Advertisement

ಮ್ಯಾಕ್ಸಿಸ್‌ ಕೇಸು: ಚಿದು, ಕಾರ್ತಿ ಮನೆ ಮೇಲೆ ರೈಡ್‌

12:29 PM Jan 14, 2018 | |

ಹೊಸದಿಲ್ಲಿ:  ಏರ್‌ಸೆಲ್‌- ಮ್ಯಾಕ್ಸಿಸ್‌ ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ 10 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶನಿವಾರ ಶೋಧ ಕಾರ್ಯ ನಡೆಸಿದೆ. ಶನಿವಾರ ಬೆಳ್ಳಂಬೆಳಗ್ಗೆ ಈ ದಾಳಿ ನಡೆದಿದ್ದು, ಚೆನ್ನೈಯ 9 ಕಡೆ ಹಾಗೂ ದಿಲ್ಲಿಯಲ್ಲಿರುವ ಚಿದಂಬರಂ ನಿವಾಸದಲ್ಲಿ ಶೋಧ ನಡೆಸಲಾಗಿದೆ.

Advertisement

ದಾಳಿ ವೇಳೆ ದೋಷ ಹೊರಿಸಲು ಸಹಾಯಕವಾಗುವಂಥ ಕೆಲವು ದಾಖಲೆಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ದಾಳಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಚಿದಂಬರಂ, “ನನ್ನ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು, ಮನೆಯಲ್ಲಿ ಏನೂ ಸಿಗದೇ ಇದ್ದುದರಿಂದ ತೀವ್ರ ಮುಜುಗರಕ್ಕೀಡಾದರು. ಅಲ್ಲದೆ, ಅವರ ಮೊಗದಲ್ಲಿ ಪಶ್ಚಾತ್ತಾಪವೂ ಕಂಡುಬಂತು’ ಎಂದಿದ್ದಾರೆ. ಅಧಿಕಾರಿಗಳ ಕೈಯ್ಯಲ್ಲಿ ಸರ್ಚ್‌ ವಾರಂಟ್‌ ಇದ್ದ ಕಾರಣ, ನಾನೇನೂ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದೂ ತಿಳಿಸಿದ್ದಾರೆ.  ಕಳೆದ ಡಿಸೆಂಬರ್‌ 1ರಂದೂ ಕಾರ್ತಿ ಹಾಗೂ ಅವರಿಗೆ ಸಂಬಂಧಿಸಿದವರ ಕಚೇರಿ, ನಿವಾಸಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಐಎನ್‌ಎಕ್ಸ್‌ ಮೀಡಿಯಾ ಡೀಲ್‌ಗೆ ಸಂಬಂಧಿಸಿದ ಮತ್ತೂಂದು ಪ್ರಕರಣದಲ್ಲೂ ಕಾರ್ತಿ ಅವರು ತನಿಖೆ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next