Advertisement

ಭರವಸೆಯ ಬೆಳಕು ಆರದಿರಲಿ…

11:30 PM Dec 15, 2019 | Sriram |

ಪ್ರತಿಯೊಬ್ಬರಲ್ಲೂ ಒಂದು ಸಣ್ಣ ಮಗುವಿನ ಗುಣ ಅಡಕವಾಗಿರುತ್ತದೆ. ಬೆಳಗ್ಗಿನ ಸೂರ್ಯ ಉದಯಿಸಿದರೂ, ಮೋಡಗಳ ಮರೆಯಲ್ಲಿ ಕಾಣದೇ ಇರಬಹುದು. ಆದರೆ ಆತನ ಕಿರಣಗಳು ಸಣ್ಣ ಅಲೆಯಂತೆ ಪ್ರಕಾಶಿಸುತ್ತವೆ. ಹಾಗೆಯೇ ಬದುಕು ಒಂದು ಅಲೆಯಂತೆ. ಅಲ್ಲಿ ಮೋಡಗಳಂತೆ ಅಡ್ಡಗಟ್ಟುವವರು ಅದೆಷ್ಟು ಜನರಿದ್ದರೂ ಬೆನ್ನೆಲುಬಾಗಿ ಒಬ್ಬರಾದರೂ ಇದ್ದೇ ಇರುತ್ತಾರೆ.

Advertisement

ನಾಳೆ ಎಂಬುದು ತಾಯಿ ಹೊಟ್ಟೆಯಲ್ಲಿನ ಮಗುವಿನಂತೆ. ಸಣ್ಣಪುಟ್ಟ ಯಶಸ್ಸು ಸಾಧನೆಯ ಹಾದಿಯಲ್ಲಿ ಹೊಸ ಚೈತನ್ಯ ನೀಡುತ್ತದೆ. ನಕಾರಾತ್ಮಕ ಬದಲಾವಣೆಗಳಾದರೂ ಇಂತಹ ಕಥೆಗಳು ನಮ್ಮಲ್ಲಿ ಸಕಾರಾತ್ಮಕ ಭಾವನೆಯನ್ನು ಬೆಳೆಸಲು ಸಹಾಯಕ.

ಇಂದಿನ ಯುವಜನತೆ ಹೇಗೆಂದರೆ ಯಾವುದೇ ವಿಷಯವನ್ನು ತಿಳಿಯದೆ ಇದರಲ್ಲಿ ತಾನೂ ಸೇರಿಕೊಳ್ಳುವುದು. ಅದರಿಂದಾಗುವ ಸಮಸ್ಯೆ ಏನು ಎಂದು ಸಹ ಯೋಚನೆ ಮಾಡುವ ತಾಳ್ಮೆ ಅವರಲ್ಲಿರದು. ಒಟ್ಟಿನಲ್ಲಿ ತಾನೂ ಎಲ್ಲರಂತೆ ಇರಬೇಕೆನ್ನುವುದು ಒಂದು. ಇಲ್ಲಿ ಅವರ ಮನಸ್ಥಿತಿ ಅವರನ್ನು ತಾಳ್ಮೆಯಿಂದ ಯೋಚಿಸಲು ಎಂದಿಗೂ ಬಿಡುವುದಿಲ್ಲ. ಇಲ್ಲಿ ಸಮಯ ಅನ್ನೋದು ಎಷ್ಟು ಮುಖ್ಯವೆಂದರೆ ಅದಕ್ಕಿರುವಷ್ಟು ಪ್ರೀತಿ ಕಾಳಜಿ ಇನ್ನಾವುದಕ್ಕೂ ತಿಳಿದಿಲ್ಲ.

