ಬೈಲಹೊಂಗಲ:ವೀರರಾಣಿ ಬೆಳವಡಿ ಮಲ್ಲಮ್ಮನ ತ್ಯಾಗ, ಬಲಿದಾನವನ್ನು ಇಂದಿನ ಪೀಳಿಗೆ ಸ್ಮರಿಸುವ ಕಾರ್ಯ ಮಾಡಬೇಕೆಂದು ಹಿರಿಯ ಸಾಹಿತಿ ಯ.ರು.ಪಾಟೀಲ ಹೇಳಿದರು.
ಬೆಳವಡಿ ಮಲ್ಲಮ್ಮನ ಉತ್ಸವದ ವಿಚಾರಸಂಕೀರಣದಲ್ಲಿ ಅವರು ಮಾತನಾಡಿ, ಬೆಳವಡಿಯಲ್ಲಿ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿಯಾಗಬೇಕು. ಹೋಬಳಿಯಾಗಿ ಹೊರಹೊಮ್ಮಬೇಕು. ನಾಗರಿಕರು ಇಚ್ಛಾಶಕ್ತಿ ತೋರಿ ಸರಕಾರದ ಮೇಲೆ ಒತ್ತಡ ತರಬೇಕೆಂದರು.
ರಾಜ್ಯ ನ್ಯಾಯಾಲಯ ನೋಟರಿ ಸಂಘದ ಕಾರ್ಯದರ್ಶಿ ಸಿ.ಎಸ್.ಚಿಕ್ಕನಗೌಡರ ಮಾತನಾಡಿ, ಬೆಳವಡಿ ಮಲ್ಲಮ್ಮನ ಉತ್ಸವ ನಿಮಿತ್ತ ಸಮಾಜ ಮತ್ತು ಶೆ„ಕ್ಷಣಿಕವಾಗಿ ಅತ್ಯಂತ ಉಪಯುಕ್ತ ವಿಚಾರ ಸಂಕೀರಣ ಏರ್ಪಡಿಸಲಾಗಿದೆ. ಕಳೆದ 10 ವರ್ಷಗಳಿಂದ ಮಲ್ಲಮ್ಮನ ಉತ್ಸವ ಅದ್ದೂರಿಯಾಗಿ ಆಚರಿಸಲ್ಪಟ್ಟರೂ ಕೇವಲ ಮನೋರಂಜನೆಗಾಗಿ ಎನ್ನುವಂತಾಗಬಾರದು. ರಾಣಿ ಮಲ್ಲಮ್ಮನ ಉತ್ಸವಕ್ಕೆ ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರಚಾರ ನೀಡುವಂತ ಕೆಲಸವನ್ನು ಸರಕಾರ ಮಾಡಬೇಕು ಎಂದರು.
ರಾಣಿ ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಆರ್.ಬಿ.ಪಾಟೀಲ ಮಾತನಾಡಿ, ಬೆಳವಡಿ ಮಲ್ಲಮ್ಮನ ಶೌರ್ಯ ಸಾಹಸದ ಇತಿಹಾಸ ಮುಂದಿನ ಪೀಳಿಗೆ ತಿಳಿಯುವಂತಾಗಲು ಶಾಲಾ ಕಾಲೇಜು ಪಠ್ಯದಲ್ಲಿ ಸೇರಿಸಬೇಕು. ಮುಂದಿನ ವರ್ಷದ ಉತ್ಸವದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿದರೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿದರು. ಶಿಕ್ಷಣ ಸಂಯೋಜಕ ಪಿ.ಸಿ.ಮಾಸ್ತಹೊಳಿ, ಸಾಹಿತಿ ಸಂಗಮೇಶ ಕುಲಕರ್ಣಿ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಸ್ವಾಗತಿಸಿದರು. ಸಿಆರ್‌ಪಿ ರಾಜು ಹಕ್ಕಿ ನಿರೂಪಿಸಿದರು. ಪ್ರಾಚಾರ್ಯ ಎನ್.ಸಿ.ಯರಗಂಬಳಿಮಠ, ಉಪನ್ಯಾಸಕರಾದ ಎಮ್ .ಪಿ.ಉಪ್ಪಿನ, ಎಸ್.ಸಿ. ಗುಗ್ಗರಿ, ಯಾಸೀನ ಕಿತ್ತೂರ, ಎಮ್.ಎಮ್.ಕಾಡೇಶನವರ, ವಿ.ಎಸ್.ಸಳಕೆನ್ನವರ,
ಎಫ್.ವಿ.ಕರೀಕಟ್ಟಿ, ಬಿ.ಎಂ.ಚಿಕ್ಕನಗೌಡರ, ಶಿವಪ್ಪ ಹುಂಬಿ, ಎಮ್.ಜಿ.ಹಿರೇಮಠ, ಅಶೋಕ ಹಕ್ಕರಕಿ, ದಯಾನಂದ ಮುಪ್ಪಯ್ಯನವರಮಠ, ಮತ್ತಿತರರು ಉಪಸ್ಥಿತರಿದ್ದರು.