Advertisement

ಹರಪನಹಳ್ಳಿ: ಭಾರತ್ ಐಕ್ಯತಾ ಯಾತ್ರೆ ಯಶಸ್ವಿಯಾಗಲಿ: ಎಂ.ಪಿ.ಲತಾ

10:25 AM Sep 08, 2022 | Team Udayavani |

ಹರಪನಹಳ್ಳಿ: ರಾಷ್ಟ್ರೀಯ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರ ಸಾರಥ್ಯದಲ್ಲಿ ಕೈಗೊಂಡಿರುವ ಭಾರತ್ ಐಕ್ಯತಾ ಯಾತ್ರೆ ಅಭಿಯಾನ ಯಶಸ್ವಿಯಾಗಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಶುಭ ಹಾರೈಸಿದರು.

Advertisement

ಬುಧವಾರ ಸಂಜೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿರುವ ಗಾಂಧಿ ಮೆಮೋರಿಯಲ್ ಹಾಲ್‌ಗೆ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಅರ್ಪಿಸಿ ನಂತರ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 150 ದಿನಗಳ 3570 ಕಿ.ಮೀ ವರೆಗೂ ನಡೆಯಲಿದ್ದು ಪಾದಯಾತ್ರೆ ಉದ್ದಕ್ಕೂ ರಾಹುಲ್ ಗಾಂಧಿಯವರು ಅಲ್ಲಿನ ಜನರ ಸ್ಥಿತಿ-ಗತಿ  ಅವರ ಜೀವನ ಶೈಲಿ ಆಲಿಸಲಿದ್ದಾರೆ ಎಂದರು.

ಈ ಸದ್ಭಾವನಾ ಯಾತ್ರೆಯು ನಮ್ಮ ರಾಜ್ಯಕ್ಕೆ ಕೇರಳದ ವಯ್ನಾಡಿನಿಂದ ಗುಂಡ್ಲುಪೇಟೆ ಮೂಲಕ ಅಕ್ಟೋಬರ್ ನಲ್ಲಿ ತಲುಪಲಿದೆ, ಬಳ್ಳಾರಿ, ವಿಜಯನಗರದ ಕೂಡ್ಲಿಗಿ ಮೂಲಕ ಹಾದು ಹೋಗಲಿರುವ ಈ ಯಾತ್ರೆಗೆ ನಾವು ಕೂಡ ಸಾಥ್ ನೀಡುತ್ತವೆ ಎಂದ ಅವರು ಭಾರತ್ ಐಕ್ಯತಾ ಯಾತ್ರೆಗೆ ಯಾವುದೇ ಅಡಚಣೆಯಾಗದಂತೆ ಯಶಸ್ವಿಯಾಗಿ ನಡೆಯಲಿ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ವಿ.ಅಂಜಿನಪ್ಪ ಮಾತನಾಡಿ, ಬ್ರಿಟೀಷರನ್ನು ದೇಶದಿಂದ ಹೊಡೆದೊಡಿಸಿದ ರೀತಿಯಲ್ಲೆಯೇ ಬಿಜೆಪಿಯನ್ನು ಅಧಿಕಾರದಿಂದ ಹೊಡಿಸಬೇಕಾಗಿದೆ, ಬಿಜೆಪಿ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ, ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಇವೆಲ್ಲವನ್ನೂ ಜನರಿಗೆ ತಿಳಿಸಬೇಕಾದ ಅಗತ್ಯ ಇದೆ, ಹಾಗಾಗಿ ಭಾರತ ರಾಷ್ಟೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾರತ ಐಕ್ಯತಾ ಯಾತ್ರೆ ಕೈಗೊಂಡಿದ್ದು ಇದು ಯಶಸ್ವಿಯಾಗಲೆಂದು ಶುಭ ಕೋರಿದರು.

ಇದೇ ವೇಳೆ ಕಾರ್ಯಕತ೯ರು ಮೇಣದ ಬತ್ತಿ ಬೆಳಗಿಸುವ ಮೂಲಕ ಭಾರತ್ ಜೋಡೋ ಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವೆಂಕಟೇಶ್ ವಕೀಲರು, ಚಿಕ್ಕೇರಿ ಬಸಪ್ಪ, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಉದಯ್ ಶಂಕರ್, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ಬಾಲಾಜಿ ಶಿವರಾಜ್, ರಮೇಶ್, ನರೇಶ್, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್, ಸಹನಾ, ವನಜಾಕ್ಷಮ್ಮ, ರತ್ನಮ್ಮ, ರೇಣುಕಮ್ಮ, ಹಾಲಮ್ಮ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.