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫ‌ಲವೇನು ಎನ್ನುವಂತೆ, ಏನಾದರೂ ಮಾಡುವ ಮೊದಲು ತಾಳ್ಮೆಯಿಂದ ಯೋಚಿಸಿ ನಿರ್ಧರಿಸಿದರೆ ಉತ್ತಮ ಬದುಕು ರೂಪಿಸಬಹುದು. ಪ್ರತಿಯೊಬ್ಬರಿಗೂ ಜೀವನದಲ್ಲಿ ನಡೆಯುವ ಘಟನೆಗಳು ಇನ್ನೊಬ್ಬರ ಸಾಧನೆಗೆ ಮುನ್ನುಡಿಯಾಗಲೂಬಹುದು.

ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಘಟನೆಗಳು ಇನ್ನೊಬ್ಬರ ಸಾಧನೆಗೆ ಶ್ರೀಕಾರವಾಗಲೂಬಹುದು. ನಮ್ಮಲ್ಲಿರುವ ಸಾಮರ್ಥ್ಯಕ್ಕೆ ತಕ್ಕದಾದ ಬೆಲೆ ಸಿಗಬೇಕಾದರೆ ಪರಿಶ್ರಮದ ಜತೆಗೆ ಶ್ರದ್ಧೆಯೂ ಅತ್ಯಗತ್ಯ. ಯುವಜನತೆ ಯೋಚಿಸುವ ಮೊದಲೇ ನಿರ್ಧರಿಸುತ್ತದೆ. ಈ ನಿರ್ಧಾರದಿಂದ ಆನಂದಕ್ಕಿಂತ ಆತುರತೆಯ ಘಟನೆಗಳೇ ಹೆಚ್ಚಾಗಿ ನಡೆಯುತ್ತದೆ. ಯಾವುದೇ ವಿಷಯವಾಗಿರಲಿ ಮೊದಲು ಆಲೋಚಿಸಬೇಕು. ಬಳಿಕ ಚಿಂತಿಸಬೇಕು. ಕೊನೆಗೆ ನಿರ್ಧಾರ ಕೈಗೊಳ್ಳುವ ಗುಣವನ್ನು ಹೊಂದಿರಬೇಕು, ಇಲ್ಲವಾದಲ್ಲಿ ಬದುಕು ಕಷ್ಟವಾಗುತ್ತದೆ.

Advertisement

ಅಂದುಕೊಂಡಂತೆ ಆಗಬೇಕಿಲ್ಲ
ಸಂಬಂಧಗಳು ಉಳಿಯಬೇಕಾದರೆ ಭಾವನೆಗಳ ಕುರಿತು ಕಾಳಜಿ,ಗೌರವ,ಪ್ರೀತಿ ಇರಬೇಕು.ಆದರೆ ಇತ್ತೀಚಿನ ದಿನಗಳಲ್ಲಿ ಇದು ಕ್ಷೀಣಿಸುತ್ತಿದೆ.ಮುಖ್ಯವಾಗಿ ಈ ಹವ್ಯಾಸ ಉದ್ಯೋಗದ ವಿಚಾರಗಳಲ್ಲಿ ಇಲ್ಲವಾದಲ್ಲಿ ಬದುಕು ಕಷ್ಟವೆನಿಸುತ್ತದೆ. ಎಲ್ಲವೂ ನಾವು ಅಂದುಕೊಂಡಂತೆಯೆ ಆಗುವುದಿಲ್ಲ. ಅತಿ ಶಿಸ್ತಿನಿಂದ ಎಲ್ಲವನ್ನೂ ಮಾಡುವೆನೆಂದರೆ ಕೆಲವೊಂದು ಬಾರಿ ಹಾಸ್ಯಾಸ್ಪದವಾಗಿ ಪರಿಣಮಿಸುವುದುಂಟು. ಅಂದುಕೊಂಡ ಉದ್ದೇಶ ಈಡೇರದೇ ಇರಲು ಇದೂ ಒಂದು ಕಾರಣವಾಗಲೂಬಹುದು. ನಾವು ಪರರ ಹಿತವನ್ನು ಬಯಸುವುದಾದರೆ ನಮ್ಮ ಹಿತ ಕಾಯುವವರೂ ಅನೇಕರಿರುತ್ತಾರೆ.

-ವಿಶು ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next