Advertisement

ನಿಸಾರ್ಥ ಸೇವಾ ಮನೋಭಾವದ ಸಮಿತಿ ಅಭಿವೃದ್ಧಿ ಹೊಂದಲಿ: ಜಯ ಎಂ. ಶೆಟ್ಟಿ

05:14 PM Feb 13, 2024 | Nagendra Trasi |

ವಸಾಯಿ: ದೂರಗಾಮಿ ಚಿಂತನೆಯ, ಪ್ರಗತಿಪರ ಯೋಚನೆಯ ಬೆರಳೆಣಿಕೆಯ ಮಂದಿ ಸ್ಥಾಪಿಸಿದ ವಸಾಯಿ ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿಗೆ ಅಧ್ಯಾತ್ಮವೇ ಭದ್ರ ಬುನಾದಿ. ಬದಲಾವಣೆಯ ಕಾಲ ಘಟ್ಟದಲ್ಲಿ ಇಂದು ಧರ್ಮ, ಸಂಸ್ಕೃತಿಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ. ಪರಸ್ಪರ ಸಹನೆ, ಸಹಕಾರ, ಸಂಪ್ರದಾಯದೊಂದಿಗೆ ಮುಂದಿನ ಪೀಳಿಗೆಗೆ ಮಾರ್ಗದ ರ್ಶಕರಾಗೋಣ ಎಂದು ವಸಾಯಿ ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಜಯ ಎಂ. ಶೆಟ್ಟಿ ತಿಳಿಸಿದರು.

Advertisement

ಫೆ. 10ರಂದು ವಸಾಯಿ ಪಶ್ವಿ‌ಮದ ನವಯುಗ್‌ ನಗರ, ದಿವಾನ್‌ ಮನ್‌ ತಲಾವ್‌ ಸಮೀಪದ ವಸಾಯಿ ಸಾರ್ವ ಜನಿಕ ಶ್ರೀ ಶನೀಶ್ವರ ಸೇವಾ ಸಮಿತಿಯ 25ನೇ ವಾರ್ಷಿಕ ಸಮಾರಂಭದಲ್ಲಿ ಅವರು ಮಾತನಾಡಿ, ಕಿತ್ತು ತಿನ್ನುವ ಬಡ ತನದಲ್ಲೂ ತುಳು – ಕನ್ನಡಿಗರು ದೇಣಿಗೆ ನೀಡಿ ಈ ಸಂಸ್ಥೆಯನ್ನು ಬೆಳೆಸಿದರು. ನಿಷ್ಕಳಂಕ ಪ್ರೇಮ, ನಿಸ್ವಾರ್ಥ ಭಾವನೆ ಯಿಂದ ಬೆಳೆದು ನಿಂತ ಸಮಿತಿ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಹೇಳಿ 25 ವರ್ಷಗಳ ಕಾಲ ನಿರಂತ ರವಾಗಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಶ್ರೀಕಾಂತ್‌ ಭಟ್‌ ಥಾಣೆ ಪೌರೋಹಿತ್ಯದಲ್ಲಿ ಬೆಳಗ್ಗೆ ಗಣಪತಿ ಹೋಮ, ನಾಗಾಭಿಷೇಕ, ಶ್ರೀ ಹನುಮಾನ್‌ ಪೂಜೆ, ಶ್ರೀ ಸತ್ಯನಾರಾಯಣ ಮಹಾಪೂಜೆ, ಅಪರಾಹ್ನ ಹರೀಶ್‌ ಶಾಂತಿ ಅವರಿಂದ ಕಲಶ ಪ್ರತಿಷ್ಠೆ ನಡೆಯಿತು. ಗಣಪತಿ ಹೋಮದಲ್ಲಿ ದಿನೇಶ್‌ ಕರ್ಕೇರ ಮತ್ತು ಪುಷ್ಪಾ ಕರ್ಕೇರ ದಂಪತಿ, ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ನಿತಿನ್‌ ಪೂಜಾರಿ ಮತ್ತು ದೀಪಿಕಾ ಪೂಜಾರಿ ದಂಪತಿ, ಶ್ರೀ ಶನಿ ಮಹಾಪೂಜೆಯಲ್ಲಿ ಸ್ಥಾಪಕ ಅಧ್ಯಕ್ಷ ಜಯ ಎಂ. ಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ದಂಪತಿ ಪೂಜೆಯ
ವ್ರತ ಕೈಗೊಂಡರು.

