ಮಂಗಳೂರು: ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸ್ಲಿಪರ್ ಹಾಗೂ ಎಸಿ ಕೋಚ್ ಸೇರ್ಪಡೆ ಮಾಡಲಾಗುವುದು.
ಮೇ 18 ಹಾಗೂ 20ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ನಂ. 16603 ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸ್ಲಿಪರ್ ಕೋಚ್ ಒದಗಿಸಲಾಗುವುದು. ಮೇ 21ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಾವೇಲಿ ಎಕ್ಸ್ ಪ್ರಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ 3ಟೈಯರ್ ಕೋಚ್, ಮೇ 19, 21ರಂದು ತಿರುವನಂತಪುರ ಸೆಂಟ್ರಲ್‌ನಿಂದ ಹೊರಡುವ ನಂ. 16604 ಮಾವೇಲಿ ಎಕ್ಸ್‌ಪ್ರೆಸ್‌ಗೆ ಒಂದು ಹೆಚ್ಚುವರಿ ಸ್ಲಿಪರ್ ಕೋಚ್ ಹಾಗೂ ಮೇ 22ರಂದು ತಿರುವನಂತಪುರದಿಂದ ಹೊರಡುವ ಮಾವೇಲಿ ಎಕ್ಸ್‌ಪ್ರೆಸ್‌ಗೆ ಒಂದು ಹೆಚ್ಚುವರಿ 3 ಟೈಯರ್ ಕೋಚ್ ಒದಗಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.