ್ ತಂಡದ ಕೀಪಿಂಗ್ ಹೊಣೆಗಾರಿಕೆ ವೃದ್ಧಿಮಾನ್ ಸಾಹಾ ಪಾಲಾಗುವು ದರಲ್ಲಿ ಅನುಮಾನವಿಲ್ಲ. ಅವರು 38 ಎಸೆತ ನಿಭಾಯಿಸಿ 30 ರನ್ ಮಾಡಿದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್ ಬೌಲರ್ ಘಾತಕ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕ್ಯುಗೆಲೀನ್, ಟಿಕ್ನರ್ ಇಬ್ಬರೂ ವಿಕೆಟ್ ಲೆಸ್ ಎನಿಸಿದರು. ಉರುಳಿದ 3 ವಿಕೆಟ್ ನಾಯಕ ಡ್ಯಾರಿಲ್ ಮಿಚೆಲ್ ಪಾಲಾಯಿತು.
ಸ್ಕೋರ್ ಪಟ್ಟಿಭಾರತ ಪ್ರಥಮ ಇನ್ನಿಂಗ್ಸ್ 263
ನ್ಯೂಜಿಲ್ಯಾಂಡ್ ಇಲೆವೆನ್
ಪ್ರಥಮ ಇನ್ನಿಂಗ್ಸ್ 235
ಭಾರತ ದ್ವಿತೀಯ ಇನ್ನಿಂಗ್ಸ್
ಪೃಥ್ವಿ ಶಾ ಬಿ ಮಿಚೆಲ್ 39
ಮಾಯಾಂಕ್ ಅಗರ್ವಾಲ್ ನಿವೃತ್ತಿ 81
ಶುಭಮನ್ ಗಿಲ್ ಎಲ್‌ಬಿಡಬ್ಲ್ಯು ಮಿಚೆಲ್ 8
ರಿಷಭ್ ಪಂತ್ ಸಿ ಕ್ಲೀವರ್ ಬಿ ಮಿಚೆಲ್ 70
ವೃದ್ಧಿಮಾನ್ ಸಾಹಾ ಔಟಾಗದೆ 30
ಆರ್. ಅಶ್ವಿನ್ ಔಟಾಗದೆ 16
ಇತರ 8
ಒಟ್ಟು (4 ವಿಕೆಟಿಗೆ) 252
ವಿಕೆಟ್ ಪತನ: 1-72, 2-82, 3-216.
ಬೌಲಿಂಗ್:
ಬ್ಲೇರ್ ಟಿಕ್ನರ್ 3-0-19-0
ಸ್ಕಾಟ್ ಕ್ಯುಗೆಲೀನ್ 12-0-81-0
ಸ್ಕಾಟ್ ಜಾನ್ಸನ್ 4-0-18-0
ಡ್ಯಾರಿಲ್ ಮಿಚೆಲ್ 9-2-33-3
ಜೇಮ್ಸ್ ನೀಶಮ್ 6-1-29-0
ಐಶ್ ಸೋಧಿ 5-0-32-0
ಹೆನ್ರಿ ಕೂಪರ್ 3-0-27-0
ಟಾಮ್ ಬ್ರೂಸ್ 5-1-8-0
ಫಿನ್ ಅಲೆನ್ 1-1-0-0