Advertisement

ಪಂಜಾಬ್ ಗೆ ಸೋಲುಣಿಸಿದ ಕೊಹ್ಲಿ ಪಡೆ ಪ್ಲೇ ಆಫ್ ನತ್ತ

08:32 PM Oct 03, 2021 | Team Udayavani |

ಶಾರ್ಜಾ: ಐಪಿಎಲ್ ನ ರವಿವಾರದ ಹಗಲು ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಪಂಬಾಬ್‌ ಕಿಂಗ್ಸ್‌ ವಿರುದ್ಧ 6 ರನ್ ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್  ಬಹುತೇಕ ಖಚಿತಗೊಳಿಸಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆ 20 ಓವರ್ ಗಳಲ್ಲಿ7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಕೊಹ್ಲಿ 25, ಪಡಿಕ್ಕಲ್ 40, ವಿಲಿಯರ್ಸ್ 23, ಅರ್ಧಶತಕ ಸಿಡಿಸಿದ ಮ್ಯಾಕ್ಸ್ ವೆಲ್ 57 ರನ್ ಗಳ ಕೊಡುಗೆ ಸಲ್ಲಿಸಿದರು. ಪಂಜಾಬ್ ಪರ ಮಾಕ್ರಮ್ ಮತ್ತು ಹೆನ್ರಿಕ್ಸ್ ತಲಾ 3 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ರಾಹುಲ್ ಪಡೆ ಉತ್ತಮ ಆರಂಭ ಮಾಡಿದರೂ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳನ್ನು ಮಾತ್ರ ಗಳಿಸಿ ಸೋಲಿಗೆ ಶರಣಾಯಿತು. ರಾಹುಲ್ 39 ಮತ್ತು ಮಾಯಾಂಕ್ ಅಗರವಾಲ್ 57 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರಾದರೂ ಆರ್ ಸಿ ಬಿ ಬೌಲಿಂಗ್ ಎದುರು ಉಳಿದ ಆಟಗಾರರಿಗೆ ಜಯ ತಂದು ಕೊಡುವುದು ಸಾಧ್ಯವಾಗಲಿಲ್ಲ.ಆರ್ ಸಿ ಬಿ ಪರ ಚಹಲ್ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ಲೇ ಆಫ್ ಪ್ರವೇಶದ ಕ್ಷೀಣ ಅವಕಾಶ ಹೊಂದಿದ್ದ ಕೆ.ಎಲ್ .ರಾಹುಲ್ ನಾಯಕತ್ವದ ಪಂಬಾಬ್‌ ಕಿಂಗ್ಸ್‌ ಗೆ ಈ ಸೋಲು ಭಾರೀ ಹೊಡೆತ ನೀಡಿದೆ.

ಅಹ್ಮದಾಬಾದ್‌ನಲ್ಲಿ ನಡೆದ ಮೊದಲ ಮುಖಾ ಮುಖಿಯಲ್ಲಿ ಪಂಜಾಬ್‌ ಪಡೆ ಆರ್‌ಸಿಬಿ ವಿರುದ್ಧ 34 ರನ್‌ ಗಳ ಗೆಲುವು ಸಾಧಿಸಿತ್ತು. ಅನಂತರ ಆರ್‌ಸಿಬಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದು ಅಂಕಪಟ್ಟಿಯಲ್ಲಿ 3ನೇ ಸ್ಥಾನವನ್ನು ಗಟ್ಟಿಗೊಳಿಸಿದೆ. ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next