Advertisement
ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುತ್ಯಾರು ಯಾಗ ಸಂಘಟನ ಸಮಿತಿಯ ಆಶ್ರಯದಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ. ಶಾಲೆಯ ಪ್ರಾಂಗಣದಲ್ಲಿ ಐದು ದಿನಗಳ ಕಾಲ ಲೋಕ ಕಲ್ಯಾಣಾರ್ಥ ಜರಗಲಿರುವ ಸಹಸ್ರಮಾನ ನವಕುಂಡ ಶ್ರೀ ಮಹಾಗಣಪತಿ ಅಥರ್ವಶೀರ್ಷ ಮಹಾಯಾಗ, ಸನಾತನ ಧರ್ಮ ಸಂಸತ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗಳು ಗೌರವಿಸಿದರು. ಯಾಗ ಸಂಘಟನ ಸಮಿತಿಯ ವತಿ ಯಿಂದ ಮುಖ್ಯಮಂತ್ರಿಗಳನ್ನು ಗೌರವಿಸ ಲಾಯಿತು.
Related Articles
Advertisement
ಯಾಗದ ಮಹಾ ಸಂಚಾಲಕ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಅನಂತ ಮೂಡಿತ್ತಾಯ ವಂದಿಸಿದರು.
ಶಾಂತಿ, ಸುಭಿಕ್ಷೆ ನೆಲೆಸಲಿ: ಪುತ್ತಿಗೆ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ನಿಸ್ವಾರ್ಥ ಕರ್ಮ ಭಗವಂತನನ್ನು ಸೇರುತ್ತದೆ. ಭಕ್ತಿ, ಶ್ರದ್ಧೆಗಳಿಂದ ದೇವರನ್ನು ಒಲಿಸಿಕೊಂಡಾಗ ಅನುಗ್ರಹ ಪ್ರಾಪ್ತಿಯಾಗಿ ಮಳೆ, ಬೆಳೆ, ಸಮೃದ್ಧಿಯುಂಟಾಗುತ್ತದೆ. ಲೋಕಕಲ್ಯಾಣಾರ್ಥ ಯಾಗದಲ್ಲಿ ಮುಖ್ಯಮಂತ್ರಿಗಳು ಭಕ್ತಿ, ಶ್ರದ್ಧೆಯಿಂದ ಭಾಗವಹಿಸಿ ಸಂಕಲ್ಪ ಮಾಡಿದ್ದು, ಅವರ ಮೂಲಕ ಲೋಕದಲ್ಲಿ ಸುಭಿಕ್ಷೆ, ಶಾಂತಿ ನೆಲೆಸುವಂತಾಗಲಿ ಎಂದರು.