Advertisement
ಬಾಳೆ, ಪಪ್ಪಾಯ, ಅಂಜೂರ, ಕಲ್ಲಂಗಡಿ ಮತ್ತು ಕರಬೂಜ, ತರಕಾರಿ ಬೆಳೆಗಳಾದ ಟೊಮೆಟೊ, ಹಸಿ ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಗುಂಬಳ, ಬೂದುಗುಂಬಳ, ಗಜ್ಜರಿ, ಈರುಳ್ಳಿ ಮತ್ತು ಡೊಣ್ಣಮೆಣಸಿನಕಾಯಿ ಬೆಳೆದ ರೈತರು ಇದರ ಸದುಪಯೋಗ ಪಡೆಯಬಹುದು. 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆ ಸಮೀಕ್ಷೆ ಆಧಾರದ ಮೇಲೆ ಫಲಾನುಭವಿಯ ಆಯ್ಕೆ ಮಾಡಲಾಗುವುದು. ಬಾಳೆ ಹಾಗೂ ಈರುಳ್ಳಿ ಬೆಳೆಗೆ ಸಂಬಂಧಿಸಿದಂತೆ ಮಾರ್ಚ್ 2ನೇ ವಾರದ ನಂತರ ಕಟಾವಿಗೆ ಖರೀದಿಸುವ ಫಸಲಿಗೆ ಮಾತ್ರ ಪರಿಹಾರ ನೀಡಲಾಗುವುದು. ಕಲ್ಲಂಗಡಿ ಮತ್ತು ಕರಬೂಜಗಳು ಬೇಸಿಗೆ ಬೆಳೆಯಾಗಿದ್ದು, ಬೆಳೆ ಸಮೀಕ್ಷೆಯಲ್ಲಿ ಇವು ನಮೂದು ಆಗಿರದಿದ್ದರೆ, ನಿಗದಿತ ಅರ್ಜಿ ಜತೆಗೆ 2 ಫೋಟೋ, ಹೊಲದ ಉತಾರ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ್ ಪ್ರತಿ ಹಾಗೂ ಜಂಟಿ ಖಾತೆ ಇದ್ದಲ್ಲಿ ಮಾತ್ರ 20 ರೂ. ಬಾಂಡ್ ಪೇಪರ್ ನಲ್ಲಿ ನೋಟರಿ ಅವರಿಂದ ದೃಢೀಕರಿಸಿದ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಜೂನ್ 20 ಅಂತಿಮ ದಿನವಾಗಿದೆ. ಹೀಗೆ ಸಲ್ಲಿಸಿದ ಅರ್ಜಿಗಳನ್ನು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ಕಚೇರಿ ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಿಜಯ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Advertisement
ತೋಟಗಾರಿಕಾ ಬೆಳೆಗಾರರಿಗೆ ಗರಿಷ್ಠ 15 ಸಾವಿರ ಪರಿಹಾರ
11:00 AM Jun 10, 2020 | Suhan S |
Advertisement
Udayavani is now on Telegram. Click here to join our channel and stay updated with the latest news.