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಪೋರ್ಟ್‌ ಮುಂಬಯಿ ಸದಸ್ಯರಿಂದ ಶ್ರೀ ಶನಿ ಗ್ರಂಥ ಪಾರಾಯಣವು ಯಕ್ಷಗಾನ ತಾಳಮದ್ದಳೆ ರೀತಿಯಲ್ಲಿ ನಡೆಯಿತು. ರಾತ್ರಿ ಭಜನೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಸಾರ್ವ ಜನಿಕ ಅನ್ನಸಂತರ್ಪಣೆ ಜರಗಿತು. ಸಮಾರಂಭದಲ್ಲಿ ನಿರಂತರ 25 ವರ್ಷ ಸೇವೆಗೈದ ಸ್ಥಾಪಕಾಧ್ಯಕ್ಷ ಜಯ ಎಂ. ಶೆಟ್ಟಿ ದಂಪತಿಯನ್ನು ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಪುಷ್ಪಗುತ್ಛ, ಸ್ಮರಣಿಕೆ, ಸಮ್ಮಾನಪತ್ರ ವನ್ನಿತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸಮ್ಮಾನಿಸಿದರು.

ದಾನಿಗಳು, ಸ್ಥಳೀಯ ಸಂಘ -ಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ನಿಧಿಯ ಪ್ರಸಾದ ನೀಡಿ ಗೌರವಿಸಲಾಯಿತು. ಗೌರವಾಧ್ಯಕ್ಷ ಪಾಂಡು ಎಲ್‌. ಶೆಟ್ಟಿ, ಅಧ್ಯಕ್ಷ ಉಮೇಶ್‌ ಎಚ್‌. ಕರ್ಕೇರ, ಉಪಾಧ್ಯಕ್ಷ ಜಯ ಜಿ. ಅಮೀನ್‌, ಗೌರವ ಕೋಶಾಧಿಕಾರಿ ಉಮೇಶ್‌ ಎಂ. ಕರ್ಕೇರ, ಜತೆ ಕಾರ್ಯದರ್ಶಿ ಕೆ. ಪಿ. ಶ್ಯಾಮ್, ಜತೆ ಕೋಶಾಧಿಕಾರಿ ಶಂಕರ ಬಿಲ್ಲವ, ಪ್ರಧಾನ ಅರ್ಚಕ ಶಶಿ‌ ಕರ್ಕೇರ ಉಪಸ್ಥಿತರಿದ್ದರು.

Advertisement

ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧಾಕರ ಎನ್‌. ಬಂಗೇರ, ದಿನೇಶ್‌ ಎ. ಭಂಡಾರಿ, ಲಕ್ಷ್ಮಣ್‌ ಜಿ. ಅಂಚನ್‌, ಕೆ. ಟಿ. ಬಂಗೇರ, ಬಿ. ವಿಟಲ್‌ ರೈ, ಸುಧಾಕರ ಸುವರ್ಣ, ಸಂಜೀವ ಪೂಜಾರಿ, ಸಮಿತಿ ಸದಸ್ಯರಾದ ಸದಾ ಎಂ. ಪೂಜಾರಿ, ಆನಂದ ಕುಂದರ್‌, ದೇವೆಂದ್ರ ಸುರತ್ಕಲ್‌ , ಸಂಜೀವ ಶೆಟ್ಟಿ, ಶೇಖರ ಮೈಂದನ್‌, ಹರೀಶ್‌ ಶೆಟ್ಟಿ, ದಿನೇಶ್‌ ಕರ್ಕೇರ, ಚಂದ್ರಶೇಖರ ಎಂ. ಕರ್ಕೇರ, ತೇಜ್‌ಪಾಲ್‌ ಕಿದಿಯೂರು ಮೊದಲಾದವರು ಪಾಲ್ಗೊಂಡಿದ್ದರು.

ಸ್ಥಳೀಯ ನಗರ ಸೇವಕರು, ರಾಜಕೀಯ ಮುಖಂಡರು, ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಬಿಲ್ಲವರ ಅಸೋಸಿಯೇನ್‌ ಸೇವಾ ದಳದ ಸದಸ್ಯರು, ಮಹಿಳಾ ವಿಭಾಗ ದವರು ಸಹಕರಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಎನ್‌. ಬಂಗೇರ ನಿರೂಪಿಸಿ, ವಂದಿಸಿದರು.

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next