Advertisement

ಮಾಯಾ ನನ್ನ ಪರ ಮಾತನಾಡಲಿದ್ದಾರೆ

10:55 PM Apr 22, 2019 | Team Udayavani |

ಈ ಬಾರಿ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಯಕ, ವಿವಾದಾತ್ಮಕ ಹೇಳಿಕೆಗಳಿಂದ ಕುಖ್ಯಾತಿ ಗಳಿಸಿರುವ ಅಜಂ ಖಾನ್‌ ಮತ್ತು ಬಿಜೆಪಿ ನಾಯಕಿ, ಚಿತ್ರನಟಿ ಜಯಪ್ರದಾ ನಡುವೆ ತೀವ್ರ ಪೈಪೋಟಿ ಇದೆ. 2 ಅವಧಿಗೆ ಸಮಾಜವಾದಿ ಪಕ್ಷದ ಸಂಸದೆಯಾಗಿದ್ದ ಜಯಪ್ರದಾ ಈ ವರ್ಷ ಬಿಜೆಪಿ ಸೇರಿದ್ದಾರೆ. ಹಿಂದೆ ಖಾನ್‌ ಮತ್ತು ಜಯಪ್ರದಾ ನಡುವೆ ಒಳ್ಳೆಯ ಸ್ನೇಹವಿತ್ತು. ಏಪ್ರಿಲ್‌ 23ರಂದು ಅಲ್ಲಿ ಮತದಾನ ನಡೆಯಲಿದೆ.

Advertisement

ಆಜಂ ಖಾನ್‌ ನಿಮ್ಮ ಬಗ್ಗೆ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಾರೆ, ನಿಮ್ಮ ಬಗ್ಗೆ ಅವರಿಗೇಕೆ ಇಷ್ಟು ಸಿಟ್ಟು?

ಅವರು ನನಗಷ್ಟೇ ಅಲ್ಲ, ಮಾಯಾವತಿ ಯವರನ್ನೂ ನಿಂದಿಸುತ್ತಾರೆ, ಡಿಂಪಲ್‌ ಯಾದವ್‌ರನ್ನೂ ನಿಂದಿಸುತ್ತಾರೆ, ದೇವರನ್ನೂ ನಿಂದಿಸುತ್ತಾರೆ..ಬಹುಶಃ ಇನ್ನೊಬ್ಬರನ್ನು ನಿಂದಿಸುವುದೇ ಅವರ ಗುಣವಿರಬಹುದು.

 ಆಜಂ ಖಾನ್‌ ಹಿಂದೆಯೂ ಕೂಡ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಒಬ್ಬ ಮಹಿಳೆಯಾಗಿ ನಿಮಗೆ ಇದೆಲ್ಲವನ್ನು ನೋಡಿ ಏನನ್ನಿಸುತ್ತದೆ?
ತುಂಬಾ ನೋವಾಗುತ್ತದೆ. ಈ ದೇಶದಲ್ಲಿ ಮಹಿಳೆಗೆ ಮೌಲ್ಯವೇ ಇಲ್ಲವೇನೋ ಎನಿಸು ತ್ತದೆ. ದೇಶದಲ್ಲಿ 33 ಪ್ರತಿಶತ ಮೀಸಲಾತಿಯ ಬಗ್ಗೆ ಮಾತನಾಡಲಾಗುತ್ತದೆ, ಮಹಿಳಾ ದಿನ ವನ್ನು ಆಚರಿಸಲಾಗುತ್ತದೆ..ಈ ಮಾತುಗಳು, ಆಚರಣೆಗಳು ಏಕಾಗಿ? ಆಜಂ ಖಾನ್‌ ನನ್ನನ್ನು ಸಹೋದರಿ ಎಂದು ಕರೆಯುತ್ತಲೇ, ನಾನು ಯಾವ ಬಟ್ಟೆ ಹಾಕುತ್ತೇನೆ, ಮೇಲೇನು ಧರಿಸು ತ್ತೇನೆ, ಒಳಗೇನು ಧರಿಸುತ್ತೇನೆ ಎಂದು ಕಮೆಂಟ್‌ ಮಾಡುತ್ತಾರೆ-ಅದೂ ತುಂಬಿದ ಸಭೆ ಯಲ್ಲಿ. ಈ ರೀತಿ ಯಾವ ಸಹೋದರ ಮಾತ ನಾಡುತ್ತಾರೆ ಹೇಳಿ? ಆ ವ್ಯಕ್ತಿ ಮಾನಸಿಕ ಅಸ್ವಸ್ಥ.

