ಮಾಗಡಿ: ದೀಕ್ಷೆ ಸ್ವೀಕರಿಸಿರುವ ಕಿರಿಯ ಶ್ರೀ ಶಿವಮಹಂತಸ್ವಾಮಿ ಸಮಾಜದ ಆಸ್ತಿ, ಸಮಾಜದ ಶ್ರೇಯೋಭಿವೃದ್ಧಿಗೆ ತಮ್ಮದೇ ಆಧ್ಯಾತ್ಮಿಕ ಜ್ಯೋತಿ ಬೆಳಗಿಸುವಂತಾಗಲಿ ಎಂದು ಸಿದ್ಧಗಂಗಾ ಮಠದ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು. ತಾಲೂಕಿನ ಸೋಲೂರು ಹೋಬಳಿ ಗದ್ದುಗೆ ಮಠದ ಮಹಂತೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸರಳವಾಗಿ ನಡೆದ ಕಿರಿಯ ಶ್ರೀ ಶಿವಮಹಂತಸ್ವಾಮಿ ದೀಕ್ಷೆ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗುರುಪರಂಪರೆ ಅತ್ಯಂತ ಶ್ರೇಷ್ಠ ವಾದುದು. ಅಂತಹ ಗುರು ದೀಕ್ಷೆ ಪಡೆದಿರುವ ಹರೀಶ್, ಈಗ ಶಿವಮಹಂತಸ್ವಾಮೀಜಿ ಯಾಗಿದ್ದಾರೆ. ಇಂದಿನಿಂದ ಸಮಾ ಜದ ಆಸ್ತಿ ಯಾಗಿದ್ದಾರೆ. ಸಂತರ ಸರಳ ಜೀವನ ಮತ್ತು ಆಧ್ಯಾತ್ಮಿಕ ಬದುಕು ಬಹಳ ಕಠಿಣವಾದುದು. ತಪಸ್ಸಿನ ಫಲದಿಂದ ಸಿದ್ಧಿಸಿಕೊಳ್ಳಬೇಕು. ಭಕ್ತರಿಗೆ ಆಶೀರ್ವಾದದ ಜೊತೆಗೆ ಸತ್ಸಂಗ, ಮಾರ್ಗ ದರ್ಶನ ನೀಡಿ, ಸಮಾಜದಲ್ಲಿ ಶ್ರೇಯೋಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಂದರು.
ಗದ್ದುಗೆ ಮಠದ ಉತ್ತರಾಧಿಕಾರಿಯಾಗಿ ದೀಕ್ಷೆ ಸ್ವೀಕರಿಸಿ ದ ನೂತನ ಕಿರಿಯ ಶ್ರೀಗಳಾದ ಶಿವಮಹಂತಸ್ವಾಮೀಜಿ ಸಸಿ ನೆಟ್ಟು ಮಾತನಾಡಿದರು. ನಾನು ಸಿದ್ಧಗಂಗಾ ಶಿವೈಕ್ಯ ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರದಲ್ಲಿ ಜನಿಸಿದ್ದೇನೆ. ಗದ್ದುಗೆ ಮಠದ ಗುರುಪರಂಪರೆ ಮೈಗೂಡಿ ಸಿಕೊಂಡು ಧರ್ಮ ಜ್ಯೋತಿ ಬೆಳಗಿಸುತ್ತೇನೆ ಎಂದರು. ಪಟ್ಟಾಭಿಷೇಕ ಪ್ರಯುಕ್ತ ಮಠದ ಮಹಂತೇ ಶ್ವರ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ಅರ್ಚನೆ, ವಿಶೇಷ ಹೂವಿನ ಅಲಂಕಾರ ಪೂಜೆ ನೆರವೇರಿಸಿದರು.
ಗದ್ದುಗೆ ಮಠದ ಹಿರಿಯ ಶ್ರೀ ಮಹಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಕಂಚಗಲ್ ಬಂಡೇ ಮಠದ ಬಸವಲಿಂಗ ಶ್ರೀ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶಿವರುದ್ರ ಸ್ವಾಮೀಜಿ, ನೆಲ ಮಂಗಲದ ಸಿದ್ಧಲಿಂಗ ಶ್ರೀ, ಗಮ್ಮಸಂದ್ರ ಮಠದ ಚಂದ್ರ ಶೇಖರ ಸ್ವಾಮೀಜಿ ಸೇರಿ ಹರಗುರು ಚರಮೂರ್ತಿಗಳು, ಹಾಗೂ ವೀರಶೈವ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.