Advertisement

ಮಾವೇಲಿ ಎಕ್ಸ್‌ಪ್ರೆಸ್‌ ರೈಲು  ಈಗ “ಉತ್ಕೃಷ್ಟ’!

01:00 AM Feb 06, 2019 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌-ತಿರುವನಂತಪುರ ನಡುವೆ ಸಂಚರಿಸುತ್ತಿರುವ‌ ಜನಪ್ರಿಯ “ಮಾವೇಲಿ ಎಕ್ಸ್‌ಪ್ರೆಸ್‌ ರೈಲು (16603)’ ತನ್ನ ಎಲ್ಲ ಕೋಚ್‌ಗಳ ನೀಲಿ ಬಣ್ಣವನ್ನು ಬದಲಿಸಿ, ಏಪ್ರಿಕಾಟ್‌ ಹಾಗೂ ಕೆಂಪು ಬಣ್ಣದ ಹೊಸ ರೂಪದೊಂದಿಗೆ ಮಂಗಳವಾರದಿಂದ ಸಂಚಾರ ಪ್ರಾರಂಭಿಸಿದೆ. 

Advertisement

ಕೇಂದ್ರ ರೈಲ್ವೇ ಇಲಾಖೆಯ “ಉತ್ಕೃಷ್ಟ ಯೋಜನೆ’ಯಡಿ ಮಂಗಳೂರು ಸೆಂಟ್ರಲ್‌ನಿಂದ ಸಂಚಾರ ಆರಂಭಿಸಿದ ಮೊದಲ ರೈಲು ಇದಾಗಿದ್ದು, ಮಂಗಳವಾರ ಸಂಜೆ ಚಾಲನೆ ನೀಡಲಾಯಿತು. ವಿಭಿನ್ನ ಬಣ್ಣ,ಅದ್ದೂರಿ ಮಾದರಿಯ ಒಳಾಂಗಣ ವಿನ್ಯಾಸವನ್ನು ಹೋಲುವ ಈ ರೈಲು ಪಾಲಕ್ಕಾಡ್‌ ವಿಭಾಗದಲ್ಲಿ ಆರಂಭಗೊಂಡ ಮೊದಲ ರೈಲು ಎಂಬ ಮಾನ್ಯತೆಗೆ ಪಡೆದುಕೊಂಡಿದೆ.

ಮಂಗಳವಾರ ಸಂಜೆ 5.45ಕ್ಕೆ ಮಂಗಳೂರಿನಿಂದ ಹೊರಟ ಈ ರೈಲು ಬುಧವಾರ ತಿರುವನಂತಪುರ ತಲುಪಿ, ಸಂಜೆ ಅಲ್ಲಿಂದ ಹೊರಟು, ಗುರುವಾರ ಮಂಗಳೂರಿಗೆ ವಾಪಸಾಗಲಿದೆ.

ಉತ್ಕೃಷ್ಟ ಯೋಜನೆಯಡಿ ರೈಲು ಸೇವೆಯನ್ನು ಮೇಲ್ದರ್ಜೆಗೇರಿಸುವುದು ರೈಲ್ವೇ ಇಲಾಖೆಯ ಉದ್ದೇಶ. ದೇಶದ 66 ಎಕ್ಸ್‌ಪ್ರೆಸ್‌ ರೈಲಿನ 144 ಬೋಗಿಗಳು ಮೇಲ್ದರ್ಜೆಗೇರಲಿವೆ. ಒಂದೊಂದು ರೈಲಿಗೆ ಇದಕ್ಕಾಗಿ ಸುಮಾರು 60 ಲಕ್ಷ ರೂ. ಖರ್ಚು ಮಾಡಲಾಗುತ್ತದೆ.

ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳಾದ ಬಿ. ವೇಣುಗೋಪಾಲ್‌, ರಾಜೇಶ್‌ ಕುಮಾರ್‌, ಡಾ|ಶಿವಶಂಕರ ಮೂರ್ತಿ, ಕೆ.ವಿ. ಶ್ರೀಧರನ್‌, ರಾಮಕುಮಾರ್‌ ಎಂ, ಪಿ. ಸುರೇಶನ್‌, ಕಿಶನ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

23 ಬೋಗಿಗಳು ಕಲರ್‌ಫುಲ್‌ !
ಮಾವೇಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಒಟ್ಟು 23 ಬೋಗಿಗಳಿದ್ದು, ಇವೆಲ್ಲವೂ ಏಪ್ರಿಕಾಟ್‌ ಹಾಗೂ ಕೆಂಪು ಬಣ್ಣದ ಹೊರಾಂಗಣ ಬಣ್ಣವನ್ನು ಹೊಂದಿವೆ. ಈ ಕೋಚ್‌ಗಳನ್ನು ಚೆನ್ನೈಯಲ್ಲಿ  ಸಿದ್ಧಪಡಿಸಲಾಗಿದ್ದು, ಮಂಗಳವಾರ ಬೆಳಗ್ಗೆ ಮಂಗಳೂರಿಗೆ ತರಿಸಿ ಎಸ್‌ಎಲ್‌ಆರ್‌ಗೆ ಜೋಡಿಸಲಾಗಿದೆ. 4 ಎಸಿ 3 ಟಯರ್‌, 1 ಎಸಿ 2 ಟಯರ್‌, 11 ಸ್ಲಿàಪರ್‌ಗಳನ್ನು ಈ ರೈಲು ಒಳಗೊಂಡಿದೆ.

“ಉತ್ಕೃಷ್ಟ’ ರೈಲು ಹೀಗಿದೆ ರೈಲಿನಲ್ಲಿ ಎಲ್‌ಇಡಿ ದೀಪಗಳನ್ನು ಬಳಸಲಾಗಿದೆ. ಪ್ರಯಾಣಿಕರಿಗೆ ಸೀಟ್‌ ನಂಬರ್‌ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಇಂಡಿಕೇಟರ್‌ ವ್ಯವಸ್ಥೆ ಮಾಡಲಾಗಿದೆ. ರೈಲಿನ ಒಳಾಂಗಣವನ್ನು ಸುಂದರಗೊಳಿಸಲಾಗಿದೆ. ಜೈವಿಕ ಶೌಚಾಲಯವನ್ನು ಇದರಲ್ಲಿ ಪರಿಚಯಿಸಲಾಗಿದೆ. ಇಂಡಿಯನ್‌ ಹಾಗೂ
ಫಾರಿನ್‌ ಮಾದರಿಯ ಶೌಚಾಲಯ ವ್ಯವಸ್ಥೆಯಿದೆ. ಪ್ರತೀ ಬೋಗಿಯ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಸಂಬಂಧಿಸಿ ಕಾರ್ಮಿಕರನ್ನು ನೇಮಿಸಲಾಗಿದೆ. ಪ್ರತೀ ಎರಡು ಗಂಟೆಗೊಮ್ಮೆ ಸ್ವತ್ಛತೆ ನಡೆಸುವವರು ಇಲ್ಲಿ ಸೇವೆಯಲ್ಲಿರುತ್ತಾರೆ. ಎಲ್ಲ ಬೋಗಿಯ ಶೌಚಾಲಯದ ಪಕ್ಕದಲ್ಲಿಯೇ ಕಸ ಹಾಕುವ ಡಬ್ಬದ ವ್ಯವಸ್ಥೆಯನ್ನು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next