Advertisement

9 ತಿಂಗಳಲ್ಲೇ ಗರಿಷ್ಠ ಕೈಗಾರಿಕೋತ್ಪಾದನೆ;ಶೇ.4.3ಕ್ಕೆ ಏರಿಕೆ 

10:18 AM Oct 13, 2017 | |

ಹೊಸದಿಲ್ಲಿ: ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ ಎಂಬ ವಾದಗಳ ನಡುವೆ ಕೈಗಾರಿಕಾ ಕ್ಷೇತ್ರದ ಉತ್ಪಾದನೆ 9 ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.4.3ಕ್ಕೆ  ಏರಿಕೆ ಯಾಗಿದೆ. ಆಗಸ್ಟ್‌ಗೆ ಮುಕ್ತಾಯವಾದ ತಿಂಗಳಿಗೆ ಸಂಬಂಧಿಸಿ ಈ ದಾಖಲೆ ಯಾಗಿದೆ. 

Advertisement

ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಶೇ.5.7ರಷ್ಟು ಇಳಿಕೆಯಾಗಿದ್ದರ ಹೊರತಾ ಗಿಯೂ ಕೈಗಾರಿಕಾ ಉತ್ಪಾದನೆ ವೇಗ ಕಾಯ್ದುಕೊಂಡಿದೆ. ಮತ್ತೂಂದೆಡೆ ಹಣದುಬ್ಬರ ದರ ಶೇ.3.28ರಲ್ಲಿಯೇ ಸ್ಥಿರತೆ ಕಾಯ್ದು ಕೊಂಡಿದೆ.  ಕಳವಳಕಾರಿ ಅಂಶವೆಂದರೆ ಉತ್ಪಾದನಾ ಕ್ಷೇತ್ರದಲ್ಲಿ 2016ರ ಆಗಸ್ಟ್‌ನಲ್ಲಿದ್ದ ಬೆಳವಣಿಗೆ ಪ್ರಮಾಣ ಶೇ.5.5 ಇದ್ದದ್ದು ಹಾಲಿ ವರ್ಷ ಶೇ.3.1ಕ್ಕೆ ಇಳಿಕೆಯಾಗಿದೆ. ಹಣದುಬ್ಬರ ಏರಿಕೆಯಾಗಲಿದೆ ಎಂಬ ಕಾರಣ ಮುಂದಿಟ್ಟು ಇತ್ತೀಚೆಗೆ ಆರ್‌ಬಿಐ ಕೂಡ ಬಡ್ಡಿ ದರದಲ್ಲಿ  ಬದಲಾವಣೆ ಮಾಡಿರಲಿಲ್ಲ.

ಸೆನ್ಸೆಕ್ಸ್‌ ಏರಿಕೆ: ಕೈಗಾರಿಕಾ ಉತ್ಪಾದನೆ ಏರಿಕೆ ಹಾಗೂ ಅಮೆರಿಕ ಬಡ್ಡಿ ದರ ಏರಿಕೆ ಮಾಡಿ ರುವ ಕಾರಣ, ಸೆನ್ಸೆಕ್ಸ್‌ ಗುರುವಾರ 348 ಅಂಕ ಏರಿಕೆ ಕಂಡಿದೆ. ನಿಫ್ಟಿ 111 ಅಂಕ ಏರಿಕೆ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next