Advertisement

ಮೇ 24ರಿಂದ ಪಿಯು ಮೌಲ್ಯಮಾಪನ ಕಾರ್ಯ ಆರಂಭ; ಮೇ 20ರಿಂದ ಬೇಸಗೆ ರಜೆ

01:26 AM May 19, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಬುಧವಾರ ನಡೆದ ಹಿಂದಿ ಪರೀಕ್ಷೆಯೊಂದಿಗೆ 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮೇ 24ರಿಂದ ಮೌಲ್ಯಮಾಪನ ಕಾರ್ಯಗಳು ಆರಂಭವಾಗಲಿವೆ.

Advertisement

ಮೌಲ್ಯಮಾಪನ ಕಾರ್ಯಕ್ಕೆ ಸುಮಾರು 19 ಸಾವಿರ ಉಪನ್ಯಾಸಕರು ನೋಂದಣಿ ಮಾಡಿಕೊಂಡಿದ್ದು, ಮೇ 22 ಮತ್ತು 23ರಂದು ತರಬೇತಿ ನೀಡಲಾಗುತ್ತದೆ. ಮೇ 24ರಿಂದ ಮೌಲ್ಯಮಾಪನ ಕಾರ್ಯಗಳು ಆರಂಭವಾಗಲಿವೆ ಎಂದು ಪಿಯು ಇಲಾಖೆ ತಿಳಿಸಿದೆ.

ನಾಳೆಯಿಂದ ಬೇಸಗೆ ರಜೆ: ಪದವಿ ಪೂರ್ವ ಕಾಲೇಜುಗಳ 2021-22ನೇ ಸಾಲಿನ ಕಾರ್ಯನಿರ್ವಹಣೆ ದಿನವು ಮೇ 19 ಆಗಿದೆ. ಮೇ 20ರಿಂದ ಜೂ.8ರ ವರೆಗೆ ಬೇಸಗೆ ರಜೆ ಘೋಷಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next