Advertisement

ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ಜನೌಷಧ ಮಾರಾಟ

12:11 PM Mar 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ 131 ಕೋಟಿ ಮೌಲ್ಯದ ಜನೌಷಧ ಮಾರಾಟ ಆಗಿದ್ದು, ಇದರಿಂದ ಜನರಿಗೆ ಸುಮಾರು 800 ಕೋಟಿ ರೂ. ಉಳಿತಾಯ ಆಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.

Advertisement

ದೇಶಾದ್ಯಂತ ಸೋಮವಾರ ಆರಂಭಗೊಂಡ ಜನೌಷಧಿ ಸಪ್ತಾಹದಲ್ಲಿಮಾತನಾಡಿದ ಅವರು, ಸಾಮಾನ್ಯರಿಗೆಕೈಗೆಟಕುವ ದರದಲ್ಲಿ ಗುಣಮಟ್ಟದಆರೋಗ್ಯ ಸೇವೆಯನ್ನು ಲಭ್ಯವಾಗಿಸಬೇಕು ಎಂಬಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು (ಪಿಎಂಬಿಜೆಪಿ) ರೂಪಿಸಿದ್ದು, ವೈದ್ಯರು ಜನೌಷಧಿಯನ್ನೇ ಶಿಫಾರಸುಮಾಡಿ ಔಷಧ ಚೀಟಿ ಬರೆದುಕೊಡುವಂತೆ ಸಲಹೆ ಮಾಡಿದರು.

ಉಳಿದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಅತಿಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಸದ್ಯ 865 ಜನೌಷಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಜನೌಷಧಿ ಮಾರಾಟ ಕೂಡ ಹೊಸದಾಖಲೆ ಬರೆದಿದೆ. ಕರ್ನಾಟಕದಲ್ಲಿ 2020-21ನೇಸಾಲಿಗೆ 125 ಕೋಟಿ ರೂಪಾಯಿ ಮಾರಾಟದಗುರಿ ನೀಡಲಾಗಿತ್ತು. ಇನ್ನೂ ಒಂದು ತಿಂಗಳು ಬಾಕಿಇರುವಾಗಲೇ ಅಂದರೆ ಫೆಬ್ರವರಿ ಅಂತ್ಯಕ್ಕೆ 131 ಕೋಟಿ ರೂಪಾಯಿಜನೌಷಧಿ ಮಾರಾಟವಾಗಿದೆ. ಇದರಿಂದರಾಜ್ಯದ ಜನರಿಗೆ ಸುಮಾರು 800ಕೋಟಿ ರೂಪಾಯಿ ಉಳಿತಾಯವಾಗಿದೆ.ರಾಜ್ಯ ದಲ್ಲಿ 2018-19ರಲ್ಲಿ 68.3 ಕೋಟಿ ರೂ ಹಾಗೂ 2019-20ರಲ್ಲಿ 94.2 ಕೋಟಿ ರೂ ಮೌಲ್ಯದ ಜನೌಷಧಿ ಮಾರಾಟವಾಗಿತ್ತು ಎಂದು ಮಾಹಿತಿ ನೀಡಿದರು.

586 ಕೋಟಿ ರೂ. ಜನೌಷಧ ಮಾರಾಟ: ರಾಜ್ಯದಲ್ಲಿ 92.8 ಲಕ್ಷ ಸುವಿಧಾ ಪ್ಯಾಡ್‌ಗಳುಮಾರಾಟ ಆಗಿವೆ ಎಂದು ಮಾಹಿತಿ ನೀಡಿದ ಸಚಿವರು, ಪ್ರಸಕ್ತ ಸಾಲಿನಲ್ಲಿ ಇದುವರೆಗೆ ದೇಶಾದ್ಯಂತ 586.5 ಕೋಟಿ ಮೌಲ್ಯದ ಜನೌಷಧ ಮಾರಾಟವಾಗಿದ್ದು, ಇದರಿಂದ ಸಾಮಾನ್ಯರಿಗೆ ಸರಿ ಸುಮಾರು 3,500 ಕೋಟಿ ರೂ. ಉಳಿತಾಯವಾಗಿದೆ ಎಂದೂ ಹೇಳಿದರು.

ಜನೌಷಧಿಯ ದರ ಕಡಿಮೆ ಎಂದಾಕ್ಷಣ ಗುಣ ಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಔಷಧ ಗುಣ ಮಟ್ಟದ ಎಲ್ಲ ಮಾನದಂಡಗಳೂ ಜನೌಷಧಗಳಿಗೆಅನ್ವಯವಾಗುತ್ತವೆ. ಕಳೆದ ಸಾಲಿನಲ್ಲಿ (2019-20ರಲ್ಲಿ) 433.6 ಕೋಟಿ ರೂಪಾಯಿ ಜನೌಷಧಮಾರಾಟ ಮಾಡಲಾಗಿತ್ತು. ಇದರಿಂದ ಜನರಿಗೆಸುಮಾರು 2,500 ಕೋಟಿ ರೂಪಾಯಿಉಳಿತಾಯ ವಾ ಗಿತ್ತು. ಈ ವರ್ಷ 586.5 ಕೋಟಿಮೌಲ್ಯದ ಜನೌಷಧ ಮಾರಾಟವಾಗಿದೆ ಎಂದು ಹೇಳಿದರು.

Advertisement

ಜನೌಷಧಿ ಅಂಗಡಿಗಳ ಮೂಲಕ ಮಹಿಳೆಯರಅನುಕೂಲಕ್ಕಾಗಿ ಕೇವಲ ಒಂದು ರೂಪಾಯಿಗೆ”ಸುವಿಧಾ’ ಹೆಸರಿನ ಸ್ಯಾನಿಟರಿ ಪ್ಯಾಡ್‌ ಮಾರಾಟ ಮಾಡಲಾಗುತ್ತಿದೆ (ಬ್ರ್ಯಾಂಡೆಡ್‌ ಸ್ಯಾನಿಟರಿ ಪ್ಯಾಡ್‌ ಬೆಲೆ 4ರಿಂದ 5 ರೂಪಾಯಿ). ಈ ವರ್ಷ 10.76 ಕೋಟಿ “ಸುವಿಧಾ’ ಸ್ಯಾನಿಟರಿ ಪ್ಯಾಡ್‌ಗಳನ್ನು ಮಾರಾಟ ಮಾಡಲಾಗಿದೆ.

ಪ್ರಧಾನಿ-ಅಂಗಡಿ ಮಾಲಿಕರ ಸಂವಾದ :

ಸಪ್ತಾಹದ ಕೊನೆಯದಿನ ಅಂದರೆ ಮಾರ್ಚ್‌ 7ರಂದು ಪ್ರಧಾನಿ ನರೇಂದ್ರ ಮೋದಿ ಜನೌಷಧಿ ಅಂಗಡಿ ಮಾಲಿಕರು ಹಾಗೂ ಫ‌ಲಾನುಭವಿಗಳಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ದೆಹಲಿಯಲ್ಲಿ ಅಂದುಸಚಿವ ಸದಾನಂದಗೌಡರು ಜನೌಷಧಿ ವಲಯದ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next