ಮೈಸೂರು: ಜನಮನದ ಜೀವನಾಡಿ ಎಂದೆ ಹೆಸರಾದ ನಾಡಿನ ಹೆಮ್ಮೆಯ ಕನ್ನಡ ದಿನಪತ್ರಿಕೆ ಉದಯವಾಣಿ ಯಶಸ್ವಿಯಾಗಿ 50 ವರ್ಷಗಳನ್ನು ಪೂರೈಸಿದ್ದು, ಇದರ ಭಾಗವಾಗಿ ರಾಜ್ಯೋ ತ್ಸವದಂದು ಹೊರತಂದಿರುವ ಸುವರ್ಣ ಸಂಪದ ವಿಶೇಷ ಸಂಚಿಕೆ-2021ನ್ನು ಸಹಕಾರ ಸಚಿವ ಹಾಗೂ ಮೈಸೂರು, ಚಾಮ ರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಬಿಡುಗಡೆ ಮಾಡಿದರು.
ಸೋಮವಾರ ಮುಂಜಾನೆ ನಗರದ ಅರ ಮನೆ ಆವರಣದಲ್ಲಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ ಅವರು, ಉದಯವಾಣಿ ಪತ್ರಿಕೆ 50ನೇ ವರ್ಷ ಆಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ. ಒಂದು ಪತ್ರಿಕೆ 50 ವರ್ಷ ದಾಟಿ ಮುನ್ನ ಡೆಯುವುದು ಕಡಿಮೆ ಸಾಧನೆಯೇನಲ್ಲ.
ಎಲ್ಲಾ ಅಡೆತಡೆ ದಾಟಿ ಈವ ರೆಗೆ ಸಾಗಿ ಬಂದಿರುವ ಉದಯವಾಣಿ ಪತ್ರಿಕೆ ಇನ್ನಷ್ಟು ಸಾಧನೆಗಳು ಮಾಡಲಿ, ಶತಮನೋತ್ಸವ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದಾ ಪಾಲನೇತ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವ ಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಪಾಲಿಕೆ ಆಯುಕ್ತ ಲಕ್ಷ್ಮೀ ಕಾಂತರೆಡ್ಡಿ ಹಾಜರಿದ್ದರು.
ಇದನ್ನೂ ಓದಿ:- ಸೈದಾಪುರ: ಕನ್ನಡಾಂಬೆಯ ಭಾವಚಿತ್ರಕ್ಕೆ ವಿಶೇಷ ಪೂಜೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಡಿಸಿಪಿ ಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ.ನ ವ್ಯಾಪಾರಾಭಿವೃದ್ಧಿ ವಿಭಾಗದ ಡಿಜಿಎಂ ಸತೀಶ್ ಶೆಣೈ, ಬೆಂಗಳೂರು ಆವೃತ್ತಿ ಗ್ರಾಮೀಣ ಸುದ್ದಿ ವಿಭಾಗದ ಮುಖ್ಯಸ್ಥ ಅ.ಮ. ಸುರೇಶ್, ಉಪ ಮುಖ್ಯ ವರದಿಗಾರ ಲಕ್ಷ್ಮೀ ನಾರಾ ಯಣ, ಜಾಹೀರಾತು ವಿಭಾಗದ ಸಹ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಕೃಷ್ಣಪ್ಪ, ಪ್ರಸರಣ ವಿಭಾಗದ ವ್ಯವಸ್ಥಾಪಕ ರಾಜಣ್ಣ, ಸಹ ವ್ಯವಸ್ಥಾಪಕ ವಿರುಪಾಕ್ಷಗೌಡ ಚಿಕ್ಕನಗೌಡರ್, ಎಸ್. ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.