Advertisement

ಮಾಯಕೊಂಡ ತಾಲೂಕು ಘೋಷಣೆ ಆದೀತೆ?

11:20 AM Mar 02, 2020 | Naveen |

ಮಾಯಕೊಂಡ: ಎಸ್‌.ಸಿ ಮೀಸಲು ಕ್ಷೇತ್ರವಾಗಿರುವ ಮಾಯಕೊಂಡ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ನಾಲ್ಕು ದಶಕಗಳಿಂದ ತಾಲೂಕು ಹೋರಾಟ ಸಮಿತಿ, ವಿವಿಧ ಸಂಘ ಸಂಸ್ಥೆಗಳು ಹೋರಾಟ ನಡೆಸಿದ್ದರೂ ಇನ್ನೂ ಫಲ ಸಿಕ್ಕಿಲ್ಲ.

Advertisement

ಹುಂಡಿಕಾರ್‌, ಗದ್ದಿಗೌಡರ್‌, ವಾಸ್‌ದೇವರಾವ್‌ ಸಮಿತಿಗಳು ಮಾಯಕೊಂಡ ತಾಲೂಕು ರಚನೆಗೆ ಶಿಫಾರಸ್ಸು ಮಾಡಿದ್ದರೂ, ಕ್ಷೇತ್ರದ 20ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳು ನಿರ್ಣಯ ಕೈಗೊಂಡು ಬೆಂಗಳೂರಿಗೆ ನಿಯೋಗದಲ್ಲಿ ತೆರಳಿ ಧರ್ಮಸಿಂಗ್‌, ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ ಶೆಟ್ಟರ್‌, ಸಿದ್ದರಾಮಯ್ಯ, ಕುಮಾರಸ್ವಾಮಿ ನೇತೃತ್ವದ ಎಲ್ಲ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದೇ ಇರುವುದರಿಂದ ಈಗ ಜನ ಮುಂಬರುವ ರಾಜ್ಯ ಬಜೆಟ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಮಾಯಕೊಂಡ ಶಾಸಕ ಪ್ರೊ| ಎನ್‌. ಲಿಂಗಣ್ಣ, ಮಾಜಿ ಶಾಸಕ ಬಸವರಾಜನಾಯ್ಕ ನೇತೃತ್ವದಲ್ಲಿ ಮಾಯಕೊಂಡ ತಾಲೂಕು ಹೋರಾಟ ಸಮಿತಿಯ ಸದಸ್ಯರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಜನ ಪ್ರತಿನಿಧಿಗಳು, ಮುಖಂಡರು ಬೆಂಗಳೂರಿಗೆ ನಿಯೋಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಚುನಾವಣಾ ಪ್ರಚಾರಕ್ಕೆ ಬಾಡ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ತಾವು ಬಿಜೆಪಿ ಗೆಲ್ಲಿಸಿದರೆ ಮಾಯಕೊಂಡ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುತ್ತೇನೆ ಮತ್ತು ತಾಲೂಕು ಕೇಂದ್ರವನ್ನಾಗಿ ಘೋಷಿಸುತ್ತೇನೆ ಎಂದು ಭರವಸೆ ನೀಡಿದ್ದಿರಿ ಎಂದು ನೆನಪಿಸಿದ್ದರು.

ಶಾಸಕರಾದ ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ ಕೂಡ ನಿಯೋಗದ ಬೇಡಿಕೆ ಬೆಂಬಲಿಸಿ ಮಾಯಕೊಂಡ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿದ್ದರು. ನಂತರ ಸಿಎಂ ಸೂಚನೆಯಂತೆ ಜನವರಿ ತಿಂಗಳಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಮಾಯಕೊಂಡ ಗ್ರಾಮದಲ್ಲಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ  ಕೇಂದ್ರದಲ್ಲಿ ಕ್ಷೇತ್ರದ ಜನರ ಸಭೆ ನಡೆದವು. ಬಸವಾಪಟ್ಟಣ, ತ್ಯಾವಣಿಗೆ ಭಾಗದ ಜನತೆ ಮಾಯಕೊಂಡ ತಾಲೂಕು ರಚನೆಗೆ ವಿರೋಧಿಸದಿದ್ದರೂ ತಾವು ಚನ್ನಗಿರಿ ತಾಲೂಕಿನಲ್ಲಿಯೇ ಉಳಿಯುವುದಾಗಿ ಹೇಳಿದರು.

ಆನಗೋಡು ಹೋಬಳಿಯ ಜನತೆ ದಾವಣಗೆರೆ ತಾಲೂಕಿನಲ್ಲಿ ಉಳಿಯುವುದಾಗಿ ಅಭಿಪ್ರಾಯ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ.

Advertisement

ಮಾಯಕೊಂಡ ತಾಲೂಕಿಗೆ ಹೋಬಳಿಯ 55 ಗ್ರಾಮ, ಆನಗೋಡು ಹೋಬಳಿಯ ರಾಷ್ಟ್ರೀಯ ಹೆದ್ದರಿ ಒಳಗಡೆ ಬರುವ ಗ್ರಾಮಗಳು ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಿ.ದುರ್ಗ ಹೋಬಳಿಯ ಕೆಲವು ಗ್ರಾಮಗಳ ಜನರು ಮಾಯಕೊಂಡ ತಾಲೂಕು ಸೇರಲು ಇಚ್ಛೆ ವ್ಯಕ್ತಪಡಿಸಿರುವುದರಿಂದ ಸುಮಾರು 120ಕ್ಕೂ ಹೆಚ್ಚು ಗ್ರಾಮಗಳ ದೊಡ್ಡ ತಾಲೂಕು ರಚನೆ ಮಾಡಬಹುದು. 40 ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಗುತ್ತದೆ ಎಂಬ ನೀರಿಕ್ಷೆಯಲ್ಲಿದ್ದೇವೆ. ರಾಜಕೀಯ ಇಚ್ಛಾಶಕ್ತಿ ಬೇಕು ಎನ್ನುತ್ತಾರೆ ಹೋರಾಟ ಸಮಿತಿ ಅಧ್ಯಕ್ಷ ಹೆದೆ° ಮುರುಗೇಂದ್ರಪ್ಪ ಹಾಗೂ ಗೌರವಾಧ್ಯಕ್ಷ ಎಂ.ಎಸ್‌.ಕೆ. ಶಾಸ್ತ್ರೀ.

ಮಾಯಕೊಂಡ ತಾಲೂಕು ಆಗಬೇಕೆಂಬುದು ನನ್ನ ಆಸೆ. ಆದರೆ ಪರ ಮತ್ತು ವಿರೋಧ ಎರಡೂ ಅಭಿಪ್ರಾಯಗಳಿರುವುದರಿಂದ ವಿಷಯಕ್ಕೆ ಸಂಬಂಧಿಸಿದಂತೆ ತುಂಬ ಹಿಂಸೆ ಇದೆ. ಜಿಲ್ಲೆಯ ಹಿರಿಯ ನಾಯಕರ ಸಲಹೆ ಕೇಳಬೇಕು. ನನಗೆ ಇನ್ನೂ ಸಮಯ ಬೇಕು.
ಪ್ರೊ|ಎನ್‌. ಲಿಂಗಣ್ಣ

„ಶಶಿಧರ್‌ ಶೇಷಗಿರಿ

Advertisement

Udayavani is now on Telegram. Click here to join our channel and stay updated with the latest news.

Next