ನೀವು ಡಿಂಪಲ್‌ ಯಾದವ್‌ ಬಗ್ಗೆ ಮಾತನಾ ಡಿದಿರಿ. ಆದರೆ ಅದೇ ಡಿಂಪಲ್‌ ಯಾದವ್‌ ಈಗ ಆಜಂ ಖಾನ್‌ ಪರ ಪ್ರಚಾರ ಮಾಡು ತ್ತಿದ್ದಾರೆ. ನಿಮ್ಮ ಬಗ್ಗೆ ಆಜಂ ಆಡಿರುವ ಮಾತು ಗಳೆಲ್ಲ “ಚಿಕ್ಕ ವಿಷಯ’ ಎನ್ನುತ್ತಿದ್ದಾರವರು.
ಬಹುಶಃ ಡಿಂಪಲ್‌ ಅವರಿಗೆ ಇವೆಲ್ಲ ಚಿಕ್ಕ ವಿಷ ಯವಿರಬಹುದು. ಹಾಗಿದ್ದರೆ ದೊಡ್ಡ ವಿಷಯ ಯಾವುದು ಎನ್ನುವುದನ್ನೂ ಅವರು ಹೇಳಲಿ..ಬಹುಶಃ ಆಜಂ ಪರ ನಿಂತರೆ, ಮುಸಲ್ಮಾನರ ಮತಗಳನ್ನು ಗಿಟ್ಟಿಸಿಕೊಳ್ಳ ಬಹುದು ಎನ್ನುವ ಉದ್ದೇಶ ಡಿಂಪಲ್‌ರಿಗೆ ಇರಬಹುದು.

ಈ ಬಾರಿ ಗೆಲ್ಲುತ್ತೇನೆ ಎಂಬ ಭರವಸೆ ಇದೆಯೇ?
100 ಪರ್ಸೆಂಟ್‌ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆ ಇದೆ.. ಬಡವರು, ಅದರಲ್ಲೂ ಮುಖ್ಯವಾಗಿ ಜಾಟವ ಸಮುದಾಯದವರು ಆಜಂ ಖಾನ್‌ರಿಂದ ತುಂಬಾ ನೊಂದಿದ್ದಾರೆ. ಅವರು ನಮ್ಮ ಪರ ಇದ್ದಾರೆ. ಗೆಲುವು ನಿಶ್ಚಯ.

Advertisement

ನೀವು ಒಂದೆಡೆ ಅಖೀಲೇಶ್‌ ಯಾದವ್‌ರನ್ನು ಸ್ವಾರ್ಥಿ ಎನ್ನುತ್ತೀರಿ. ಇನ್ನೊಂದೆಡೆ ಮಾಯಾ ವತಿಯವರ ಬಗ್ಗೆ ಗೌರವವಿದೆ ಅಂತೀರಲ್ಲ..?
ಮಾಯಾವತಿಯವರು ಕಷ್ಟಪಟ್ಟು ಮೇಲೆ ಬಂದ ಮಹಿಳೆ. ಅವರ ಬಗ್ಗೆ ನನಗಂತೂ ಗೌರವವಿದೆ.

ಆದರೆ ಮಾಯಾವತಿಯವರು ನಿಮ್ಮ ಬಗ್ಗೆ ಸಮಾಜವಾದಿ ಪಕ್ಷದ ನಾಯಕರು ಆಡುತ್ತಿರುವ ಮಾತುಗಳನ್ನು ಖಂಡಿಸಿಲ್ಲವಲ್ಲ
ಖಂಡಿತ ಖಂಡಿಸುತ್ತಾರೆ ನೋಡುತ್ತಿರಿ.

ನೀವು 1994ರಿಂದ ಉತ್ತರ ಭಾರತದಲ್ಲಿ ಸಕ್ರಿಯರಾಗಿದ್ದೀರಿ. ಉತ್ತರ ಭಾರತದ ರಾಜ ನೀತಿ ಮತ್ತು ದಕ್ಷಿಣ ಭಾರತದ ರಾಜನೀತಿಯಲ್ಲಿ ನಿಮಗೆ ಏನು ವ್ಯತ್ಯಾಸ ಕಾಣಿಸುತ್ತದೆ?
ಬಹಳ ಅಂತರವಿದೆ. ಅದರಲ್ಲೂ ಉತ್ತರ ಪ್ರದೇಶವೇನಿದೆ ಇದು ಭಾರತೀಯ ರಾಜಕೀ ಯದ ಹೃದಯವಿದ್ದಂತೆ, ಈ ಭಾಗದಲ್ಲಿ ಪ್ರಾದೇಶಿಕ ಪಕ್ಷಗಳಷ್ಟೇ ಅಲ್ಲದೇ,ರಾಷ್ಟ್ರೀಯ ಪಕ್ಷಗಳ ಅಸ್ತಿತ್ವವೂ ಬಲಿಷ್ಠವಾಗಿ ಇರುತ್ತದೆ…

ನೀವು ಮೂಲತಃ ಕಲಾವಿದರು…ಮತ್ತೆ ಸಿನೆಮಾಕ್ಕೆ ಹಿಂದಿರುಗುವಿರಾ?
ನಾನು ಈಗಲೂ ಸಿನೆಮಾ ಕ್ಷೇತ್ರದಲ್ಲಿ ತೊಡಗಿ ಸಿಕೊಂಡಿದ್ದೇನೆ. ಚುನಾವಣೆಗಳು ಮುಗಿದ ನಂತರ ಮತ್ತೆ ಫಿಲಂಗಳನ್ನು ಮಾಡುತ್ತೇನೆ.

ಸಂದರ್ಶನ ಕೃಪೆ: ಅಮರ್‌ ಉಜಾಲಾ

Advertisement

Udayavani is now on Telegram. Click here to join our channel and stay updated with the latest news.

Next