ಮಂಗಳೂರು: ಭಾರತದ ಪ್ರಮುಖ ಫ್ಯಾಶನ್ ಬ್ರ್ಯಾಂಡ್ ಮ್ಯಾಕ್ಸ್ ಸಾದರ ಪಡಿಸುತ್ತಿರುವ ಪುಟಾಣಿಗಳ ಪ್ರತಿಭಾನ್ವೇಷಣೆ ಸ್ಪರ್ಧೆ
‘ಮ್ಯಾಕ್ಸ್ ಲಿಟ್ಲ್ ಐಕಾನ್ 2017’ ನಗರದ ಸಿಟಿಸೆಂಟರ್‌ನಲ್ಲಿ ನಡೆಯುತ್ತಿದೆ.
ನೋಂದಣಿ ಹೇಗೆ ?
ಮ್ಯಾಕ್ಸ್ ಲಿಟ್ಲ ಐಕಾನ್ ಸ್ಪರ್ಧೆಗೆ ಸ್ಪರ್ಧಿಗಳ ನೋಂದಣಿಗೆ ಚಾಲನೆ ನೀಡಲಾಗಿದ್ದು,2 ರಿಂದ 8 ವರ್ಷದ ಒಳಗಿನ ನಿಮ್ಮ ಮಕ್ಕಳು ಸ್ಪರ್ಧಿಸಬಹುದಾಗಿದೆ. ಎಲ್ಲ ಮ್ಯಾಕ್ಸ್ ಮಳಿಗೆಗಳಲ್ಲಿ ನೋಂದಣಿ ಮಾಡಬಹುದಾಗಿದ್ದು, ಹಾಡುಗಾರಿಕೆ, ನೃತ್ಯ, ಫ್ಯಾನ್ಸಿಡ್ರೆಸ್, ಚಿತ್ರಕಲೆ ಮುಂತಾದ ಚಟುವಟಿಕೆಗಳು ಒಳಗೊಂಡಿವೆ.
ಸ್ಪರ್ಧೆಯ ಆಡಿಶನ್ ಎ. 30ರಂದು ಫೋರಂ ಫಿಜಾಮಾಲ್‌ನಲ್ಲಿ ಜರಗಲಿದ್ದು, ಇದರಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಅಂತಿಮ ಸುತ್ತಿನ ಪಂದ್ಯ ಮೇ 7ರಂದು ಫೋರಂ ಫಿಜಾಮಾಲ್‌ನಲ್ಲಿ ನಡೆಯಲಿರುವುದು. ವಿಜೇತರನ್ನು ನಗರದಾದ್ಯಂತ ಹೋರ್ಡಿಂಗ್‌ಗಳಲ್ಲಿ ಪ್ರದರ್ಶಿಸಲಾಗುವುದು. ಆಸಕ್ತ ಪುಟಾಣಿಗಳ ಹೆಸರನ್ನು //mkf.maxfashionindia.com/ ನಲ್ಲೂ ನೋಂದಾಯಿಸಬಹುದು.
ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರಕಾಶಕ್ಕೆ ತಂದು ಅವರಿಗೆ ಉಜ್ವಲ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಸ್ಪರ್ಧೆ ಕಳೆದ 2 ವರ್ಷಗಳಿಂದ ಆಯೋಜನೆಗೊಳ್ಳುತ್ತಿದೆ. ನಿಸರ್ಗ ಪಬ್ಲಿಸಿಟಿ ಸಂಸ್ಥೆ ಇವೆಂಟ್ ಸಂಘಟಿಸಿತ್ತು.
ಮ್ಯಾಕ್ಸ್ ನಗರದಲ್ಲಿ 2 ಶೋರೂಂಗಳನ್ನು ಹೊಂದಿದ್ದು ಜನಪ್ರಿಯವಾಗಿದೆ. ಮಕ್ಕಳ ಬೇಸಗೆ ಉಡುಪುಗಳ ವಿಸ್ತೃತ ಸಂಗ್ರಹ ಇಲ್ಲಿದೆ. ಹೆಣ್ಮಕ್ಕಳ, ಗಂಡುಮಕ್ಕಳ ವಿವಿಧ ವಿನ್ಯಾಸಗಳ ಉಡುಪುಗಳು ಇಲ್ಲಿ ಲಭ್ಯವಿದೆ. ಇದಲ್ಲದೆ ಇತರ ಅತ್ಯಾಧುನಿಕ ಆಕರ್ಷಕ ವಿನ್ಯಾಸಗಳ ಉಡುಪುಗಳು, ಪೂರಕ ಸಾಮಗ್ರಿಗಳು ಸೇರಿದಂತೆ ಇಡೀ ಕುಟುಂಬದ ಆಯ್ಕೆಗೆ ತಕ್ಕಂತೆ ಶಾಪಿಂಗ್ ಮಾಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಸ್ಪರ್ಧೆಗೆ ಮ್ಯಾಕ್ಸ್ ಶೋರೂಂನಲ್ಲಿ ಡ್ರಾಮಾ ಜೂನಿಯರ್ ವಿಜೇತೆ ಚಿತ್ರಾಲಿ ಅವರು ಲಾಂಛನವನ್ನು ಬಿಡುಗಡೆಗೊಳಿಸಿ ಮಂಗಳವಾರ ಚಾಲನೆ ನೀಡಿದರು. ತುಳುಚಲನಚಿತ್ರ ನಟ ಪೃಥ್ವಿ ಅಂಬರ್ ಹಾಗೂ ನಟಿ ಶ್ರುತಿ ಕೋಟ್ಯಾನ್ ಅತಿಥಿಗಳಾಗಿದ್ದರು. ಮ್ಯಾಕ್ಸ್ ಶೋರೂಂನ ಕೃಷ್ಣ ಉಪಸ್ಥಿತರಿದ್ದರು.