Advertisement
ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಲೋಕಸಭಾ ಚುನಾವಣೆಗೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಯುವ ಜನರ ಗಮನ ಮತದಾನದತ್ತ ಕೇಂದ್ರೀಕರಿಸುವಲ್ಲಿ ಯಶಸ್ವಿಯಾಗಿದೆ. ಸರಕಾರಿ ಹಾಗೂ ಖಾಸಗಿ ಕಂಪೆನಿಗಳೆಲ್ಲ ರಜೆ ಘೋಷಿಸಿರುವುದರಿಂದ ಮತದಾರರು ಮತಗಟ್ಟೆಯತ್ತ ದೌಡಾಯಿಸಿದ್ದರು.
ಯುವಜನತೆ ಮತ ಚಲಾಯಿಸಿದ ಸಂಭ್ರಮವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಾನೊಬ್ಬ ಭಾರತೀಯ ಹೆಮ್ಮೆಯ ಪ್ರಜೆ, ನಾನು ನನ್ನ ಹಕ್ಕು, ಕರ್ತವ್ಯ ಎರಡನ್ನೂ ಪ್ರಾಮಾಣಿಕವಾಗಿ ಚಲಾಯಿಸಿದ್ದೇನೆ ಎಂದು ಫೇಸ್‌ಬುಕ್ ಇನ್‌ಸ್ಟಾ ಗ್ರಾಂ ಲೈವ್ ಮೂಲಕ ಅನುಭವ ಹಂಚಿಕೊಂಡಿದ್ದಾರೆ. ಶೇ. 60ರಷ್ಟು ಮತದಾರರು ಬೆರಳಿಗೆ ಹಾಕಿದ ಶಾಯಿ ಗುರುತನ್ನು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುವ ಮೂಲಕ ಇತರರನ್ನು ಮತದಾನ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿತ್ತು.
Related Articles
ಯುವ ಜನತೆ ಜಾಗೃತವಾಗಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಳವಾಗಲು ಸಾಮಾಜಿಕ ಜಾಲತಾಣ ಕೂಡ ಒಂದು ಮುಖ್ಯ ಕಾರಣವಾಗಿದೆ. ಜತೆಗೆ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳಲ್ಲಿ ಕೈಗೊಂಡ ಜಾಗೃತಿ ಅಭಿಯಾನದ ಪಾತ್ರವೂ ಸಹ ಗಮನಾರ್ಹವಾಗಿದೆ.
Advertisement
ಅರಿವು ಮೂಡಿಸಬಲ್ಲ ತಾಣಸಾಮಾಜಿಕ ಜಾಲತಾಣಗಳು ಕೇವಲ ಮೋಜಿನ ತಾಣಗಳಾಗಿ ಉಳಿದಿಲ್ಲ, ಇದೀಗ ಸುಶಿಕ್ಷಿತರಲ್ಲಿ ಅರಿವು ಮೂಡಿಸಬಲ್ಲ ತಾಣವಾಗಿ ಪರಿವರ್ತನೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಸ್ಪರ್ಧೆ
ಕೊನೆ ಪಕ್ಷ ಮತದಾರರು ಬಹುಮಾನಕ್ಕಾಗಿ ಮತದಾನ ಮಾಡಲಿ ಎಂಬ ಆಶಯದಲ್ಲಿ ಕೆಲವೊಂದು ಫೇಸ್ ಬುಕ್ ಪೇಜ್‌ಗಳು ಸೆಲ್ಫಿ ವಿತ್ ವೋಟೆಡ್ ಫಿಂಗರ್ ಎಂಬ ಸ್ಪರ್ಧೆಯನ್ನು ಏರ್ಪಡಿಸಿವೆ. ಕೆಲವು ಸಾಲುಗಳು
ನಾನು ಮತದಾನದ ಹಕ್ಕನ್ನು ಚಲಾಯಿಸಿದೆ. ನೀವು? ಪ್ರತಿಯೊಬ್ಬ ಮತದಾರ, ದೇಶದೊಳಗಿನ ಯೋಧನೇ, ದಯಮಾಡಿ ಪ್ರತಿಯೊಬ್ಬರೂ ಯೋಗ್ಯರಿಗೆ ಮತ ಹಾಕಿ. ನನ್ನ ಮತ ಅಭಿವೃದ್ಧಿ ಹರಿಕಾರನಿಗೆ, ಕುಂಟು ನೆಪ ಬೇಡ ಬಂದು ಮತ ಹಾಕಿ, ಮತದಾನ ನನ್ನ ಹಕ್ಕು, ಮತದಾನ ಮಾಡವರಿಗೆ ದೇಶದ ಬಗ್ಗೆ ಮಾತನಾಡುವ ಹಕ್ಕು ಇಲ್ಲ… ಹೀಗೆ ನೂರಾರು ಸಂದೇಶಗಳು ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ವಾಲ್‌ನಲ್ಲಿ ಇತ್ತು.