Advertisement
ಈಜಿಪ್ತಿನ ದಾಸ್ಯತ್ವದಲ್ಲಿ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹಾಗೂ ಹೊಸ ಬದುಕಿನೆಡೆಗೆ ಕರೆದೊಯ್ದ ಚಾರಿತ್ರಿಕ ನೆನಪಿನ ಆಚರಣೆಯೂ ಈ ಹಬ್ಬದೊಂದಿಗೆ ಸೇರಿಕೊಂಡಿದೆ. ಹೀಗಾಗಿ ಈಸ್ಟರ್ ಯೇಸುಕ್ರಿಸ್ತರು ಮರಣದ ಮೇಲೆ ಜಯವನ್ನು ಸಾರಿದ ಅವರ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ ಹೊಸ ಜೀವನ, ಹೊಸ ಸೃಷ್ಟಿ ಹಾಗೂ ಹೊಸ ಅನ್ವೇಷಣೆಯಿಂದ “ಮರಣವೇ ಜೀವನದ ಅಂತಿಮ ಅಲ್ಲ’ ಎಂಬುದನ್ನೂ ಸಾರುತ್ತದೆ.
ದುಃಖವನ್ನು ಮಾತ್ರ ಪಡೆಯಬಾರದೋ? ಈ ಈಸ್ಟರ್ ಹಬ್ಬದಂದು ಈ ಸೋಂಕಿನ ವಿರುದ್ಧ ಹೋರಾಡುತ್ತಿರುವ ಎಲ್ಲ ವಿಜ್ಞಾನಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬಂದಿಗಳಿಗಾಗಿ; ಜನತೆಯ ಅಸುರಕ್ಷತೆಯನ್ನು ದೂರಗೊಳಿಸಿ ವಿಶ್ವಾಸ ತುಂಬುತ್ತಿರುವ ಎಲ್ಲ ಅಧಿಕಾರಿಗಳಿಗಾಗಿ; ಹಸಿದು ಕಂಗೆಟ್ಟ ನಿರಾಶ್ರಿತ ಜನತೆ ಹಾಗೂ ಅಶಕ್ತರಿಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸಹಾಯ ಮಾಡುತ್ತಿರುವ ಎಲ್ಲ ಸುಮನಸ್ಸಿನ ಜನರಿಗಾಗಿ ಹಾಗೂ ಇವುಗಳನ್ನೆಲ್ಲ ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿರುವ ಜನ ಪ್ರತಿನಿಧಿಗಳಿಗಾಗಿ ನಮ್ಮ ವಿಶೇಷ ಪ್ರಾರ್ಥನೆಗಳು ಸಲ್ಲಲಿ. ಮರಣದ ಮೇಲೆ ಜಯಶಾಲಿಯಾದ ಪ್ರಭು ಯೇಸುಕ್ರಿಸ್ತರು ಎಲ್ಲರ ಮನೆ ಮನಗಳಲ್ಲಿ ನವಜೀವನದ ಭರವಸೆಯನ್ನು ಮೂಡಿಸಲಿ ಎಂದು ಉಡುಪಿಯ ಧರ್ಮಾಧ್ಯಕ್ಷರಾದ ಜೆರಾಲ್ಡ್ ಲೋಬೋ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.