Advertisement
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಡಾ| ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ರಂಗಾಯಣ ಮೈಸೂರು ಅಭಿನಯದ “ಸೂತ್ರಧಾರ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಬಿ.ಪಿ. ತಿಪ್ಪೇಸ್ವಾಮಿ ಮಾತನಾಡಿ, ಭಾರತದ ರಾಷ್ಟ್ರೀಯ ಗ್ರಂಥ ಸಂವಿಧಾನವಾದರೆ, ಪ್ರಜಾಪ್ರಭುತ್ವವೇ ರಾಷ್ಟ್ರೀಯ ಧರ್ಮ. ಸಂವಿಧಾನ ಸಮರ್ಥಿಸಿದಾಗ ಪಾರ್ಲಿಮೆಂಟಿನಲ್ಲಿ ಮಾತನಾಡಿದ ಬಾಬಾ ಸಾಹೇಬರು ಇನ್ನು ಮುಂದೆ ದೇಶವನ್ನಾಳುವ ರಾಜ, ರಾಣಿಯ ಹೊಟ್ಟೆಯಲ್ಲಿ ಜನಿಸದೆ ಮತಪೆಟ್ಟಿಗೆಯಲ್ಲಿ ಜನಿಸುತ್ತಾನೆ ಎಂದಿದ್ದರು. ಸಂವಿಧಾನ ರಚಿಸಿಕೊಳ್ಳಲು ಬ್ರಿಟಿಷರು ಭಾರತೀಯರಿಗೆ ಸೂಚಿಸಿದಾಗ ಹತ್ತಾರು ಧರ್ಮಗಳು, ನೂರಾರು ಸಂಸ್ಕೃತಿಗಳು, ಪ್ರಜಾಪ್ರಭುತ್ವದ ಅರ್ಥವೇ ತಿಳಿಯದ ಅರವತ್ತು ಸಾವಿರಕ್ಕೂ ಹೆಚ್ಚಿನ ಜಾತಿಗಳು, ಅನೇಕ ಭಾಷೆಗಳ ಸಂಕೀರ್ಣ ಪ್ರೇರಣೆಯಿಂದ ತುಂಬಿದ್ದ ಭಾರತೀಯ ಸಮಾಜದ ಸಂವಿಧಾನ ರಚಿಸುವುದು ಸವಾಲಿನ ಕೆಲಸವಾಗಿತ್ತು ಎಂದರು.
ಜಿಪಂ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ, ಹಿರಿಯ ಸಾಹಿತಿ ಪ್ರೊ| ಎಚ್. ಲಿಂಗಪ್ಪ, ಆರ್ಥಿಕ ವಿಶ್ಲೇಷಕ ಜಿ.ಎನ್. ಮಲ್ಲಿಕಾರ್ಜುನಪ್ಪ, ನಿವೃತ್ತ ಸಮಾಜ ಕಲ್ಯಾಣಾಧಿ ಕಾರಿ ಬಿ.ಪಿ. ಪ್ರೇಮನಾಥ್, ಸ್ಲಂ ಜನಾಂದೋಲನ ಅಧ್ಯಕ್ಷ ಕೆ. ರಾಜಣ್ಣ, ಚಳ್ಳಕೆರೆ ನಗರಸಭಾ ಸದಸ್ಯ ಕೆ. ವೀರಭದ್ರಪ್ಪ, ಪ್ರಾಚಾರ್ಯರಾದ ಗುರುಮೂರ್ತಿ, ದೇವೇಂದ್ರಪ್ಪ, ರಾಮಣ್ಣ, ಮೈಸೂರಿನ ರಂಗಕರ್ಮಿ ಶಿವಲಿಂಗಯ್ಯ ಮತ್ತಿತರರು ಇದ್ದರು.
ನ್ಯಾಯವಾದಿ ಬೆನಕನಹಳ್ಳಿ ಚಂದ್ರಪ್ಪ ಸ್ವಾಗತಿಸಿದರು. ನ್ಯಾಯವಾದಿ ಸಿ. ಕುಮಾರ್ ಪಾಳ್ಯ ವಂದಿಸಿದರು. ಉಪನ್ಯಾಸಕ ಡಾ| ಬಿ.ಎಂ. ಗುರುನಾಥ್ ನಿರೂಪಿಸಿದರು.
ವಿಧಾನ ಎಷ್ಟೇ ಒಳ್ಳೆಯದಿದ್ದರೂ ಅದನ್ನು ಆಚರಣೆಗೆ ತರುವವರು ಕೆಟ್ಟವರಾಗಿದ್ದರೆ ಯಾವುದೇ ಆಶಯ ಈಡೇರುವುದಿಲ್ಲ. ಆದ್ದರಿಂದ ಆಡಳಿತ ನಡೆಸುವವರು ಸಂವಿಧಾನದ ಮೂಲ ಆಶಯಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಂಬೇಡ್ಕರ್ ಬಹಳ ಹಿಂದೆಯೇ ಹೇಳಿದ್ದಾರೆ. ∙ಬಿ.ಪಿ. ತಿಪ್ಪೇಸ್ವಾಮಿ, ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