Advertisement

ಕೇಂದ್ರದಿಂದ ಮೇ ತಿಂಗಳ ಪಡಿತರ ಆಹಾರ ಧಾನ್ಯ ಬಿಡುಗಡೆ

01:31 PM May 02, 2020 | Suhan S |

ಧಾರವಾಡ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಹಾರ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಲ್ಲಿ ಮೇ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಹೆಚ್ಚುವರಿಯಾಗಿ ವಿತರಿಸಲು ಆಹಾರ ಧಾನ್ಯವನ್ನು ಬಿಡುಗಡೆ ಮಾಡಿದೆ.

Advertisement

ಈ ಆಹಾರ ಧಾನ್ಯವನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡಿ ಜಿಲ್ಲೆಯ 8 ಸಗಟು ಮಳಿಗೆಗಳ ಮೂಲಕ 508 ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಏಕಕಾಲಕ್ಕೆ ಮೇ 3ರಂದು ಬೆಳಗ್ಗೆ 7 ಗಂಟೆಯಿಂದ ಆಹಾರಧಾನ್ಯ ವಿತರಣೆ ಆಗಲಿದ್ದು, ಪಡಿತರ ಚೀಟಿದಾರರು ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ನ್ಯಾಯಬೆಲೆ ಅಂಗಡಿಯಿಂದ ಆಹಾರ ಧಾನ್ಯವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಪಡೆಯಲು ಕೋರಲಾಗಿದೆ.

ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬದ ಒಬ್ಬ ಸದಸ್ಯರಿಗೆ 10 ಕೆಜಿಯಂತೆ ಅಕ್ಕಿ ಹಾಗೂ ಪ್ರತಿ ಚೀಟಿಗೆ 1 ಕೆಜಿ ತೊಗರಿಬೇಳೆ ಉಚಿತವಾಗಿ ವಿತರಿಸಲಾಗುವುದು. ಬಿಪಿಎಲ್‌ ಚೀಟಿ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಹಾಗೂ ಪ್ರತಿ ಚೀಟಿಗೆ 1 ಕೆಜಿ ತೊಗರಿ ಬೇಳೆ ಉಚಿತವಾಗಿ ವಿತರಿಸಲಾಗುವುದು. ಎಪಿಎಲ್‌ ಪಡಿತರ ಚೀಟಿ ಹೊಂದಿರುವ ಏಕ ಸದಸ್ಯ ಪಡಿತರ ಚೀಟಿಗೆ 5 ಕೆಜಿಯಂತೆ ಹಾಗೂ ಎರಡು ಅಥವಾ ಎರಡಕ್ಕಿಂತ ಹೆಚ್ಚಿಗೆ ಸದಸ್ಯರಿರುವ ಪಡಿತರ ಚೀಟಿಗೆ 10 ಕೆಜಿಯಂತೆ ಅಕ್ಕಿ ಪ್ರತಿ ಕೆಜಿಗೆ 15 ರೂ. ಗಳಂತೆ ವಿತರಿಸಲಾಗುವುದು. ಹೊಸ ಪಡಿತರ ಚೀಟಿ ಕೋರಿ ಸಲ್ಲಿಸಿದ ಬಿಪಿಎಲ್‌ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಹಾಗೂ ಎಪಿಎಲ್‌ ಪ್ರತಿ ಅರ್ಜಿಗೆ 10 ಕೆಜಿಯಂತೆ ಪ್ರತಿ ಕೆಜಿ 15 ರೂ.ಗಳಂತೆ ವಿತರಿಸಲಾಗುವುದು ಎಂದು ಡಿಸಿ ದೀಪಾ ಚೋಳನ್‌ ತಿಳಿಸಿದ್ದಾರೆ.

ಅಕ್ರಮ ಕಂಡುಬಂದರೆ ದೂರು ನೀಡಿ: ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರಧಾನ್ಯ ವಿತರಿಸುವಾಗ ಅಕ್ರಮವೆಸಗಿದ ಸಂದರ್ಭದಲ್ಲಿ ತಕ್ಷಣ ಈ ಕೆಳಕಂಡ ಸಂಖ್ಯೆಗೆ ದೂರು ಸಲ್ಲಿಸಿದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಧಾರವಾಡ: 0836-2233822, ಮೊ:9845059245-9449357188, 9448221892, ಹುಬ್ಬಳ್ಳಿ: 0836 -2358388, ಮೊ: 9035074105, 8904840724, 8310490713, ಕಲಘಟಗಿ: 08370 – 284535, ಮೊ:7899972947, 8792340158, ಕುಂದಗೋಳ: 08304-290239, ಮೊ:9480145628, ನವಲಗುಂದ: 08380 -229240, ಮೊ:9620734505, 9902142458, ಹುಬ್ಬಳ್ಳಿ ಪಡಿತರ ಪ್ರದೇಶ: ಮೊ:9481008296, 9035074105, 9886320360, 9880725639 ಹಾಗೂ ಧಾರವಾಡ ಪಡಿತರ ಪ್ರದೇಶ: 0836-2446624, ಮೊ: 8088737170, 9108752005, ಜಿಲ್ಲಾಧಿಕಾರಿ ಕಾರ್ಯಾಲಯದ ಆಹಾರ ಶಾಖೆ-0836 2444594 ಸಂಪರ್ಕಿಸಬಹುದು ಎಂದು ಡಿಸಿ ದೀಪಾ ಚೋಳನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next