ಯಾವುದೇ ಆಮಿಷಗಳಿಲ್ಲದ ಚುನಾವಣೆ ನಡೆಸಿ ಜಗಳೂರು ಕ್ಷೇತ್ರದ ಮತದಾರರು ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಶ್ರೀ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Advertisement
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಕ್ಷೇತ್ರದ ಶುದ್ಧೀಕರಣ ಪ್ರಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂತಹ ರಾಜಕೀಯ ಪ್ರಯೋಗಕ್ಕೆ ತಾವು ಕೈಹಾಕಿರುವುದು ಇದೇ ಮೊದಲೇನಲ್ಲ. 1994 ರಲ್ಲಿ ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆದುಕೊಳ್ಳುವಂತೆ ಮತದಾರರಿಗೆ ಕರೆಕೊಟ್ಟಿದ್ದೆವು. ಅದರಂತೆ ಮತದಾರರು ತಮ್ಮ ಆಶಯವನ್ನು ಈಡೇರಿಸಿದ್ದರು ಎಂದರು.
ಮುಳುಗೇಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಮತದಾರರನ್ನು ಜಾಗೃತಗೊಳಿಸಿ ಹಣ, ಹೆಂಡ, ತೋಳ್ಬಲ, ಜಾತಿಯನ್ನು ಮೀರಿದ ಚುನಾವಣೆ ನಡೆಸುವ ಸಾಹಸಕ್ಕೆ ಮುಂದಾಗಿದ್ದೇವೆ. ಇದಕ್ಕೆ ಜಗಳೂರು ಕ್ಷೇತ್ರದ ಮತದಾರರು ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಜಗಳೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ನಡೆದಿದೆ. ಅದರಂತೆಯೇ ಈಗ ಶುದ್ಧವಾದ ಚುನಾವಣೆಯನ್ನು ಈ ಕ್ಷೇತ್ರದ ಜನರು ಮಾಡಬೇಕು. ರಾಜಕೀಯ ವ್ಯವಸ್ಥೆ ಕೆಸರಿನಲ್ಲಿ ಸಿಲುಕಿದ ವ್ಯಕ್ತಿ ಮೇಲೆ ಬಾರದೆ ಒದ್ದಾಡುವಂತಿದೆ. ಕೆಸರಿನಲ್ಲಿ ಸಿಲುಕಿದವರನ್ನು ಮೇಲೆತ್ತಲು ಹೋದವರು ಅಲ್ಲಿಯೇ ಸಿಕ್ಕಿಕೊಂಡಿದ್ದಾರೆ. ರಾಜಕೀಯ ಮುಂದಾಳುಗಳು, ಅವರ ಬೆಂಬಲಿಗರು, ಮತದಾರರಿಂದ ಮಾತ್ರ ಶುದ್ಧ ಚುನಾವಣೆ ಸಾಧ್ಯ. ಎಲ್ಲರೂ ಸೈನ್ಯೋಪಾದಿಯಲ್ಲಿ
ಮನಸ್ಸು ಮಾಡಿ, ಜಾಗೃತಿ ಮೂಡಿಸಿದರೆ ಯಶಸ್ಸು ನಿಜವಾಗಿಯೂ ಸಿಗುತ್ತದೆ ಎಂದರು. ಅಂತೆಯೇ ಚುನಾವಣೆಗೆ ಸ್ಪರ್ಧಿಸಿದ ಉಮೇದುವಾರರು ಮತದಾರರಿಗೆ ಚುನಾವಣೆಯ ಸಂದರ್ಭದಲ್ಲಿ ಹಣ, ಹೆಂಡ ಹಂಚುವುದನ್ನು ನಿಲ್ಲಿಸಬೇಕು. ಎಲ್ಲಾ ಉಮೇದುವಾರರು ಸಾಮೂಹಿಕವಾಗಿ ಪ್ರಚಾರ ಕಾರ್ಯವನ್ನು ಏರ್ಪಡಿಸಬೇಕು. ಅಲ್ಲಿ ಪರಸ್ಪರರನ್ನು ತೆಗೆಳದೆ ಚುನಾವಣೆಯಲ್ಲಿ ವಿಜಯಶಾಲಿಗಳಾದಲ್ಲಿ ಕ್ಷೇತ್ರಕ್ಕೆ ಮಾಡುವ ಉತ್ತಮ ಕೆಲಸಗಳೇನೆಂಬುದನ್ನು ಮತದಾರರಿಗೆ ವಿವರಿಸಬೇಕು ಎಂದು ತಿಳಿಸಿದರು.
Related Articles
ಕ್ಷೇತ್ರದಲ್ಲಿರುವ ಎಲ್ಲಾ ಧರ್ಮಗುರುಗಳೂ ಈ ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಅಂದು ನಡೆಯಲಿರುವ ಸಭೆಯಲ್ಲಿ ಜಿಪಂ, ತಾಪಂ, ಗ್ರಾಪಂ, ಎಪಿಎಂಸಿ, ಪಟ್ಟಣ ಪುರಸಭೆಯ ಹಾಲಿ ಮತ್ತು ಮಾಜಿ ಸದಸ್ಯರು, ಸರ್ವಪಕ್ಷದ ಬೆಂಬಲಿಗರು ಹಾಗೂ ಮತದಾರರು ಭಾಗವಹಿಸುತ್ತಾರೆ ಎಂದು ಹೇಳಿದರು. ಸಾಣೇಹಳ್ಳಿ ಪೀಠಾಧ್ಯಕ್ಷರಾದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಲಿ ಶಾಸಕ ಎಚ್.ಪಿ. ರಾಜೇಶ್, ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ವಿ. ರಾಮಚಂದ್ರಪ್ಪ ಉಪಸ್ಥಿತರಿದ್ದರು. ಶ್ರೀಗಳ ಆಶಯಕ್ಕೆ ಸಹಮತ ಸ್ಪಷ್ಟಪಡಿಸಿದರು. ನಾಗರಾಜ್, ಕೆಂಚನಗೌಡ, ಎಸ್ .ಬಿ. ರಾಜು, ಭೈರೇಶ, ಮಂಜಣ್ಣ, ಚಂದ್ರನಾಯ್ಕ,
ಶಿವಮೂರ್ತಿ ಮತ್ತಿತರರು ರಾಜಕೀಯ ಶುದ್ಧೀಕರಣ ಪ್ರಯೋಗದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶ್ರೀಗಳ ಪ್ರಯೋಗಕ್ಕೆ ಬೆಂಬಲ
ಘೋಷಿಸಿದರು.
Advertisement